Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label Devaranama. Show all posts
Showing posts with label Devaranama. Show all posts

November 15, 2008

Kanakadasa Jayanthi / ಕನಕದಾಸ ಜಯಂತಿ

ಇಂದು ಕನಕದಾಸರ ಜಯಂತಿ. ಕನಕದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.

ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.

ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.

ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.

ಇವರ ದೇವರನಾಮಗಳು ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಹಾಡನ್ನು ಇಂದಿಗೂ ನಾವೆಲ್ಲ ಕೇಳುತ್ತೀವಿ, ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತ.

ಕನಕದಾಸ ಜಯಂತಿ ಪ್ರಯುಕ್ತ ನನ್ನ ಭಕ್ತಿಗೀತೆ ಬ್ಲಾಗಿನಲ್ಲಿ ಕನಕದಾಸರ ಕೆಲವು ದೇವರನಾಮಗಳನ್ನು, ಸಾಹಿತ್ಯ ಹಾಗು ಸಂಗೀತ ಎರಡನ್ನೂ ಹಾಕಿದ್ದೀನಿ.

ಕನಕದಾಸರ ದೇವರನಾಮಗಳನ್ನು ಸಂಗೀತಗಾರರು ಸುಮುಧುರವಾಗಿ ಹಾಡಿದ್ದಾರೆ. ಕೆಲವು ಹಾಡುಗಳ ಧ್ವನಿ ಮುದ್ರಣ ಕೆಳಗಿದೆ. ಹಾಡನ್ನು ಕೇಳಲು ಹಾಡಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.


ಇಂತಹ ಮಹನೀಯರ ಜನ್ಮ ದಿನವನ್ನು ಇಂದು ಆಚರಿಸುವುದಕ್ಕೆ ಹೆಮ್ಮೆ ಆಗುತ್ತೆ ಅಲ್ಲವೇ:)

Related Link:

Kanakadasara Devaranama with Lyrics at Bhakthigeetha

August 19, 2008

Krishna Janmashtami / Gokulashtami / ಶ್ರೀ ಕೃಷ್ಣ ಜನ್ಮಾಷ್ಟಮಿ/ ಗೋಕುಲಾಷ್ಟಮಿ

Update 31-Aug-2010:
Click here for rangoli of Lord Krishna's cradle and feet.



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಬಾಲ ಕೃಷ್ಣನಿಗೆ ಪೂಜೆ. ಪೂಜಾ ವಿಧಾನ ಇಲ್ಲಿದೆ.ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ. ಗೋವಿಂದಾಷ್ಟಕ ಇಲ್ಲಿದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ. ಕೃಷ್ಣನ ಧ್ಯಾನದಲ್ಲಿ ಭಜನೆ, ಹಾಡುಗಳನ್ನು ಹಾಡುತ್ತಾರೆ.
ಶ್ರೀ ಕೃಷ್ಣನ ನಾಮ ಸ್ಮರಣೆ ಎಂದ ತಕ್ಷಣ ಮನಸ್ಸಿಗೆ ಬರುವುದು ದಾಸ ಪರಂಪರೆಯ ಶ್ರೀಮಂತ ಕೊಡುಗೆ. ಪುರಂದರದಾಸ, ಕನಕದಾಸ, ವಿಜಯದಾಸ, ಮೊದಲಾದವರು 'ಹರಿಯ' ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಹಾಗು ಜನಪ್ರಿಯವಾದ ದೇವರನಾಮವನ್ನು ಕೆಳಗೆ ಪಟ್ಟಿ ಮಾಡಿದ್ದೀನಿ. ಧ್ವನಿ ಮುದ್ರಣ ಕೇಳಲು ಹಾಡಿನ ಮೇಲೆ ಕ್ಲಿಕ್ ಮಾಡಿ


Songs on Krishna with lyrics - 25 songs

Madhurashtaka

Govindashtaka

ಕೃಷ್ಣ ನೀ ಬೇಗನೆ ಬಾರೋ

ಬಾರೋ ಕೃಷ್ಣಯ್ಯ

ಸ್ಮರಣೆ ಒಂದೇ ಸಾಲದೇ

ನಾರಾಯಣ

ನಾರಾಯಣ ಹರಿ ಗೋವಿಂದ

ಯಾರೇ ರಂಗನ

ಜಗದೋದ್ಧಾರನ

ಸಕಲ ಗ್ರಹ ಬಲ

ಗುಮ್ಮನ ಕರೆಯದಿರೆ ಅಮ್ಮ

ಕಂಡು ಕಂಡು ನೀ ಎನ್ನ

ಪಿಳ್ಳಂಗೋವಿಯ ಚೆಲುವ ಕೃಷ್ಣ

ಕಂಡೆನಾ ಗೋವಿಂದನ

ಕಲ್ಲು ಸಕ್ಕರೆ ಕೊಳ್ಳಿರೋ

ತೂಗಿರೆ ರಂಗನ ತೂಗಿರೆ ಕೃಷ್ಣನ


ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಸದಾ ಇರಲಿ :)

Blog Widget by LinkWithin