Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

December 31, 2008

Happy New Year / ಹೊಸ ವರ್ಷದ ಶುಭಾಶಯ

"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"

Glitter Photos

ಹೊಸ ವರ್ಷ ನಿಮಗೆ ಸಂತಸ, ಸಂತೃಪ್ತಿ , ಸಮೃದ್ಧಿ ತರಲಿ,

ನಿಮ್ಮ ಕನಸೆಲ್ಲ ನೆನಸಾಗಲಿ ,ಭಗವಂತನ ಕೃಪೆ ಸದಾ ಇರಲಿ.

ಕಳೆದ ಕೆಲವು ದಿನಗಳಲ್ಲಿ ನಾನು ಇತರೆ ಕೆಲಸಗಳನ್ನು ಮಾಡುತ್ತಿದ್ದು, ಬ್ಲಾಗಿನ ಕಡೆ ಬರುವುದಕ್ಕೆ ಸಮಯವಿರಲಿಲ್ಲ. ಹೊಸ ವರ್ಷದಲ್ಲಿ ಇನ್ನಷ್ಟು ಪೂಜಾವಿಧಾನ, ಸ್ತೋತ್ರ ,ಮಂತ್ರಗಳನ್ನು ಬರೆಯುವ ಆಸೆ ಇದೆ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಂದ ನನಗೆ ಇನ್ನಷ್ಟು ಹುರುಪು, ಉತ್ಸಾಹ ಬಂದಿದೆ. ನಿಮ್ಮ ಬೆಂಬಲ, ಆಸಕ್ತಿ , ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ :)

December 10, 2008

Dattatreya Jayanthi, Dattatreya Ashtottara in Kannada / ದತ್ತಾತ್ರೇಯ ಜಯಂತಿ , ದತ್ತಾತ್ರೇಯ ಅಷ್ಟೋತ್ತರದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ ದಿನ ಆಚರಿಸುತ್ತಾರೆ. ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು. ಇದರ ಹಿಂದೆ ಇರುವ ಕಥೆ ಹೀಗಿದೆ.
ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು " ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ. ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ " ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ , ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಬ್ರಹ್ಮ , ವಿಷ್ಣು , ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, "ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ" ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.
ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಗುರುವಿನ ಶಕ್ತಿ, ಮಹಿಮೆ ಅಪಾರ. ಸರಸ್ವತಿ ಗಂಗಧರರು ಗುರುಗಳ ಮಹಿಮೆಯನ್ನು "ಗುರು ಚರಿತ್ರೆ " ಪುಸ್ತಕದಲ್ಲಿ ಬರೆದಿದ್ದರೆ. ಇದರಲ್ಲಿ 52 ಅಧ್ಯಯವಿದೆ.ದತ್ತನ ಭಕ್ತರು ಗುರುಚರಿತ್ರೆಯನ್ನು ಪಾರಾಯಣ ಮಾಡುತ್ತಾರೆ.ಸಂಕ್ಷಿಪ್ತ ಗುರುಚರಿತ್ರೆಯನ್ನು ಇಲ್ಲಿ ಓದಬಹುದು


ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ,ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ಕೆಳಗಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.Ashtottara Audio Link by Bombay Sisters

ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)

December 6, 2008

Sri Satyanarayana Pooja Vidhana / Vrata in Kannada / ಶ್ರಿಸತ್ಯನಾರಾಯಣ ಪೂಜಾ ವಿಧಾನ

Update: July 2010
I came across this link recently. Chinmaya Mission has uploaded the detailed mantras for Sathyanarayana Pooja. here is the link.

Sathyanarayana Pooja Vidhana in Kannada(88 pages) - broken link is fixed

ನನ್ನ ಬ್ಲಾಗಿಗೆ ಬಂದ ಬಹಳಷ್ಟು ಜನರ ಕೋರಿಕೆಯ ಮೇರೆಗೆ ಶ್ರೀ ಸತ್ಯನಾರಾಯಣ ವ್ರತದ ಬಗ್ಗೆ ಬರೆಯುತ್ತಿದ್ದೀನಿ.
ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನರಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ. ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ. ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ/ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ. ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.

ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸಿ . ಒಂದು ಸಣ್ಣ ಚೊಂಬಿಗೆ ನಿಮ್ಮದೇ ವಡವೆ (ಸರ)ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯದ ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿಇಡಬೇಕು. ಒಂದು ಹೊಸ ಶಲ್ಯವನ್ನು ಈ ಕಳಶದ ಪಾತ್ರೆಯ ಸುತ್ತ ಹೊದಿಸಿ.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರಮೇಲೆ ಈ ಕಲಶ ಸ್ಥಾಪನೆ ಮಾಡಬೇಕು. ಇದರೊಂದಿಗೆ ಇನ್ನೊಂದು ತಟ್ಟೆಯಲ್ಲಿ ನವಗ್ರಹ ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು, ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ ಇಡಬೇಕು.ನವಗ್ರಹ ಧಾನ್ಯಗಳು ಮತ್ತು ನವಗ್ರಹ ಮಂಡಲದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಇದರ ಜೊತೆಗೆ ಸತ್ಯನಾರಾಯಣ ಪಟ ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ.

ನವಧಾನ್ಯ

ಮೊದಲು ಗಣಪತಿ ಪೂಜೆ ಮಾಡಬೇಕು .
ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣ ಪೂಜೆ ಮಾಡಬೇಕು.
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಲ್ಲಿದೆ. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ/ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)ಮಾಡಿಕೊಳ್ಳಬೇಕು.ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸ ತ್ಪಾತ್ರರಿಗೆ ದಾನ ಕೊಡಬೇಕು.

ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.

ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು ಪೂಜಾ ಮಂತ್ರಗಳು ಮತ್ತು ವ್ರತ ಕಥೆ ಎರಡನ್ನೂ ಹೇಳಿದ್ದಾರೆ. ಸತ್ಯನಾರಾಯಣ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
Kathe scanned from my Vrata book: click on image below to enlarge.


ಸತ್ಯನಾರಾಯಣನ ಮೇಲೆ ಹಾಡುಗಳು:
ಶ್ರೀ ಸತ್ಯನಾರಾಯಣನು ಎಲ್ಲರಿಗು ಮಂಗಳವನ್ನು ಮಾಡಲಿ :)

Related link

December 3, 2008

Satyanarayana Ashtottara / ಶ್ರೀ ಸತ್ಯನಾರಾಯಣ ಅಷ್ಟೋತ್ತರ

Click here for Satyanarayana Pooja Vidhana
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .


Related Links:
Blog Widget by LinkWithin