ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮೆಯ ದಿನ ಆಚರಿಸುತ್ತಾರೆ. ಇಂದು ವೇದ ವ್ಯಾಸರ ಜನ್ಮ ದಿನ. ಇವರು ೪ ವೇದಗಳನ್ನು ಸಂಕಲನ ಮಾಡಿದರು ಎಂಬ ನಂಬಿಕೆ. ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೇಶ. ಈ ಗುರಿಯನ್ನು ತಲುಪುವುದಕ್ಕೆ ವೇದಗಳು ಪ್ರಮುಖ ಪಾತ್ರ ಹೊಂದಿದೆ. ಈ ವೇದಗಳನ್ನು ನಮಗೆ ಕೊಟ್ಟಿರುವ ವೇದ ವ್ಯಾಸರು ಧರ್ಮ ಗುರುಗಳು. ಇವರಿಗೆ ನಮ್ಮ ಅನಂತ ನಮಸ್ಕಾರಗಳು.
ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಪೂರ್ಣಿಮೆಯ ದಿನ ಚಂದ್ರನು ಪ್ರಕಾಶಮಾನ ಆಗಿರುತ್ತಾನೆ. ಚಂದ್ರನಂತೆ ಪ್ರಕಾಶಿಸುತ್ತಿರುವ ಗುರುವು ನಮ್ಮ ಬಾಳಲ್ಲಿರುವ ಅಂಧಕಾರವನ್ನು ತೊಲಗಿಸಿ , ಜ್ಞಾನದ ಬೆಳಕನ್ನು ಕೊಡುತ್ತಾನೆ ಎಂಬ ಸಂಕೇತವಾಗಿ ಈ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸುತ್ತಾರೆ.
ಶಂಕರಾಚಾರ್ಯರು, ದತ್ತಾತ್ರೇಯರು, ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ,ಸಾಯಿ ಬಾಬರವರು, ಶ್ರೀ ರವಿಶಂಕರ - ಹೀಗೆ ಹಲವಾರು ಮಹಾಪುರುಷರು ಗುರು ಸ್ವರೂಪರಾಗಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಗುರುಗಳನ್ನು ಅನುಸರಿಸುತ್ತಾರೆ. ಈ ದಿನ ಇಷ್ಟೊಂದು ಪ್ರಾಬಲ್ಯ, ಮಹಿಮೆ ಇರುವ ಗುರುಗಳಿಗೆ ನಮನಗಳನ್ನು ಸಲ್ಲಿಸುತ್ತಾರೆ. ಇದಲ್ಲದೇ ನಮ್ಮ ತಾಯಿ, ತಂದೆ, ಪಾಠ/ವಿದ್ಯೆ/ಸಂಗೀತ/ಕಲೆ ಹೇಳಿಕೊಟ್ಟಿರುವ ಗುರುಗಳು - ಇವರಿಗೂ ನಮಸ್ಕಾರಗಳನ್ನು ಸಲ್ಲಿಸಬೇಕು.
ಈ ಹಬ್ಬವನ್ನು ಆಚರಿಸುವುದಕ್ಕೆ ವಿಶೇಷವಾದ ಪೂಜೆ ಅಂತಿಲ್ಲ. ನಂಬಿರುವ ಗುರುಗಳ ಪೂಜೆ ಮಾಡುತ್ತಾರೆ. ಗುರುಗಳ ಧ್ಯಾನ, ಭಜನೆ ಮಾಡುತ್ತಾರೆ. ಕೆಲವರು ಸತ್ಸಂಗ ಏರ್ಪಡಿಸುತ್ತಾರೆ. ಹಲವು ಕಡೆ ಗುರುಗಳಿಗೆ ಸತ್ಕಾರ ಕಾರ್ಯಕ್ರಮ(felicitation) ಇರುತ್ತದೆ. ಒಟ್ಟಿನಲ್ಲಿ ಈ ದಿನ ಗುರುವಿನ ಸ್ಮರಣೆಗೆ ಮೀಸಲಾಗಿದೆ.
Useful Links:
- Guru Stotra
- Sai Bhajan with lyrics
- Guru Charitre Song
- Datta bhajan with lyrics
- Sai Baba Stotras
- Dattatreya Ashtottara
- Sai Baba Bhajans - RadioSai.org
- Datta Vaibhava Vol 1- Album Link
- Datta Vaibhava Vol 2 - Album Link
- Dattatreya Bhajans - Album Link
- Sai Baba Bhajans videos
ಶ್ರೀ,
ReplyDeleteನಾನು ಇವೆಲ್ಲಾ ಹಬ್ಬಗಳನ್ನು ಮಾಡುವುದಿಲ್ಲವಾದ್ರೂ ಹೊಸ ವಿಚಾರ ತಿಳಿದುಕೊಂಡೆ. ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು!
ರೂಪ
ReplyDeleteನಿಮ್ಮ ಮೆಚ್ಚುಗೆ ತಿಳಿಸಿದ್ದಕ್ಕೆ ಧನ್ಯವಾದ. ನಮ್ಮ ಹಬ್ಬಗಳ ಬಗ್ಗೆ ತಿಳಿಸುವುದೇ ಈ ಬ್ಲಾಗಿನ ಉದ್ದೇಶ:)
Shree, tumba chennagide nimma antarjala taana. Naanu nim ee thanavannu nanna blogige serusutha iddene :)
ReplyDeleteLG avare
ReplyDeletenimage nanna DhanyavaadagaLu :)
kindly send me the Brahaspati Ashtottara.
ReplyDelete