Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label :Krishna. Show all posts
Showing posts with label :Krishna. Show all posts

August 31, 2010

Lord Krishna's Cradle and Feet in Rangoli/ಕೃಷ್ಣನ ತೊಟ್ಟಿಲು, ಪಾದದ ರಂಗೋಲಿ



"ಓದುಗರೆಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು"
ಓದುಗರೊಬ್ಬರು ಕೃಷ್ಣನ ತೊಟ್ಟಿಲು ಹಾಗು ಪಾದ ರಂಗೋಲಿ ಹೇಗೆ ಬರೆಯುವುಸು ಅಂತ ಕೇಳಿದ್ದರು. ನಾನು online ಹುಡುಕಿದಾಗ ಚಿತ್ರಗಳು ಸಿಕ್ಕಿವೆ. ಇವುಗಳ link ಗಳನ್ನೂ ಕೆಳಗೆ ಕೊಟ್ಟಿದ್ದೀನಿ.
ಕೃಷ್ಣ ಜನ್ಮಾಷ್ಟಮಿ ಹಬ್ಬದ ಬಗ್ಗೆ ಹೆಚ್ಚು ವಿವರ ಇಲ್ಲಿದೆ.

http://www.ikolam.com

http://mykolam.blogspot.com/2009/08/krishnas-cradle.html

http://simpleindianfood.blogspot.com/2008/08/ganesh-chaturthi-naivedyam.html

http://theyumblog.wordpress.com/2007/09/04/krishnas-feet-for-srijayanthi/

http://sukanya-keralaiyer.blogspot.com/2008/08/gokulashtami-and-appams.html


August 11, 2009

Madhurashtakam in Kannada / ಮಧುರಾಷ್ಟಕ ಸ್ತೋತ್ರ

ಮಧುರಾಷ್ಟಕವನ್ನು ಶ್ರೀ ವಲ್ಲಭಾಚಾರ್ಯರು ರಚಿಸಿದ್ದಾರೆ. ಇವರು ಸುಮಾರು ೧೫ ನೇ ಶತಮಾನದಲ್ಲಿ ಬದುಕಿದ್ದರು. ಇವರು ವೈಷ್ಣವ ಪರಂಪರೆ ಅನುಸರಿಸಿದವರು. ಇವರ ವೇದಾಂತ ಸಿದ್ಧಾಂತವನ್ನು ಪುಷ್ಟಿ ಮಾರ್ಗ ಎಂದು ಕರೆದರು. ಇದರಲ್ಲಿ ನಿರಂತರವಾಗಿ ಪ್ರೀತಿ ಮತ್ತು ಭಕ್ತಿಯಿಂದ ಕೃಷ್ಣನನ್ನು ಆರಾಧಿಸಬೇಕು. ಇದರಿಂದ ದೇವರ ಸಾನಿಧ್ಯ ಪಡೆಯಬಹುದು ಎಂದು ಹೇಳುತ್ತಾರೆ. ಹೀಗಾಗಿ ಇವರು ಶ್ರೀ ಕೃಷ್ಣನ ಮೇಲೆ ಹಲವಾರು ಸ್ತೋತ್ರ ರಚಿಸಿದ್ದಾರೆ. ಅದ್ರಲ್ಲಿ ಮಧುರಾಷ್ಟಕವೂ ಒಂದಾಗಿದೆ. ಮಧುರ ಎಂದರೆ ಸವಿಯಾದ, ಇಂಪಾದದು. ಅಷ್ಟ ಎಂದರೆ ೮. ಮಧುರಾಷ್ಟಕದಲ್ಲಿ ೮ ಪಂಕ್ತಿಗಳಿವೆ, ಶ್ರೀ ಕೃಷ್ಣನಿಗೆ ಸಂಬಂಧ ಪಟ್ಟ ಎಲ್ಲ ವಿಷಯವೂ ಮಧುರವಾಗಿದೆ ಎಂದು ಹೇಳಿತ್ತಾರೆ. ಇದನ್ನು ಕನ್ನಡದಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

1. AudioLink - ಮಧುರಾಷ್ಟಕವನ್ನು M.S. Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.


2.Audio by M.S.Sheela below:


3.Meaning of Madhurashtaka


ಕೃಷ್ಣನ ಕೃಪೆ ಇಂದ ಎಲ್ಲರ ಜೀವನವು ಮಧುರವಾಗಿರಲಿ :)

August 7, 2009

Govinda Ashtaka / Govindashtakam in Kannada / ಗೋವಿಂದಾಷ್ಟಕ

ಕೃಷ್ಣ ಜನ್ಮಾಷ್ಟಮಿ ಹಬ್ಬ ಹತ್ತಿರ ಬರುತ್ತಾ ಇದೆ. ಅದಕ್ಕಾಗಿ ಕೃಷ್ಣನ ಇನ್ನೊಂದು ಸ್ತೋತ್ರ ಇಲ್ಲಿದೆ. ಗೋವಿಂದಾಷ್ಟಕವನ್ನು ಕನ್ನಡದಲ್ಲಿ ಬರೆದಿದ್ದೀನಿ. ಇದನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕಿಲ್ಕ್ ಮಾಡಿ.



1.Audio by M.S.Subbalakshmi



2.Audio by Ravindra Sathe

August 19, 2008

Krishna Janmashtami / Gokulashtami / ಶ್ರೀ ಕೃಷ್ಣ ಜನ್ಮಾಷ್ಟಮಿ/ ಗೋಕುಲಾಷ್ಟಮಿ

Update 31-Aug-2010:
Click here for rangoli of Lord Krishna's cradle and feet.



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಬಾಲ ಕೃಷ್ಣನಿಗೆ ಪೂಜೆ. ಪೂಜಾ ವಿಧಾನ ಇಲ್ಲಿದೆ.ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ. ಗೋವಿಂದಾಷ್ಟಕ ಇಲ್ಲಿದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ. ಕೃಷ್ಣನ ಧ್ಯಾನದಲ್ಲಿ ಭಜನೆ, ಹಾಡುಗಳನ್ನು ಹಾಡುತ್ತಾರೆ.
ಶ್ರೀ ಕೃಷ್ಣನ ನಾಮ ಸ್ಮರಣೆ ಎಂದ ತಕ್ಷಣ ಮನಸ್ಸಿಗೆ ಬರುವುದು ದಾಸ ಪರಂಪರೆಯ ಶ್ರೀಮಂತ ಕೊಡುಗೆ. ಪುರಂದರದಾಸ, ಕನಕದಾಸ, ವಿಜಯದಾಸ, ಮೊದಲಾದವರು 'ಹರಿಯ' ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಹಾಗು ಜನಪ್ರಿಯವಾದ ದೇವರನಾಮವನ್ನು ಕೆಳಗೆ ಪಟ್ಟಿ ಮಾಡಿದ್ದೀನಿ. ಧ್ವನಿ ಮುದ್ರಣ ಕೇಳಲು ಹಾಡಿನ ಮೇಲೆ ಕ್ಲಿಕ್ ಮಾಡಿ


Songs on Krishna with lyrics - 25 songs

Madhurashtaka

Govindashtaka

ಕೃಷ್ಣ ನೀ ಬೇಗನೆ ಬಾರೋ

ಬಾರೋ ಕೃಷ್ಣಯ್ಯ

ಸ್ಮರಣೆ ಒಂದೇ ಸಾಲದೇ

ನಾರಾಯಣ

ನಾರಾಯಣ ಹರಿ ಗೋವಿಂದ

ಯಾರೇ ರಂಗನ

ಜಗದೋದ್ಧಾರನ

ಸಕಲ ಗ್ರಹ ಬಲ

ಗುಮ್ಮನ ಕರೆಯದಿರೆ ಅಮ್ಮ

ಕಂಡು ಕಂಡು ನೀ ಎನ್ನ

ಪಿಳ್ಳಂಗೋವಿಯ ಚೆಲುವ ಕೃಷ್ಣ

ಕಂಡೆನಾ ಗೋವಿಂದನ

ಕಲ್ಲು ಸಕ್ಕರೆ ಕೊಳ್ಳಿರೋ

ತೂಗಿರೆ ರಂಗನ ತೂಗಿರೆ ಕೃಷ್ಣನ


ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಸದಾ ಇರಲಿ :)

August 17, 2008

Krishna Ashtottara in Kannada / ಶ್ರೀ ಕೃಷ್ಣ ಅಷ್ಟೋತ್ತರ

ಈ ವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ.



ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link

Blog Widget by LinkWithin