ಮಧುರಾಷ್ಟಕವನ್ನು ಶ್ರೀ ವಲ್ಲಭಾಚಾರ್ಯರು ರಚಿಸಿದ್ದಾರೆ. ಇವರು ಸುಮಾರು ೧೫ ನೇ ಶತಮಾನದಲ್ಲಿ ಬದುಕಿದ್ದರು. ಇವರು ವೈಷ್ಣವ ಪರಂಪರೆ ಅನುಸರಿಸಿದವರು. ಇವರ ವೇದಾಂತ ಸಿದ್ಧಾಂತವನ್ನು ಪುಷ್ಟಿ ಮಾರ್ಗ ಎಂದು ಕರೆದರು. ಇದರಲ್ಲಿ ನಿರಂತರವಾಗಿ ಪ್ರೀತಿ ಮತ್ತು ಭಕ್ತಿಯಿಂದ ಕೃಷ್ಣನನ್ನು ಆರಾಧಿಸಬೇಕು. ಇದರಿಂದ ದೇವರ ಸಾನಿಧ್ಯ ಪಡೆಯಬಹುದು ಎಂದು ಹೇಳುತ್ತಾರೆ. ಹೀಗಾಗಿ ಇವರು ಶ್ರೀ ಕೃಷ್ಣನ ಮೇಲೆ ಹಲವಾರು ಸ್ತೋತ್ರ ರಚಿಸಿದ್ದಾರೆ. ಅದ್ರಲ್ಲಿ ಮಧುರಾಷ್ಟಕವೂ ಒಂದಾಗಿದೆ. ಮಧುರ ಎಂದರೆ ಸವಿಯಾದ, ಇಂಪಾದದು. ಅಷ್ಟ ಎಂದರೆ ೮. ಮಧುರಾಷ್ಟಕದಲ್ಲಿ ೮ ಪಂಕ್ತಿಗಳಿವೆ, ಶ್ರೀ ಕೃಷ್ಣನಿಗೆ ಸಂಬಂಧ ಪಟ್ಟ ಎಲ್ಲ ವಿಷಯವೂ ಮಧುರವಾಗಿದೆ ಎಂದು ಹೇಳಿತ್ತಾರೆ. ಇದನ್ನು ಕನ್ನಡದಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
1. AudioLink - ಮಧುರಾಷ್ಟಕವನ್ನು M.S. Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.
2.Audio by M.S.Sheela below:
3.Meaning of Madhurashtaka
ಕೃಷ್ಣನ ಕೃಪೆ ಇಂದ ಎಲ್ಲರ ಜೀವನವು ಮಧುರವಾಗಿರಲಿ :)
Subscribe to:
Post Comments (Atom)
No comments:
Post a Comment
Thank you for your valuable comments. I will try to reply back as soon as possible.