Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label .Other Stotras. Show all posts
Showing posts with label .Other Stotras. Show all posts

August 11, 2013

Subrahmanya Shodashanama Stotram in Kannada / ಶ್ರೀ ಸುಬ್ರಹ್ಮಣ್ಯ ಷೋಡಶನಾಮ ಸ್ತೋತ್ರಂ


ಸುಬ್ರಹ್ಮಣ್ಯಂ ಪ್ರಣಾಮ್ಯಹಂ ಸರ್ವಘ್ಯಂ ಸರ್ವಗಂಸದಾ |
ಅಭೀಪ್ಸಿತಾರ್ಥ ಸಿದ್ಧ್ಯರ್ಥಂ ಪ್ರವಕ್ಷ್ಯೇನಾಮಷೋಡಶಂ || ೧||

ಪ್ರಥಮೋಜ್ಞಾನ ಶಕ್ತ್ಯಾತ್ಮಾ ದ್ವಿತೀಯೋ ಸ್ಕಂದ ಏವಚ |
ಅಗ್ನಿಭೂಶ್ಚ ತೃತೀಯಸ್ಯಾತ್ ಬಾಹುಳೇಯಶ್ ಚತುರ್ಥಕಃ || ೨||

ಗಾಂಗೇಯಃ ಪಂಚಮೋವಿದ್ಯಾತ್ ಷಷ್ಠಃ ಶರವಣೋತ್ಭವಃ |
ಸಪ್ತಮಃ ಕರ್ತಿಕೇಯಃಸ್ಯಾತ್ ಕುಮರಸ್ಯಾದಥಾಷ್ಟಕಃ || ೩||

ನವಮಃ ಷಣ್ಮುಖಶ್ಚೈವ ದಶಮಃ ಕುಕ್ಕುಟದ್ವಜಃ |
ಏಕಾದಶಃ ಶಕ್ತಿಧರೋ ಗುಹೋ ದ್ವಾದಶ ಏವಚ || ೪||

ತ್ರಯೋದಶೋ ಬ್ರಹ್ಮಚಾರೀ ಷಾಣ್ಮಾತುರ ಚತುರ್ದಶಃ |
ಕ್ರೌಂಚಭಿತ್ ಪಂಚದಶಕಃ ಷೋಡಶಃ ಶಿಖಿವಾಹನಃ || ೫||

ಏತತ್ ಷೋಡಶನಾಮಾನಿ ಜಪೇತ್ ಸಮ್ಯಕ್ಸದಾದರಂ |
ವಿವಾಹೇದುರ್ಗಮೇ ಮಾರ್ಗೇ ದುರ್ಜಯೇ ಚ ತಥೈವಚ || ೬||

ಕವಿತ್ವೇಚ ಮಹಾಶಸ್ತ್ರೇ ವಿಘ್ಯಾನಾರ್ಥೀ ಫಲಂಲಭೇತ್ |
ಕನ್ಯಾರ್ಥೀ ಲಭತೇಕನ್ಯಾ ಜಯಾರ್ಥೀ ಲಭತೇ ಜಯಂ || ೭||

ಪುತ್ರಾರ್ಥೀ ಪುತ್ರಲಾಭಶ್ಚ ಧನಾರ್ಥೀ ಲಭತೇ ಧನಂ |
ಆಯುರಾರೋಗ್ಯ ವಶ್ಯಶ್ಚ ಧನಧಾನ್ಯ ಸುಖಾವಹಂ ||

|| ಇತಿ ಶ್ರೀ ಸುಬ್ರಹ್ಮಣ್ಯ ಷೋಡಶನಾಮಸ್ತೋತ್ರಂ ||


1.Audio link by T.S.Aswini Sastry


March 5, 2013

Uma Maheshwara Stotra in Kannada / ಉಮಾ ಮಹೇಶ್ವರ ಸ್ತೋತ್ರ

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಉಮಾ ಮಹೇಶ್ವರ ಸ್ತೋತ್ರವನ್ನು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀ ಉಮಾ ಮಹೇಶ್ವರ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

Right click on the image and open in new tab to enlarge

1.Audio Link by Pandit Jasraj

2.Audio Link by S.P.Balasubramanyam

3.Audio Link by another artist [song 3]

Related Link:

July 16, 2011

Sri Subramanya Bhujangam in Kannada/ ಶ್ರೀ ಸುಬ್ರಹ್ಮಣ್ಯ ಭುಜಂಗಮ್

ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ತುತಿ ಮಾಡುತ್ತದೆ.ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Bombay Sisters

2.Audio Link by Anuradha krishnamoorty[song 1]

3.Audio Link by Malola Kannan

January 21, 2011

Devi Khadgamala Stotra in Kannada / ದೇವಿ ಖಡ್ಗಮಾಲಾ ಸ್ತೋತ್ರ

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಹೆಸರೇ ಹೇಳುವಂತೆ ಈ ಸ್ತೋತ್ರವನ್ನು ಪಠಿಸಿದರೆ ನಿಮಗೆ ದೇವಿಯ ಖಡ್ಗದ ಮಾಲೆ ಲಭಿಸುವುದು. ಅಂದರೆ ದೇವಿಯು ನಿಮ್ಮನ್ನು ಸದಾ ಕಾಪಡುತ್ತಾಳೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



1.Audio Link by Nithya Santhoshini Gayatri [song 2]

2.Audio Link by Priya Sisters

3.Audio link by T.S.Ranganathan

4.Audio Link [song 3]

December 20, 2010

Guru Charitre Song in Kannada/ Condensed Gurucharitre/ಸಂಕ್ಷಿಪ್ತ ಗುರುಚರಿತ್ರೆ/ಗುರುಚರಿತ್ರೆ ಹಾಡು


ಈ ದಿನ ದತ್ತ ಜಯಂತಿ. ದತ್ತಾತ್ರೇಯರ ಜೀವನ, ಮಹಿಮೆಗಳನ್ನು ಗುರು ಚರಿತ್ರೆ ಪುಸ್ತಕವು 52 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವಿವರಿಸುತ್ತದೆ. ಅಷ್ಟೊಂದು ದೊಡ್ಡ ಪುಸ್ತಕವನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಹಾಗೂ ಅದನ್ನು ಓದಲು ವಾರಗಳು,ತಿಂಗಳುಗಳು ಬೇಕು. ನನ್ನ ಬಳಿ ಗುರುಚರಿತ್ರೆಯ ಸಾರಾಂಶವನ್ನು ಹೇಳುವ ಒಂದು ಚಿಕ್ಕ ಹಾಡು ಇದೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೀನಿ. ಇದು ಚಿಕ್ಕದಾಗಿದ್ದು, ಹೇಳಲು ಕೆಲವೇ ನಿಮಿಷಗಳು ಸಾಕು. ಈ ಸಂಕ್ಷಿಪ್ತ ಗುರುಚರಿತ್ರೆಯನ್ನು ಈ ದಿನ ಹೇಳಿ, ಗುರುಗಳ ಅನುಗ್ರಹಕ್ಕೆ ನಾವೆಲ್ಲ ಪಾತ್ರರಾಗೋಣ.

ಕೆಳಗೆ ಗುರುಚರಿತ್ರೆ ಹಾಡು ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)

October 31, 2010

Pregnancy Mantras/Garbha Raksha Stotra in Kannada / ಗರ್ಭ ರಕ್ಷಾ ಸ್ತೋತ್ರ


ಸ್ನೇಹಿತರೊಬ್ಬರಿಗೆ ಸಧ್ಯದಲ್ಲೇ ಮಗು ಆಗುತ್ತಿದೆ. ಅವರು ಗರ್ಭಿಣಿ ಆಗಿರುವಾಗ ಕೇಳುತ್ತಿರುವ ಮಂತ್ರ ಸ್ತೋತ್ರಗಳನ್ನು ನನಗೆ ಕೊಟ್ಟಿದ್ದಾರೆ. ಇದನ್ನು ನನ್ನ ಬ್ಲಾಗ್ ಮೂಲಕ ಓದುಗರ ಜೊತೆ ಹಂಚಿಕೊಳ್ಳಿ ಅಂತ ಹೇಳಿದ್ದರೆ. ಅವರಿಗೆ ನನ್ನ ಧನ್ಯವಾದಗಳು :)
ಗರ್ಭ ರಕ್ಷಾ ಸ್ತೋತ್ರ ಹೆಸರೇ ಹೇಳುವಂತೆ ಇದು ಗರ್ಭಿಣಿ ಹಾಗು ಅವಳ ಮಗುವನ್ನು ರಕ್ಷಣೆ ಮಾಡುತ್ತದೆ. ಈ ಸ್ತೋತ್ರಗಳನ್ನು ಗರ್ಭಿಣಿಯು ಕೇಳಿದರೆ ಸುರಕ್ಷಿತ, ಆರೋಗ್ಯಕರ, ಸುಲಭ ಗರ್ಭಧಾರಣೆ ಹಾಗು ಹೆರಿಗೆ ಆಗುವುದು ಎಂಬ ನಂಬಿಕೆ.

ಇವರು ನನಗೆ ಎರಡು ಬೇರೆ ಬೇರೆ ಸ್ತೋತ್ರಗಳನ್ನು ಕೊಟ್ಟಿದ್ದಾರೆ.ಮೊದಲನೆಯ ಸ್ತೋತ್ರವನ್ನು ಅನಂತ ರಾಮ ದೀಕ್ಷಿತರು ಎಂಬುವವರು ರಚಿಸಿದ್ದಾರೆ . ಗರ್ಭ ರಕ್ಷಾಂಬಿಕೇ ದೇವಿಯ ದೇವಸ್ಥಾನ ತಿರುಕರುಕ್ಕವೂರ್ ಎಂಬ ಊರಲ್ಲಿ ಇದ್ದು, ಈ ದೇವಿಯ ಮೇಲೆ ಈ ಸ್ತೋತ್ರವನ್ನು ರಚಿಸಿದ್ದಾರೆ ಎಂದು ಹೇಳುತ್ತಾರೆ.

1st Version:(Click on the image below to enlarge)




Audio Link by Vijaya Shanker

------------------------------------

ಎರಡನೆಯ ಸ್ತೋತ್ರದಲ್ಲಿ ೯ ಪಂಕ್ತಿಗಳಿವೆ. ಗರ್ಭಿಣಿಯ ೯ ತಿಂಗಳು, ಒಂದು ತಿಂಗಳಿಗೆ ಒಂದು ಪಂಕ್ತಿಯಂತೆ ಈ ಸ್ತೋತ್ರವನ್ನು ರಚಿಸಲಾಗಿದೆ.
2nd Version:(Click on the image below to enlarge)



Audio link by Balaji Tambe (Song 3)


-------------------------------------

Audio link to Other Pregnancy Stotras:

1.Garbha Raksha Album

2.Garbh Sanskar Album(Raaga)

3.Garbha Sankar Album (hummaa)

ಎಲ್ಲ ಗರ್ಭಿಣಿಯರಿಗೂ ನನ್ನ ಶುಭ ಹಾರೈಕೆಗಳು. ನಿಮ್ಮ ಮಡಿಲಲ್ಲಿ ಮುದ್ದಾದ, ಆರೋಗ್ಯವಾದ ಕಂದಮ್ಮ ಬೇಗ ಬರಲಿ:)

September 26, 2010

Shri SaraswatI DvAdashanAma stotram in Kannada /ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್



ನವರಾತ್ರಿ ಹಬ್ಬ ಬರುತ್ತಾ ಇದೆ . ಅದಕ್ಕಾಗಿ ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರ ಕೆಳಗಿದೆ.


ಸರಸ್ವತೀ ತ್ವಿಯಂ ದೃಷ್ಟ್ವಾ ವೀಣಾಪುಸ್ತಕ ಧಾರಿಣೀ |
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ || ||
ಪ್ರಥಮಂ ಭಾರತೀನಾಮ ದ್ವಿತೀಯಂಚ ಸರಸ್ವತೀ |
ತ್ರ್‍‍ಇತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ || ||
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣಿ || ||
ನವಮಂ ಬುದ್ಧಿಧಾತ್ರೀಚ ದಶಮಂ ವರದಾಯಿನಿ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರಿ || ||
ಬ್ರಾಹ್ಮೇ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ |
ಜಿಹ್ವಾಗ್ರೇ ವಸತೇ ನಿತ್ಯಂ ಬ್ರಹ್ಮರೂಪಾ ಸರಸ್ವತೀ || ||

||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಂ ಸಂಪೂರ್ಣಮ್||


1.Audio Link by Bangalore Sisters[song 7]


2.Audio Link


August 29, 2010

Sankata Nashana Ganesha Stotram in Kannada/ Ganesha Dwadashanama /ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ



ಈ ಸ್ತೋತ್ರದ ಹೆಸರೇ ಹೇಳುವಂತೆ ಇದನ್ನು ಪಠಿಸಿದರೆ ಎಲ್ಲ ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ. ಇದರಲ್ಲಿ ಗಣಪತಿಯ ೧೨ ನಾಮಗಳಿವೆ. ಆದ್ದರಿಂದ ಇದನ್ನು ಗಣೇಶ ದ್ವಾದಶ ನಾಮಸ್ತೋತ್ರ ಎಂದೂ ಕರೆಯುತ್ತಾರೆ.

ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್‌
ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್‌ 2

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್‌ 3

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್‌
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್‌ 4

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃ ಪ್ರಭೋ 5

ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್‌
ಪುತ್ರಾರ್ಥಿ ಲಭತೇ ಪುತ್ರಾನ್‌ ಮೋಕ್ಷಾರ್ಥಿ ಲಭತೇ ಗತಿಮ್‌ 6

ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್‌
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ 7

ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್‌
ತಸ್ಯ ವಿದ್ಯಾ ಭವೇತ್‌ಸರ್ವಾ ಗಣೇಶಸ್ಯ ಪ್ರಸಾದತಃ 8

ಇತಿ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ


1.Audio Link by Shruti Sadolikar [song 1]

2.Audio Link by Sikkil Gurucharan [song 7]

3.Audio Link by a group [song 4]

4.Audio Link by another artist

June 17, 2010

Shlokas for Kids / Everyday Shlokas in Kannada / ಮಕ್ಕಳಿಗೆ ಶ್ಲೋಕಗಳು


ನಮ್ಮೆಲರಿಗೂ ಹಿಂದೂ ಧರ್ಮದ ಬಗ್ಗೆ ಬಹಳ ಗೌರವ, ಅಭಿಮಾನ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಗ್ಗೆ ನಮ್ಮ ಮಕ್ಕಳಿಗೂ ಆಸಕ್ತಿ, ಅಭಿರುಚಿ ಹುಟ್ಟಿ, ಅವರೂ ಈ ಸಂಪ್ರದಾಯಗಳನ್ನು ಮುಂದುವರೆಸಲಿ ಎಂದು ಎಲ್ಲ ತಂದೆ ತಾಯಿಯರಿಗೂ ಆಸೆ ಇರುವುದು ಸಹಜ. ಮಕ್ಕಳು ಸಹಜವಾಗಿ ಕುತೂಹಲದಿಂದ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ, ಯಾವುದೇ ಮಾಹಿತಿಯನ್ನು ಬೇಗ ಗ್ರಹಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಪಾಠ, ವಿದ್ಯೆ ಜೊತೆಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆಯೂ ಅವರಿಗೆ ತಿಳುವಳಿಕೆ ಕೊಡುವುದು ಉಚಿತ ಎಂದು ಅನಿಸುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದಂತೆ ಅನೇಕ ಚಿಕ್ಕ ಸ್ತೋತ್ರ,ಶ್ಲೋಕಗಳು ಇವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಶ್ಲೋಕಗಳ ಪಟ್ಟಿಯನ್ನು ಕೆಳಗೆ ಮಾಡಿದ್ದೀನಿ.ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.



Interactive Websites to learn slokas:
1.Slokas Online
2.Hindu Kids
3.Slokaskids

Audio Links for Shlokas:

3.Collection of 25 Gayatris
4.Shlokas by Bombay Sisters
5.Daily Shlokas by S.P.Balsubramanyam
6.Prarthana Slokas - Vol 1
7.Prarthana Slokas - Vol 2

8.Divine Chants by Pallavi Arun
9.Daily Prayers by T.S.Ranganathan Vol 1
10.Daily Prayers by T.S.Ranganathan Vol 2
11.Daily Prayers by T.S.Ranganathan Vol 3
12.Daily Prayers by T.S.Ranganathan Vol 4


13.Prerana - Slokas for Children
14.Makkala Panchanga
15.Sumiran by Lata Mangeshkar
16.Mantras for Young Children


ಪುಟಾಣಿಗಳಿಗೆ ಶ್ಲೋಕಗಳನ್ನು ಯಶಸ್ವಿಯಾಗಿ ಹೇಳಿಕೊಡಲು ಪೋಷಕರಿಗೆ ನನ್ನ ಶುಭ ಹಾರೈಕೆಗಳು :)

May 23, 2010

Kanakadhara Stotra in Kannada / ಕನಕಧಾರಾ ಸ್ತೋತ್ರ


ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರ ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ. ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.


ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bombay Sister

2.Audio Link by M.S.Subbalakshmi

3.Another Audio Link


February 27, 2010

Aditya Hrudayam in Kannada / ಆದಿತ್ಯ ಹೃದಯಮ್

ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಸ್ತೋತ್ರವನ್ನು ಪಠಿಸುತ್ತಾರೆ. ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.
ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio link by S.P.Balasubramanyam

2. Audio link by Purushottama Sai (song starts at 2.00 minutes)

3. Audio by Sulamagala Sisters below




4.Audio by another artist(prapatti.com)


February 16, 2010

Navagraha Peeda hara Stotram in Kannada / ನವಗ್ರಹ ಪೀಡಾ ಪರಿಹಾರ ಸ್ತೋತ್ರಂ


ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ರವಿಃ ೧

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ವಿಧುಃ ೨

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ ಸದಾ
ವೃಷ್ಟಿಕೃದ್ ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ೩

ಉತ್ಪಾತರೂಪೋ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ ೪

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ೫

ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ೬

ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ
ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ೭

ಮಹಾಶಿರಾ ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ
ಅತನುಶ್ಚೋರ್ಧ್ವಕೇಶಶ್ಚ ಪೀಡಾಂ ಹರತು ಮೇ ಶಿಖೀ ೮

ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ
ಉತ್ಪಾತರೂಪೋ ಜಗತಾಂ ಪೀಡಾಂ ಹರತು ಮೇ ತಮಃ ೯

ಇತಿ ನವಗ್ರಹ ಪೀಡಾಹರ ಸ್ತೋತ್ರಂ ಸಂಪೂರ್ಣಮ್


1.Audio Link by Vedavalli(raaga)

2.Audio Link by Vedavalli(hummaa)

3.Audio link by R.Vedavalli below:

December 25, 2009

Vishnu Shodashanama Stotram in Kannada / ಶ್ರೀ ವಿಷ್ಣು ಷೋಡಶ ನಾಮ ಸ್ತೋತ್ರ

ಔಷಧೇ ಚಿಂತಯೇ ವಿಷ್ಣುಂ(೧),ಭೋಜನೆ ಚ ಜನಾರ್ಧನಂ,(೨)
ಶಯನೇ ಪದ್ಮನಾಭಂ ಚ,(೩)ವಿವಾಹೆ ಚ ಪ್ರಜಾಪತಿಂ, (೪)
ಯುದ್ಧೇ ಚಕ್ರಧರಂ ದೇವಂ,(೫)ಪ್ರವಾಸೆ ಚ ತ್ರಿವಿಕ್ರಮಂ, (೬)
ನಾರಾಯಣಂ ತನು ತ್ಯಾಗೆ,(೭) ಶ್ರೀಧರಂ ಪ್ರಿಯ ಸಂಗಮೆ,(೮)
ದುಃಸ್ವಪ್ನೆ ಸ್ಮರ ಗೋವಿಂದಂ,(೯) ಸಂಕಟೆ ಮಧು ಸೂಧನಂ,(೧೦)
ಕಾನನೇ ನರಸಿಂಹಂ ಚ,(೧೧) ಪಾವಕೆ ಜಲಶಾಯಿನಂ,(೧೨)
ಜಲಮಧ್ಯೆ ವರಾಹಂ ಚ,(೧೩)ಪರ್ವತೆ ರಘು ನಂದನಂ,(೧೪)
ಗಮನೆ ವಾಮನಂ ಚೈವ,(೧೫)ಸರ್ವ ಕಾರ್ಯೇಷು ಮಾಧವಂ,(೧೬)

ಷೋಡಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಟೇತ್
ಸರ್ವಪಾಪ ವಿರ್ನಿಮುಕ್ತೋ ವಿಷ್ಣುಲೋಕೆ ಮಹೀಯತೆ
ಇತಿ ಶ್ರೀ ವಿಷ್ಣು ಷೋಡಶ ನಾಮಸ್ತೋತ್ರಂ ಸಂಪೂರ್ಣಂ


1.Audio link by Ravindra Sathe(Raaga)

2. Vishnu Shodashanaama Stotra (hummaa)

October 13, 2009

Ashtalakshmi Stotra in Kannada / ಅಷ್ಟಲಕ್ಷ್ಮೀ ಸ್ತೋತ್ರ

ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Meera Krishna ,(Album Link)

2. Audio Link by Shweta Pandit

3. Audio Link by Sowmya (song 8)

September 10, 2009

Sri Lalita Trishati Stotra in Kannada / ಶ್ರೀ ಲಲಿತ ತ್ರಿಶತಿ ಸ್ತೋತ್ರ

ನವರಾತ್ರಿ ಹತ್ತಿರ ಬರುತ್ತಿದೆ, ಹಾಗಾಗಿ ಈ ತಿಂಗಳು ದೇವಿಯ ಸ್ತೋತ್ರಗಳನ್ನು ಪ್ರಕಟಿಸುತ್ತೀನಿ. ಪುರಾಣಗಳಲ್ಲಿ 18 ನೇ ಪುರಾಣ ಬ್ರಹ್ಮಾಂಡ ಪುರಾಣ. ಈ ಪುರಾಣದಲ್ಲಿ ಲಲಿತ ದೇವಿಯನ್ನು ಅತಿಶಯವಾಗಿ ಹೊಗಳಿ, ಸ್ತುತಿಸಲಾಗಿದೆ. ಇದರಲ್ಲಿ ಲಲಿತೊಪಾಖ್ಯಾನ (ಉಪಾಖ್ಯಾನ - ಉಪ ಕಥೆ ; ಲಲಿತಾ ದೇವಿಯ ಕಥೆ), ಲಲಿತಾ ಸಹಸ್ರನಾಮ, ಲಲಿತಾ ತ್ರಿಶತಿ ಸ್ತೋತ್ರಗಳಿವೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. ತ್ರಿಶತಿ ಅಂದರೆ 300. ಈ ಲಲಿತಾ ತ್ರಿಶತಿ ಸ್ತೋತ್ರದಲ್ಲಿ ದೇವಿಯ 300 ನಾಮಗಳಿವೆ. ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ. ೪ ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages
1-4


Lalitha Trishathi audio:

1. Audio Link by T.S.Ranganathan below


2. Audio Link by S.Janaki (recited as NamavaLi )

3. Audio Link - Part - 1, Part - 2 ( recited as Namavali)

ಲಲಿತಾ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)


Related Link:
Lalita Sahasranama

August 27, 2009

Durga Saptashloki Stotra in Kannada / ದುರ್ಗಾ ಸಪ್ತಶ್ಲೋಕಿ ಸ್ತೋತ್ರ

ನವರಾತ್ರಿ ಹಬ್ಬ ಸಧ್ಯದಲ್ಲೇ ಬರುತ್ತಿದೆ. ಅದಕ್ಕಾಗಿ ದುರ್ಗಾದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ದುರ್ಗಾ ಸಪ್ತ ಶ್ಲೋಕಿ ಸ್ತೋತ್ರದಲ್ಲಿ ೭ ಸಾಲುಗಳಿವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio by Prakash Kaushik

2.Audio by Anuradha Paudwal below:

3.Audio link by Anuradha Paudwal
Link to Durga Saptashloki Stotra in Hindi and English

August 20, 2009

All Devi Stotras & Songs / ದೇವಿ ಸ್ತೋತ್ರಗಳು ಹಾಡುಗಳು




Listen to Devi Stotras Playlist - top of the sidebar on right


ಗೌರಿ ಹಬ್ಬ, ನಂತರ ನವರಾತ್ರಿ ಬರುತ್ತಾ ಇದೆ. ಅದಕ್ಕಾಗಿ ದೇವಿಯ ಎಲ್ಲ ಸ್ತೋತ್ರಗಳು, ಹಾಡುಗಳನ್ನು ಒಂದು ಕಡೆ ಸಂಗ್ರಹಿಸಿದ್ದೀನಿ.
List of All Devi Stotras & Songs . Click on the name to go to the respective link.



Stotras (lyrics + Audio)Kanakadhara Stotra
Durga AshtottaraMookambika Ashtakam
Tulasi AshtottaraDevi Stotras in English
Durga Kavachamaddnewstotra
RajaRajeshwari ashtakaaddnew
Durga Ashtottara ShatanamaSongs & Audio Links
Lalitha AshtottaraSongs on Lakshmi(with lyrics)
Gowri AshtottaraSongs on devi(with lyrics)
Saraswati AshtottaraSongs on Saraswathi(with lyrics)
Saraswati StotrasDurga Prarthana - Vol 1
Lakshmi AshtottaraDurga Prarthana - Vol 2
Mahalakshmi AshtakamDevi Sookta Maala
Devi NavaratnamalikaDevi Stotra Maala
Lalita SahasranamaLakshmi Sahasranama
Soundarya LahariLakshmi Shobane
Mahishasura Mardini StotraPooja sankalpam (Devi Songs)
Lalita Devi PancharatnaPooja Phalam (Devi Songs)
Durga Sapta Shloki StotraAyigiri Nandini (Devi Songs)
Durga PancharatnaDevi Mahatma - Vol 1
Devi SuktamDevi Mahatma - Vol 2
Lalita Trishati StotraDevi Mahatma - Vol 3
Ashtalakshmi StotraDurga Suprabhatam
Sri Suktam
Bhavani Ashtakam
Saraswati Dwadashanama
Devi Khadgamala Stotra

August 3, 2009

Soundarya Lahari Stotra in Kannada / ಸೌಂದರ್ಯ ಲಹರಿ ಸ್ತೋತ್ರ

ಸೌಂದರ್ಯ ಲಹರಿ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಮಂತ್ರಗಳ ಪೈಕಿ ಇದು ಪ್ರಮುಖವಾದುದು. ಈ ಸ್ತೋತ್ರದಲ್ಲಿ ೧೦೦ ಪದ್ಯ/ಪಂಕ್ತಿಗಳಿವೆ (100 verses) ೧ - ೪೧ ಪದ್ಯಗಳನ್ನು ಆನಂದ ಲಹರಿ ಎಂದು ಕರೆಯುತ್ತಾರೆ. ೪೨ - ೧೦೦ ಪದ್ಯಗಳನ್ನು ಸೌಂದರ್ಯ ಲಹರಿ ಎನ್ನುತ್ತಾರೆ. ಲಹರಿ ಎಂದರೆ ಅಲೆ/ತೆರೆ ಎಂದರ್ಥ. ಆನಂದ ಲಹರಿ ಎಂದರೆ ಆನಂದದ ಅಲೆಗಳು, ಆನಂದ ನೀಡುವಂತದ್ದು. ಹೆಸರೇ ಸೂಚಿಸುವಂತೆ ಈ ಸ್ತೋತ್ರದಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಈ ಸ್ತೋತ್ರವನ್ನು ಪಠಿಸಿದರೆ ಆದಿಶಕ್ತಿಯು ನಿಮ್ಮ ಎಲ್ಲ ಅಭಿಲಾಷೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ. ಈ ಸ್ತೋತ್ರವನ್ನು 8 ಪುಟಗಳಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



Audio links by Various artists:

1.Audio Link - Bombay Sisters(MI)

2.Audio Link - M.L.Vasantha Kumari(MI)

3.Audio Link - Bangalore Sisters(KA)

4.Audio Link - Mambalam Sisters[RG]


Meaning of Saundarya Lahari Stotram


ಆದಿಶಕ್ತಿಯು ಎಲ್ಲರನ್ನು ಕಾಪಾಡಲಿ :)

July 8, 2009

Shiva Tandava Stotra in Kannada / ಶ್ರೀ ಶಿವ ತಾಂಡವ ಸ್ತೋತ್ರ

ಪೂಜಾ ವಿಧಾನಕ್ಕೆ ಭೇಟಿ ಮಾಡಿದ Vinay ಅವರು ಶಿವ ತಾಂಡವ ಸ್ತೋತ್ರದ ಬಗ್ಗೆ ಬರೆಯಿರಿ ಅಂತ ಕೇಳಿದ್ದರು. ಇಲ್ಲಿದೆ ನಿಮ್ಮ ಸ್ತೋತ್ರ. ತಾಂಡವ ಎಂದರೆ ಶಿವನ ಒಂದು ಬಗೆಯ ನೃತ್ಯ. ಈ ಸ್ತೋತ್ರವನ್ನು ರಾವಣನು ರಚಿಸಿದ್ದಾನೆ. ರಾವಣನು ಈ ಸ್ತೋತ್ರವನ್ನು ಹೇಳಿ ಶಿವನನ್ನು ಮೆಚ್ಚಿಸಿ ವರಗಳನ್ನು ಪಡೆದನು ಎನ್ನುತ್ತಾರೆ. ಅಂತೆಯೇ ಯಾರು ಈ ಸ್ತೋತ್ರವನ್ನು ಪಠಿಸುತ್ತಾರೋ ಅವರಿಗೆ ಈಶ್ವರು ಎಲ್ಲ ತರದ ಸುಖ ಸಂಪತ್ತನ್ನು ಕೊಡುತ್ತಾನೆ ಎಂಬ ನಂಬಿಕೆ.
ಶ್ರೀ ಶಿವ ತಾಂಡವ ಸ್ತೋತ್ರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



Meaning of Shiva tandava Stotram

1.AudioLink by Ravindra Sathe [song 7]

2.AudioLink by Rt. Jasraj[song 7]

3.AudioLink- by T.S.Ranganathan[song 7]

4.Shiva Tandav Stotram by RameshBhai Oza

ಶಿವನ ಕೃಪೆ ಎಲ್ಲರ ಮೇಲೂ ಸದಾ ಇರಲಿ :)

Related Link:

May 18, 2009

Guru Stotra in Kannada / ಗುರು ಸ್ತೋತ್ರ / ಗುರು ವಂದನ

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಗುರು ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ ಎಲ್ಲ ಹೊಂದಿರುವನು. ಒಂದು ಅಕ್ಷರ ಕಲಿಸಿದರೂ ಸಾಕು, ಅವನು ಗುರುವಿನ ಸ್ಥಾನ ಪಡೆಯುತ್ತಾನೆ. ನಮ್ಮ ತಾಯಿ, ತಂದೆ, ಬಂಧುಗಳು, ಹಿರಿಯರು, ಮಿತ್ರರು, ಶಿಕ್ಷಕರು ಇವರೆಲ್ಲರೂ ಗುರುಗಳೇ. ಗುರುವಿನ ಮಾರ್ಗದರ್ಶನ, ಗುರುವಿನಿಂದ ಪಡೆದ ಜ್ಞಾನವೇ ನಮ್ಮ ಸಾಧನಗಳು ಈ ಜೀವನದಲ್ಲಿ. ಇಂತಹ ಮಹಿಮೆ, ಪ್ರಭಾವ ಇರುವ ಗುರುವಿಗೆ ಈ ಗುರು ಸ್ತೋತ್ರದಲ್ಲಿ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇವೆ. ಗುರು ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

AudioLink of Guru Stotram by Usha Seturaman

Audio Link by another artist

Blog Widget by LinkWithin