ಸರಸ್ವತಿ ಪೂಜೆ/ಹಬ್ಬ ,ನವರಾತ್ರಿಯಲ್ಲಿ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಸರಸ್ವತಿಯು ವಿದ್ಯೆ, ಜ್ಞಾನ, ಸಂಗೀತ, ಸಾಹಿತ್ಯ ಎಲ್ಲದಕ್ಕೂ ಅಧಿದೇವತೆ. ಈ ದಿನ ಸರಸ್ವತಿ ದೇವಿಯ ಪಟ, ವಿಗ್ರಹದ ಜೊತೆಗೆ ವಿಧ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಪೆನ್ನು, ಪೆನ್ಸಿಲ್ಲು , ಇತ್ಯಾದಿಗಳನ್ನೂ, ಸಂಗೀತ ವಾದ್ಯಗಳನ್ನು ಇಟ್ಟು ಪೂಜೆ ಮಾಡಬೇಕು. ಪೂಜಾ ವಿಧಾನಇಲ್ಲಿದೆ. ಸರಸ್ವತಿ ಸ್ತೋತ್ರಗಳು ಇಲ್ಲಿದೆ.
ಸರಸ್ವತಿ ಅಷ್ಟೋತ್ತರ ಕೆಳಗಿದೆ. ದೊಡ್ದದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಸರಸ್ವತಿ ಪೂಜೆಯನ್ನು ಬೇರೆ ದಿನಗಳಲ್ಲೂ ಮಾಡುತ್ತಾರೆ. ಉತ್ತರ ಭಾರತದಲ್ಲಿ ಮಾಘ ಮಾಸದ ಶುಕ್ಲ ಪಂಚಮಿ ದಿನ "ವಸಂತಪಂಚಮಿ " ಎಂದು ಸರಸ್ವತಿಯನ್ನು ಪೂಜೆ ಮಾಡುತ್ತಾರೆ. ಇದೇ ದಿನ ಶ್ರಿಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ನಡೆಯುತ್ತೆ. ಇದಲ್ಲದೇ ವಿದ್ಯಾರಂಭ ಮಾಡುವ ಮುನ್ನ ವಿದ್ಯಾ ಅಧಿದೇವತೆಯಾದ ಸರಸ್ವತಿಯನ್ನು ಧ್ಯಾನ ಮಾಡುತ್ತಾರೆ. ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಮುನ್ನ, ಪ್ರತಿ ವರ್ಷ ಶಾಲೆ ಶುರುವಾಗುವ ಮುನ್ನ, ಪರೀಕ್ಷೆಗೆ ಮುಂಚೆ, ಯಾವುದೇ ಹೊಸ ವಿದ್ಯೆಯನ್ನು(ಸಂಗೀತ, ನೃತ್ಯ, ವೇದಾಭ್ಯಾಸ, ಚಿತ್ರಕಲೆ) ಕಲಿಯುವ ಮುಂಚೆ ಸರಸ್ವತಿ ಆಶಿರ್ವಾದ ಪಡೆದುಕೊಂಡೇ ಮುಂದೆಹೋಗಬೇಕು. ಸರಸ್ವತಿ ಮೇಲೆ ಹಾಡುಗಳು : ಮಮವತು ಶ್ರೀ ಸರಸ್ವತಿ[song 2]; ಶ್ರೀ ಸರಸ್ವತಿ ನಮೋಸ್ತುತೆ ಸರಸ್ವತಿ ದೇವಿಯು ಎಲ್ಲರಿಗೂ ವಿದ್ಯಾ ಬುದ್ಧಿ ಕೊಟ್ಟು ಕಾಪಾಡಲಿ :)
Please don't steal any content from my blog. Thankyou.
******************************
visitor counter
NOTICE: Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.