Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label Dasara/Navaratri. Show all posts
Showing posts with label Dasara/Navaratri. Show all posts

October 1, 2014

Ayudha Pooja / Maha Navami / Vijaya Dashami / ಮಹಾನವಮಿ / ಆಯುಧ ಪೂಜೆ / ವಿಜಯದಶಮಿ

ಮಹಾ ನವಮಿ ಅಥವಾ ಆಯುಧ ಪೂಜೆ ಹಬ್ಬವನ್ನು ನವರಾತ್ರಿಯ ಒಂಭತ್ತನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು. ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.

ಈಗಿನ ಕಾಲದಲ್ಲಿ ಮನೆಗಳಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು, ವಾಹನಗಳಿಗೆಲ್ಲ ಪೂಜೆ ಮಾಡುತ್ತಾರೆ. ಕಾರ್ಖಾನೆ,ಉದ್ದಿಮೆ, ಕಛೇರಿ ಎಲ್ಲಾ ಕಡೆ ಅಲ್ಲಿ ಉಪಯೋಗಿಸುವ ಯಂತ್ರಗಳೂ, ಉಪಕರಣಗಳಿಗೆ ಪೂಜೆ ಮಾಡುತ್ತಾರೆ, ಅವುಗಳನ್ನು ಈ ದಿನ ಉಪಯೊಗಿಸುವುದಿಲ್ಲ.

ಆಯುಧ ಪೂಜೆ 

ಈ ದಿನ ದೇವರ ಪೂಜೆಯ ಜೊತೆ ಆಯುಧಗಳಿಗೂ ಪೂಜೆ ಮಾಡಬೇಕು. ಮನೆಯಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು(ಚಾಕು,ಕತ್ತರಿ,ಇತ್ಯಾದಿ),ಯಂತ್ರೋಪಕರಣಗಳು/ಸಲಕರಣೆಗಳು (gadgets/machines - ಟಿ.ವಿ, ಕಂಪ್ಯೂಟರ್, ಒಲೆ, ಫ್ರಿಡ್ಜ್, ಇತ್ಯಾದಿ), ಮತ್ತು ವಾಹನಗಳು (ಕಾರ್, ಸ್ಕೂಟರ್, ಸೈಕಲ್, ಇತ್ಯಾದಿ) - ಇವುಗಳನ್ನೆಲ್ಲ ಸ್ವಚ್ಛ ಮಾಡಿ ( ಒದ್ದೆ ಬಟ್ಟೆಯಿಂದ ಒರಸಿ/ನೀರಿನಿಂದ ತೊಳೆಯಿರಿ), ಅರಿಶಿನ ಕುಂಕುಮ ಹಚ್ಚಿ, ಹೂವು, ಗೆಜ್ಜೆವಸ್ತ್ರ ಹಾಕಿ, ಊದಿನ ಕಡ್ಡಿ ಹಚ್ಚಿ, ಮಂಗಳಾರತಿ ಮಾಡಿ. ನಾವು ವರ್ಷವೆಲ್ಲಾ ಈ ಉಪಕರಣಗಳಿಂದ ಉಪಯೋಗ ಪಡೆದಿರುತ್ತೇವೆ, ಇವತ್ತು ಅವುಗಳಿಗೆ, ಕೃತಜ್ಞತಾ ಭಾವದಿಂದ ಪೂಜೆ ಮಾಡಿ, ಮುಂದೆಯೂ ನಮಗೆ ಸಹಾಯ ಮಾಡಿ ಎಂದು ಪ್ರಾರ್ಥಿಸಿ.

ವಿಜಯ ದಶಮಿ
ನವರಾತ್ರಿಯ ಹತ್ತನೆಯ ದಿನ ವಿಜಯದಶಮಿ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮಿ ದಿನ. ಇದು ನವರಾತ್ರಿ ಹಬ್ಬದ ಕೊನೆಯ ದಿನ. ಈ ದಿನ ವಿಶೇಷತೆ ಶಮೀ ಪೂಜೆ. ಶಮೀ ವೃಕ್ಷಕ್ಕೆ ಬನ್ನಿ ಮರ ಅಂತ ಕರೆಯುತ್ತಾರೆ.(biological name: Prosopis cineraria) ಈ ಹಬ್ಬದ ಮಹತ್ವದ ಹಿಂದೆ ಕೆಲವು ಪುರಾಣ ಕಥೆಗಳಿವೆ.
ಬನ್ನಿ ಮರ
(photos taken from hereherehere and here.)

ಮಹಾಭಾರತದಲ್ಲಿ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮುನ್ನ ಶಮೀ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋದರು. ಒಂದು ವರ್ಷದ ಅಜ್ಞಾತ ವಾಸದ ನಂತರ ಬಚ್ಚಿಟ್ಟಿದ್ದ ಆಯುಧಗಳು ಶಮೀ ವೃಕ್ಷದಲ್ಲೇ ಜೋಪಾನವಾಗಿ ಇದ್ದವು. ತಮ್ಮ ಆಯುಧಗಳನ್ನು ಕಾಪಾಡಿದ ಶಮೀ ಮರಕ್ಕೆ ನಮಸ್ಕರಿಸಿ, ಕೌರವರ ಮೇಲೆ ಯುದ್ಧ ಮಾಡಲು ಹೋದರು ಮತ್ತು ಯುದ್ಧದಲ್ಲಿ ವಿಜಯ ಸಾಧಿಸಿದರು. ಆದ್ದರಿಂದ ವಿಜಯ ದಶಮಿಯ ದಿನ ಶಮೀ ಪೂಜೆ ಮಾಡುತ್ತರೆ, ಆ ದಿನ ಮಾಡಿದ ಎಲ್ಲಾ ಕಾರ್ಯಗಳಲ್ಲೂ ವಿಜಯ ದೊರಕುವುದು ಎಂಬ ನಂಬಿಕೆ.

ತ್ರೇತಾಯುಗದಲ್ಲಿ ಕೌಸ್ತ ಎಂಬ ವಿದ್ಯಾರ್ಥಿಯು ವಿದ್ಯಾಭ್ಯಾಸದ ನಂತರ ತನ್ನ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸಿದನು. ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳಿದನು. ಅಷ್ಟೊಂದು ನಾಣ್ಯವನ್ನು ಹೇಗೆ ಹೊಂದಿಸಲಿ ಎಂದು ಚಿಂತಿಸುತ್ತ ಕೌಸ್ತನು ರಘು ರಾಜನ ಬಳಿ ಬಂದನು. ರಾಜನು ಕುಬೇರನಿಗೆ ಪ್ರಾರ್ಥನೆ ಮಾಡಲು, ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾದವು. ಕೌಸ್ತನು ಸಂತಸದಿಂದ ನಾಣ್ಯಗಳನ್ನು ತೆಗೆದುಕೊಂಡು ಗುರುಗಳಿಗೆ ಗುರುದಕ್ಷಿಣೆ ಅರ್ಪಿಸಿದನು. ಉಳಿದ ನಾಣ್ಯಗಳನ್ನು ದಾನ ಮಾಡಿದನು ಎಂಬ ಕಥೆಯಿದೆ. ಹೀಗಾಗಿ ಶಮೀ ಪತ್ರೆಯು ಚಿನ್ನ/ನಿಧಿಯೆಂಬ ನಂಬಿಕೆ ಇದೆ.

ಶಮೀ ಪೂಜೆ ಮಾಡುವಾಗ ಕೆಳಗಿನ ಮಂತ್ರವನ್ನು ಹೇಳಬೇಕು.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರಿತ್ವಂ ಭವ ಶ್ರೀರಾಮಪೂಜಿತಾ ||


ಪೂಜೆಯ ನಂತರ ಶಮೀ ಎಲೆಗಳನ್ನು ಬಂಧುಗಳು - ಸ್ನೇಹಿತರ ಜೊತೆ ಹಂಚಿಕೊಳ್ಳುವ ಪ್ರತಿತಿ ಇದೆ. ಈ ಎಲೆಗಳನ್ನು ಎಲ್ಲಿ ಇಟ್ಟರೂ ಅಲ್ಲಿ ಹೊನ್ನಾಗುವುದು ಎನ್ನುತಾರೆ. ಮನೆಯಲ್ಲಿ ದುಡ್ಡು/ಆಭರಣ ಇಡುವ ಕಪಾಟಿನಲ್ಲಿ (locker/safe/bureau) ಎಲೆಗಳನ್ನು ಇಟ್ಟರೆ ಹೆಚ್ಚಿನ ಐಶ್ವರ್ಯ ಬರುತ್ತದೆ, ರೈತರು ಬನ್ನಿ ಎಲೆಗಳನ್ನು ತಮ್ಮ ಹೊಲ ಗದ್ದೆಗಳಿಗೆ ಹಾಕುತ್ತಾರೆ, ಇದರಿಂದ ಒಳ್ಳೆ ಬೆಳೆ ಬರುತ್ತದೆ ಎಂಬ ನಂಬಿಕೆ.

ವಿಜಯ ದಶಮಿಯ ಶುಭಕರವಾದ ದಿನ. ಯಾವುದೆ ಕೆಲಸ ಮಾಡಿದರು ಅದು ಯಶ್ವಿಯಾಗುವುದು ಎಂಬ ನಂಬಿಕೆ. ಹೀಗಾಗಿ ಈ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಹೊಸ ವ್ಯಾಪರ ಶುರು, ಹೊಸ ವಾಹನ, ಆಸ್ತಿ ಖರೀದಿ ಮಾಡುತ್ತಾರೆ.

ನವರಾತ್ರಿಯ ಬಾಕಿ ದಿನಗಳಂತೆ ವಿಜಯ ದಶಮಿಯ ದಿನ ಗೊಂಬೆಗಳಿಗೆ, ದೇವರಿಗೆ ಪೂಜೆ ಮಾಡುತ್ತಾರೆ. ರಾತ್ರಿ ಮಲಗುವ ಮುನ್ನ ಗೊಂಬೆಗಳಿಗೆ ಪುನಃ ನಮಸ್ಕರಿಸಿ ಪಟ್ಟದ ಗೊಂಬೆಗಳನ್ನು ಮಲಗಿಸುತ್ತಾರೆ. ಮಾರನೆಯ ದಿನ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಅಲ್ಲಿಗೆ ನವರಾತ್ರಿಯ ಆಚರಣೆ ಮುಕ್ತಾಯವಾಯಿತು.


ಈ ವಿಜಯ ದಶಮಿಯು ನಿಮ್ಮ ಎಲ್ಲ ಕಾರ್ಯಗಳಲ್ಲಿ ವಿಜಯ ಕೊಡಲಿ ಹಾಗು ದೇವಿಯು ನಿಮ್ಮೆಲ್ಲರನ್ನು ಕಾಪಾಡಲಿ.

September 25, 2009

Durgashtami Festival , Devi Suktam in Kannada / ದುರ್ಗಾಷ್ಟಮಿ ಹಬ್ಬ, ದೇವಿ ಸೂಕ್ತ

ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು
ದುರ್ಗಾಷ್ಟಮಿ ಹಬ್ಬವನ್ನು ನವರಾತ್ರಿಯ ೮ ನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ದಿನ. ದುರ್ಗಾ ದೇವಿಯ ಪಟವನ್ನು / ಮೂರುತಿಯನ್ನು ಇಟ್ಟು ಪೂಜೆ ಮಾಡಿ. ದೇವಿಯನ್ನು ಪೂಜಗೃಹದಲ್ಲಿ ಅಥವಾ ಇತರೆ ಗೊಂಬೆಗಳ ಜೊತೆ ಇಡಬಹುದು. ದೇವಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ದುರ್ಗಾ ಅಷ್ಟೂತ್ತರ ಇಲ್ಲಿದೆ. ದೇವಿಯ ಸ್ತೋತ್ರಗಳು, ಹಾಡು, ಭಜನೆ ಇಂದ ದೇವಿಯ ಧ್ಯಾನ ಮಾಡಿ. ಪೂಜೆಯ ನಂತರ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡುತ್ತಾರೆ.
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದು ತಂತ್ರೋಕ್ತ ದೇವಿ ಸೂಕ್ತ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.AudioLink - by Alka Yagnik Below

 


2.AudioLink - by Ravindra Sathe [song3]

 3.AudioLink - by Ashit Desai [song 12]

  ದುರ್ಗಾ ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)

August 27, 2009

Durga Saptashloki Stotra in Kannada / ದುರ್ಗಾ ಸಪ್ತಶ್ಲೋಕಿ ಸ್ತೋತ್ರ

ನವರಾತ್ರಿ ಹಬ್ಬ ಸಧ್ಯದಲ್ಲೇ ಬರುತ್ತಿದೆ. ಅದಕ್ಕಾಗಿ ದುರ್ಗಾದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ದುರ್ಗಾ ಸಪ್ತ ಶ್ಲೋಕಿ ಸ್ತೋತ್ರದಲ್ಲಿ ೭ ಸಾಲುಗಳಿವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio by Prakash Kaushik

2.Audio by Anuradha Paudwal below:

3.Audio link by Anuradha Paudwal
Link to Durga Saptashloki Stotra in Hindi and English

August 20, 2009

All Devi Stotras & Songs / ದೇವಿ ಸ್ತೋತ್ರಗಳು ಹಾಡುಗಳು




Listen to Devi Stotras Playlist - top of the sidebar on right


ಗೌರಿ ಹಬ್ಬ, ನಂತರ ನವರಾತ್ರಿ ಬರುತ್ತಾ ಇದೆ. ಅದಕ್ಕಾಗಿ ದೇವಿಯ ಎಲ್ಲ ಸ್ತೋತ್ರಗಳು, ಹಾಡುಗಳನ್ನು ಒಂದು ಕಡೆ ಸಂಗ್ರಹಿಸಿದ್ದೀನಿ.
List of All Devi Stotras & Songs . Click on the name to go to the respective link.



Stotras (lyrics + Audio)Kanakadhara Stotra
Durga AshtottaraMookambika Ashtakam
Tulasi AshtottaraDevi Stotras in English
Durga Kavachamaddnewstotra
RajaRajeshwari ashtakaaddnew
Durga Ashtottara ShatanamaSongs & Audio Links
Lalitha AshtottaraSongs on Lakshmi(with lyrics)
Gowri AshtottaraSongs on devi(with lyrics)
Saraswati AshtottaraSongs on Saraswathi(with lyrics)
Saraswati StotrasDurga Prarthana - Vol 1
Lakshmi AshtottaraDurga Prarthana - Vol 2
Mahalakshmi AshtakamDevi Sookta Maala
Devi NavaratnamalikaDevi Stotra Maala
Lalita SahasranamaLakshmi Sahasranama
Soundarya LahariLakshmi Shobane
Mahishasura Mardini StotraPooja sankalpam (Devi Songs)
Lalita Devi PancharatnaPooja Phalam (Devi Songs)
Durga Sapta Shloki StotraAyigiri Nandini (Devi Songs)
Durga PancharatnaDevi Mahatma - Vol 1
Devi SuktamDevi Mahatma - Vol 2
Lalita Trishati StotraDevi Mahatma - Vol 3
Ashtalakshmi StotraDurga Suprabhatam
Sri Suktam
Bhavani Ashtakam
Saraswati Dwadashanama
Devi Khadgamala Stotra

March 2, 2009

Mahishasura Mardini Stotra in Kannada / ಶ್ರೀ ಮಹಿಷಾಸುರ ಮರ್ದಿನಿ ಸ್ತೋತ್ರ

ದೇವಿ ಸ್ತೋತ್ರಗಳಲ್ಲಿ ಮಹಿಷಾಸುರ ಮರ್ದಿನೀ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರ ಮರ್ದಿನೀ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಹಿಷಾಸುರ ಮರ್ದಿನಿ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿದೆ:

1.AudioLink -
Bombay Sisters ಅವರ ಧ್ವನಿಯಲ್ಲಿ ಕೇಳಿ.

2.AudioLink - Chithra ಅವರ ಧ್ವನಿಯಲ್ಲಿ ಕೇಳಿ.

3.AudioLink by Balaji Tambe

October 6, 2008

Durga Ashtottara Shatanama Stotra / ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ

"ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು "
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ - ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ ಇಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .
ಶತನಾಮ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು -
1.Audio Link - by Ravindra Sathe

2.Another Audio Link

ದುರ್ಗಾ ಸ್ತೋತ್ರಗಳು :

Link to Durga Ashtottara Shatanama Stotra in Hindi and English



October 1, 2008

Saraswathi Pooja / Saraswathi Ashtottara in Kannada / ಸರಸ್ವತಿ ಅಷ್ಟೋತ್ತರ

ಸರಸ್ವತಿ ಪೂಜೆ/ಹಬ್ಬ ,ನವರಾತ್ರಿಯಲ್ಲಿ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಸರಸ್ವತಿಯು ವಿದ್ಯೆ, ಜ್ಞಾನ, ಸಂಗೀತ, ಸಾಹಿತ್ಯ ಎಲ್ಲದಕ್ಕೂ ಅಧಿದೇವತೆ. ಈ ದಿನ ಸರಸ್ವತಿ ದೇವಿಯ ಪಟ, ವಿಗ್ರಹದ ಜೊತೆಗೆ ವಿಧ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಪೆನ್ನು, ಪೆನ್ಸಿಲ್ಲು , ಇತ್ಯಾದಿಗಳನ್ನೂ, ಸಂಗೀತ ವಾದ್ಯಗಳನ್ನು ಇಟ್ಟು ಪೂಜೆ ಮಾಡಬೇಕು.
ಪೂಜಾ ವಿಧಾನ ಇಲ್ಲಿದೆ . ಸರಸ್ವತಿ ಸ್ತೋತ್ರಗಳು ಇಲ್ಲಿದೆ.

ಸರಸ್ವತಿ ಅಷ್ಟೋತ್ತರ ಕೆಳಗಿದೆ. ದೊಡ್ದದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

.
ಸರಸ್ವತಿ ಅಷ್ಟೊತ್ತರದ ಧ್ವನಿ ಮುದ್ರಣ ಇಲ್ಲಿ ಕೇಳಿ - Audio link of Ashtottara by Raghavan shastri - song 2

Audio link of Ashtottara by Another Artist


ಸರಸ್ವತಿ ಪೂಜೆಯನ್ನು ಬೇರೆ ದಿನಗಳಲ್ಲೂ ಮಾಡುತ್ತಾರೆ. ಉತ್ತರ ಭಾರತದಲ್ಲಿ ಮಾಘ ಮಾಸದ ಶುಕ್ಲ ಪಂಚಮಿ ದಿನ "ವಸಂತಪಂಚಮಿ " ಎಂದು ಸರಸ್ವತಿಯನ್ನು ಪೂಜೆ ಮಾಡುತ್ತಾರೆ. ಇದೇ ದಿನ ಶ್ರಿಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ನಡೆಯುತ್ತೆ. ಇದಲ್ಲದೇ ವಿದ್ಯಾರಂಭ ಮಾಡುವ ಮುನ್ನ ವಿದ್ಯಾ ಅಧಿದೇವತೆಯಾದ ಸರಸ್ವತಿಯನ್ನು ಧ್ಯಾನ ಮಾಡುತ್ತಾರೆ. ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಮುನ್ನ, ಪ್ರತಿ ವರ್ಷ ಶಾಲೆ ಶುರುವಾಗುವ ಮುನ್ನ, ಪರೀಕ್ಷೆಗೆ ಮುಂಚೆ, ಯಾವುದೇ ಹೊಸ ವಿದ್ಯೆಯನ್ನು(ಸಂಗೀತ, ನೃತ್ಯ, ವೇದಾಭ್ಯಾಸ, ಚಿತ್ರಕಲೆ) ಕಲಿಯುವ ಮುಂಚೆ ಸರಸ್ವತಿ ಆಶಿರ್ವಾದ ಪಡೆದುಕೊಂಡೇ ಮುಂದೆಹೋಗಬೇಕು.

ಸರಸ್ವತಿ ಮೇಲೆ ಹಾಡುಗಳು :
ಮಮವತು ಶ್ರೀ ಸರಸ್ವತಿ[song 2] ;
ಶ್ರೀ ಸರಸ್ವತಿ ನಮೋಸ್ತುತೆ
ಸರಸ್ವತಿ ದೇವಿಯು ಎಲ್ಲರಿಗೂ ವಿದ್ಯಾ ಬುದ್ಧಿ ಕೊಟ್ಟು ಕಾಪಾಡಲಿ :)
Related Links:
Sarasawthi Devi songs with lyrics at Bhakthigeetha.

September 30, 2008

Durga Ashtottara in Kannada / ಶ್ರೀ ದುರ್ಗಾ ಅಷ್ಟೋತ್ತರ

ದುರ್ಗಾಷ್ಟಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ದುರ್ಗಾ ಅಷ್ಟೋತ್ತರ ಇಲ್ಲಿದೆ.





ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link 1

Audio Link 2 by Rajagopalan Thiagarajan





September 28, 2008

Navaratri / Dasara / ನವರಾತ್ರಿ / ದಸರಾ ಹಬ್ಬ

"ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು"

ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ ಗೊಂಬೆ/ಬೊಂಬೆ ಹಬ್ಬ ಎಂದೂ ಹೆಸರಿದೆ.


ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ, ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು:
ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಶಮೀ/ ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ 1 ವರ್ಷ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕೌರವರನ್ನು ಯುದ್ಧದಲ್ಲಿ ಸೋಲಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ದಾನವ/ರಾಕ್ಷಸ/ದುಷ್ಟ ಶಕ್ತಿಯನ್ನು ದೇವಿ/ಶಿಷ್ಟ ಶಕ್ತಿ ನಾಶಗೊಳಿಸಿ ವಿಜಯವಾದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಕನ್ನಡಿಗರಿಗೆ ದಸರಾ ಎಂದರೆ ಇನ್ನಷ್ಟು ಹೆಮ್ಮೆ, ಇದು ನಮ್ಮ ನಾಡಹಬ್ಬ.ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಹಾಡು ಇರುವಂತೆ ನಮ್ಮ ಮೈಸೂರಿನ ದಸರಾ ಹಬ್ಬದ ಆಚರಣೆ ಜಗತ್ತಿನಲ್ಲೇ ಪ್ರಸಿದ್ದ. ವೊಡೆಯರ ಮನೆತನ ರಾಜರು ದಸರಾ ಹಬ್ಬವನ್ನು ವಿಜ್ರಂಬಣೆ ಇಂದ ಆಚರಸುತ್ತ ಬಂದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯ ಪೂಜೆಯಿಂದ ಪ್ರಾರಂಭ ಆಗುತ್ತೆ. ವಿಜಯದಶಮಿ ದಿನ ಚಾಮುಂಡಿ ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಆನೆಯ ಮೇಲೆ ಜಂಬೂ ಸವರಿ ಮಾಡುತ್ತಾರೆ. ದೊಡ್ಡ ಮೆರವಣಿಗೆ ಮಾಡಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡಿ ಕೊನೆಗೊಳ್ಳುತ್ತದೆ. ಈ ಹತ್ತು ದಿನ ಅರಮನೆಗೆ ದೀಪದಿಂದ ಅಲಂಕಾರ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಒಟ್ಟಿನಲ್ಲಿ ಮೈಸೂರು ದಸರಾದ ವೈಭವ ನೋಡಿದವರಿಗೇ ನೋಡಿದವರಿಗೇ ಗೊತ್ತು:)

ಮೈಸೂರಿಗೆ ಹೋಗಿ ದಸರಾ ನೋಡುವ ಆಸೆ ಇದ್ದರೆ, Mysoredasara.org ಅಲ್ಲಿ ಹೆಚ್ಚಿನ ಮಾಹಿತಿ ಇದೆ.



ಪಾಡ್ಯದ ದಿನ ದೇವಿಯ ಪಟದ ಜೊತೆ ಪಟ್ಟದ ಗೊಂಬೆ ಹಾಗು ಇತರೆ ಗೊಂಬೆಗಳನ್ನು ಇಟ್ಟು ಪೂಜೆ ಮಾಡಬೇಕು. ಪ್ರತಿ ದಿನ ದೇವಿಯನ್ನು ಧ್ಯಾನ ಮಾಡಬೇಕು.ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜೆ ಮಾಡುವ ವಿಧಾನ ಇಲ್ಲಿದೆ.
ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)

September 22, 2008

Durga Pancharatna Stotra in Kannada / ಶ್ರೀ ದುರ್ಗಾ ಪಂಚರತ್ನ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ಎಲ್ಲರಿಗೂ ಗೊತ್ತಿಲ್ಲದಿರಬಹುದು. ಇದನ್ನು ಜಗದ್ಗುರು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ರಚಿಸಿದ್ದಾರೆ. ಇದು ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.


ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link
ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.

May 23, 2008

Saraswati Stotra in Kannada / ಸರಸ್ವತಿ ಸ್ತೋತ್ರ (ಅಗಸ್ತ್ಯ ಮುನಿ ರಚನೆ)

Popular Saraswathi Shlokas in kannada

ಸರಸ್ವತಿ ಶ್ಲೋಕ - 1
ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ
------------------------------------------------------------------

ಸರಸ್ವತಿ ಶ್ಲೋಕ - 2

ಯಾ ಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪ

------------------------------------------------------------------
ಸರಸ್ವತಿ ಸ್ತೋತ್ರ


ಮೇಲಿನ 2 ಶ್ಲೋಕಗಳೂ ಕೆಳಗಿರುವ ಸರಸ್ವತಿ ಸ್ತೋತ್ರದಿಂದ ಬಂದಿದೆ. ಸ್ತೋತ್ರದ ಪೂರ್ತಿ ಸಾಹಿತ್ಯ ಕೆಳಗಿದೆ. ಇದನ್ನು ಶ್ರೀ ಅಗಸ್ತ್ಯ ಮುನಿ ರಚಿಸಿದ್ದಾರೆ ಎಂಬ ನಂಬಿಕೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
1.Audio Link - by Sulamangala Sisters

2.Audio Link - by Jayasree & Syama

3.Audio Link by Mambalam Sisters

4.Audio Link - by Vijaya Subramaniam below (only few verses)
Related Links:
Blog Widget by LinkWithin