Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label Vrata. Show all posts
Showing posts with label Vrata. Show all posts

July 24, 2010

Vaibhava Lakshmi Vrata in Kannada / ವೈಭವ ಲಕ್ಷ್ಮಿ ವ್ರತ

ಕಳೆದ ಹಲವು ದಿನಗಳಲ್ಲಿ ಬಹಳ ಜನ ಓದುಗರು ವೈಭವ ಲಕ್ಷ್ಮಿ ವ್ರತದ ಬಗ್ಗೆ ಬರೆಯಿರಿ ಅಂತ ಕೋರಿಕೆ ಮಾಡಿದ್ದರೆ. ಹಾಗಾಗಿ ಈ ವೈಭವ ಲಕ್ಷ್ಮಿ ಪೂಜೆ ಬಗ್ಗೆ ವಿವರ ಇಲ್ಲಿದೆ.ಈ ವ್ರತವನ್ನು ಶುಕ್ರವಾರ ಸಂಜೆ ಮಾಡಬೇಕು. ಲಕ್ಷ್ಮೀ ಯಂತ್ರವನ್ನು ರಂಗೊಲಿಯಾಗಿ ಬರೆಯಬಹುದು ಅಥವಾ ಚಿತ್ರವನ್ನು ಇಡಬಹುದು. ಇದರ ಮೇಲೆ ಒಂದು ಕಲಶ ಪಾತ್ರೆಯಲ್ಲಿ ಆಭರಣ ಇಟ್ಟು ಪೂಜೆ ಮಾಡಬೇಕು. ಹೀಗೆ ೫ ಶುಕ್ರ ವಾರ ಪೂಜೆ ಮಾಡಿದ ನಂತರ ೮ ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮ ಹಾಗು ಈ ಪುಸ್ತಕದ ಒಂದು ಪ್ರತಿಯನ್ನು ಕೊಡಬೇಕು.ಪೂಜಾ ವಿಧಾನದ ಪೂರ್ಣ ವಿವರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Lakshmi yantra / Vaibhava lakshmi Rangoli(left side)
Vaibhava Lakshmi Pooja Vidhana in Kannada - scanned from book
12345

6789
----------------------------------------------------

Lakshmi Stotras:

1.Vaibhava Lakshmi Pooja Vidhana Audio in Kannada

2.Mahalakshmi Ashtakam

3.Lakshmi Ashtottara

4.Ashtalakshmi Stotra

5.Kanakadhara Stotra

6.Lakshmi Songs with lyrics


ವೈಭವ ಲಕ್ಷ್ಮಿಯು ಎಲ್ಲರಿಗೂ ಐಶ್ವರ್ಯ ಅಭಿವೃದ್ಧಿ ಕೊಟ್ಟು ಕಾಪಾಡಲಿ :)

July 27, 2009

Varamahalakshmi Vrata / ವರಮಹಾಲಕ್ಷ್ಮಿ ವ್ರತ


ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.

ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.

ವರಮಹಾಲಕ್ಷ್ಮಿ ಕಲಶ ಸ್ಥಾಪನೆ , ಪೂಜೆ (karnataka.com)
ಷೋಡಶೋಪಚಾರದಿಂದ ಮಾಡುವ ಪೂಜಾ ವಿಧಿ ಇಲ್ಲಿದೆ. ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ವರಮಹಾಲಕ್ಷ್ಮಿ ವ್ರತ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
ವರಮಹಾಲಕ್ಷ್ಮಿ ವ್ರತ ಕಥೆ ಇಲ್ಲಿ ಓದಬಹುದು (thatskannada)

ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)
Useful Links:

Lakshmi Ashottara
Lakshmi Ashtakam

All Devi Stotras

Lakshmi Sahasranama

Get this widget | Track details |


Songs on Lakshmi Devi

June 17, 2009

Sankashtahara Chaturthi / Sankashta Chauthi Vrata / ಸಂಕಷ್ಟಹರ ಚತುರ್ಥಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

----------------------------------------------------------------------------

ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ವ್ರತವನ್ನು ಮಾಡುತ್ತಾರೆ. ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.

ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಕಲಶ ಸ್ಥಾಪನೆ ಚಿತ್ರ ಕೆಳಗಿದೆ.click on the image to enlarge



ಕಲಶ ಸ್ಥಾಪನೆ

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು.
ಪೂಜೆಯ ನಂತ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು :)

ಚಂದ್ರೋದಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

1.Moonrise and Moonset time

2.Moonrise and Moonset calculator

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.

ನಮ್ಮ ಮನೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
(click on the image to enlarge)

ಸಂಕಷ್ಟಹರ ಗಣಪತಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Vrata + Kathe Audio Link


ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ವ್ರತವನ್ನು ಆಚರಿಸಬಹುದು.
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ :)

ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.


ಗಣಪತಿ ಹಾಡು/ ಸ್ತೋತ್ರಗಳು:


5.Ganesha Sahasranama
6.Ganesha Pratah Smarana Stotra

December 6, 2008

Sri Satyanarayana Pooja Vidhana / Vrata in Kannada / ಶ್ರಿಸತ್ಯನಾರಾಯಣ ಪೂಜಾ ವಿಧಾನ

Update: July 2010
I came across this link recently. Chinmaya Mission has uploaded the detailed mantras for Sathyanarayana Pooja. here is the link.

Sathyanarayana Pooja Vidhana in Kannada(88 pages) - broken link is fixed

ನನ್ನ ಬ್ಲಾಗಿಗೆ ಬಂದ ಬಹಳಷ್ಟು ಜನರ ಕೋರಿಕೆಯ ಮೇರೆಗೆ ಶ್ರೀ ಸತ್ಯನಾರಾಯಣ ವ್ರತದ ಬಗ್ಗೆ ಬರೆಯುತ್ತಿದ್ದೀನಿ.
ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನರಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ. ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ. ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ/ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ. ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.

ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸಿ . ಒಂದು ಸಣ್ಣ ಚೊಂಬಿಗೆ ನಿಮ್ಮದೇ ವಡವೆ (ಸರ)ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯದ ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿಇಡಬೇಕು. ಒಂದು ಹೊಸ ಶಲ್ಯವನ್ನು ಈ ಕಳಶದ ಪಾತ್ರೆಯ ಸುತ್ತ ಹೊದಿಸಿ.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರಮೇಲೆ ಈ ಕಲಶ ಸ್ಥಾಪನೆ ಮಾಡಬೇಕು. ಇದರೊಂದಿಗೆ ಇನ್ನೊಂದು ತಟ್ಟೆಯಲ್ಲಿ ನವಗ್ರಹ ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು, ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ ಇಡಬೇಕು.



ನವಗ್ರಹ ಧಾನ್ಯಗಳು ಮತ್ತು ನವಗ್ರಹ ಮಂಡಲದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಇದರ ಜೊತೆಗೆ ಸತ್ಯನಾರಾಯಣ ಪಟ ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ.





ನವಧಾನ್ಯ

ಮೊದಲು ಗಣಪತಿ ಪೂಜೆ ಮಾಡಬೇಕು .
ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣ ಪೂಜೆ ಮಾಡಬೇಕು.
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಲ್ಲಿದೆ. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ/ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)ಮಾಡಿಕೊಳ್ಳಬೇಕು.ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸ ತ್ಪಾತ್ರರಿಗೆ ದಾನ ಕೊಡಬೇಕು.

ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.

ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು ಪೂಜಾ ಮಂತ್ರಗಳು ಮತ್ತು ವ್ರತ ಕಥೆ ಎರಡನ್ನೂ ಹೇಳಿದ್ದಾರೆ. ಸತ್ಯನಾರಾಯಣ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
Kathe scanned from my Vrata book: click on image below to enlarge.


ಸತ್ಯನಾರಾಯಣನ ಮೇಲೆ ಹಾಡುಗಳು:
ಶ್ರೀ ಸತ್ಯನಾರಾಯಣನು ಎಲ್ಲರಿಗು ಮಂಗಳವನ್ನು ಮಾಡಲಿ :)

Related link

September 8, 2008

Ananta Padmanabha Ashtottara & Vrata in Kannada / ಅನಂತ ಪದ್ಮನಾಭ ಅಷ್ಟೋತ್ತರ

ಅನಂತನ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನ ಆಚರಿಸುತ್ತಾರೆ. ವಾರ ಅನಂತ ಚತುರ್ದಶಿ ಹಬ್ಬ ಬರುತ್ತಾ ಇದೆ. ಅದಕ್ಕೆ ಅನಂತ ಪದ್ಮನಾಭ ಅಷ್ಟೋತ್ತರ ಇಲ್ಲಿದೆ. ಒಂದು ಕುತೂಹಲಕರವಾದ ವಿಷಯ ಅಂದರೆ, ಅಷ್ಟೋತ್ತರದಲ್ಲಿ ಪ್ರತಿಯೊಂದು ನಾಮವು '" ಅಕ್ಷರದಿಂದ ಶುರುವಾಗುತ್ತೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಅನಂತ ಪದ್ಮನಾಭ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು- Ananta Padmanabha Vrata Audio link

August 31, 2008

Ganesha Chaturthi/ Ganesha Habba/ ಶ್ರೀ ವರಸಿದ್ಧಿ ವಿನಾಯಕ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------
ಶ್ರೀ ವರಸಿದ್ಧಿ ವಿನಾಯಕ ವ್ರತ / ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಅವರ ಮನೆಯ ಪದ್ಧತಿ ಪ್ರಕಾರ ಮಣ್ಣಿನ ಗಣಪತಿ / ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಜನಿವಾರ, ಹತ್ತಿ ಎಳೆ, ಹುಲ್ಲಿನ ಗರಿಕೆ ಬೇಕಾಗುತ್ತೆ. ಮೊದಲು ಮನೆಯ ಗಣಪತಿಗೆ ಪೂಜೆ ಮಾಡಿ ನಂತರ ದೊಡ್ಡ ಗಣಪತಿಗೆ ಪೂಜೆ ಮಾಡಬೇಕು. ಗಣಪತಿಗೆ 21 ಹಿಡಿ 21 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ 21 ಕಡುಬು, ಮೋದಕ ಮಾಡುತ್ತಾರೆ. ತಿಂಡಿ ಪ್ರಿಯನಾದ ಗಣಪತಿಗೆ ಇದರೊಂದಿಗೆ ಬಗೆಬಗೆಯ ತಿಂಡಿಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.
ಗೌರಿ ಗಣೇಶ ಹಬ್ಬ

ಗಣಪತಿ ಹಬ್ಬದ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಿಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಒಂದು ವೇಳೆ ಅಕಸ್ಮಾತ್ ಚಂದ್ರದರ್ಶನ ಮಾಡಿದಲ್ಲಿ, ಅದರ ದೋಷ ಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು(ಶಮಂತಕ ಮಣಿ ಕಥೆ) ಶ್ರವಣ ಮಾಡಿ, ಈ ಶ್ಲೋಕವನ್ನು ಪಠಿಸಬೇಕು.

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ ||


ಸ್ನೇಹಿತರೇ ಈ ವರ್ಷ ಜೋಕೆಯಾಗಿ ಇರಿ ಆಯಿತಾ :)

ವರ ಸಿದ್ಧಿ ವಿನಾಯಕ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Varasiddhi Vinayaka Vrata + Kathe Audio link by Ganapathi Shastri (kannada audio)[needs real player]

Varasiddhi Vinayaka Vrata + Kathe Audio Link by Ganapathi Shastri (updated Aug 2018)
Varasiddhi Vinayaka Vrata + Kathe Audio Link by Raghavan Shastri


ಗಣಪತಿ ಪೂಜೆ

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ದೇವರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುತ್ತಾರೆ. "ಗಣೇಶ ಬಂದ, ಹೊಟ್ಟೆ ಮೇಲೆ ಗಂಧ, ಕಾಯಿ ಕಡುಬು ತಿಂದ , ಚಿಕ್ಕ ಕೆರೇಲಿ ಬಿದ್ದ , ದೊಡ್ಡ ಕೆರೇಲಿ ಎದ್ದ " ಅಂತ ಹೇಳಿಕೊಂಡು ಗಣಪತಿಯನ್ನು ನೀರಲ್ಲಿ ಮುಳುಗಿಸುವುದು:)

ಗಣಪತಿ ಹಾಡು/ ಸ್ತೋತ್ರಗಳು:


ವರಸಿದ್ಧಿ ವಿನಾಯಕ ನಿಮ್ಮ ಎಲ್ಲ ಕಾರ್ಯಗಳನ್ನು ಸಿದ್ಧಿಸಲಿ :)

Related Link:
Songs on lord Ganesha with lyrics
Swarna Gowri Vratha

August 28, 2008

Sri Swarna Gowri Vrata/ Gowri Habba/ ಶ್ರೀ ಸ್ವರ್ಣ ಗೌರಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------


ಶ್ರೀ ಸ್ವರ್ಣ ಗೌರಿ ವ್ರತ / ಗೌರಿ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ತ್ರಿತೀಯ/ತದಿಗೆ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ಅವರ ಮನೆಯ ಪದ್ಧತಿ ಪ್ರಕಾರ ಅರಿಶಿನದ ಗೌರಿ /ಮಣ್ಣಿನ ಗೌರಿ / ಬೆಳ್ಳಿ ಗೌರಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.



ಗೌರಿ ದೇವಿಗೆ ಪೂಜೆ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಗೌರಿ ದಾರ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ಮರದ ಜೊತೆ ಬಾಗಿನ ಬೇಕಾಗುತ್ತೆ. ಮೊದಲು ಗಣಪತಿ ಪೂಜೆ ಮಾಡಿ ನಂತರ ಸ್ವರ್ಣಗೌರಿಗೆ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಒಬ್ಬಟ್ಟು/ಹೋಳಿಗೆ ಮಾಡುತ್ತಾರೆ. ಗೌರಿ ದಾರಕ್ಕೆ ಪೂಜೆ ಮಾಡಿ ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು. ಗೌರಿ ದೇವಿಗೆ ಒಂದು ಮರದ ಜೊತೆ ಬಾಗಿನ ಕೊಡಬೇಕು. ಇದಲ್ಲದೇ ಸುಮಂಗಲಿಯರಿಗೆ ನಿಮ್ಮ ಇಚ್ಛೆ , ಶಕ್ತಿ ಅನುಸಾರ 1/4/5/8/16 ಮರದ ಬಾಗಿನ ಕೊಡಬಹುದು. ಮೊರದ ಜೊತೆ ಬಾಗಿನದ ವಿವರ ಇಲ್ಲಿದೆ. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.

ಮರದ ಬಾಗಿನ

ಸ್ವರ್ಣ ಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Swarna Gowri Vrata + kathe Audio link
(kannada audio)

Swarna Gowri Vrata + kathe Audio link (updated Aug 2018)

Swarna Gouri Vratha Audio by Bharatiya Vidya Bhavan

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ಗೌರಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ

ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ
ದುರ್ಗಾಅಷ್ಟೋತ್ತರ
All Devi Stotras and Songs
Ganesha Chaturthi
ಸ್ವರ್ಣ ಗೌರಿಯ ಕೃಪೆ ಎಲ್ಲರಿಗೂ ಸದಾ ಇರಲಿ :)
Blog Widget by LinkWithin