ಓಂ ನಮಃ ಶಿವಾಯ
"ಶಿವರಾತ್ರಿ ಹಬ್ಬದ ಶುಭಾಶಯಗಳು "
ಮಹಾ ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ/ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರಬೇಕು. ಈ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಚ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಅಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ಮಾಡುತ್ತಾರೆ.
ಶಿವ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆಮಾಡುತ್ತಾರೆ. ಜಾವ ( ಯಾಮ) - ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು.
ನಮ್ಮ ಮನೆಯಲ್ಲಿ ಶಿವರಾತ್ರಿ ದೊಡ್ಡ ಹಬ್ಬ. ಈ ದಿನ ಸಾಮಾನ್ಯವಾಗಿ ಈಶ್ವರ ದೇವಾಲಯಗಳಲ್ಲಿ ರಾತ್ರಿ ಇಡೀ ಪೂಜೆ, ಭಜನೆ ನಡುಯುತ್ತದೆ. ನಮ್ಮ ಮನೆಯಲ್ಲಿ ಶಿವರಾತ್ರಿಯ ದಿನ ಮಧ್ಯರಾತ್ರಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವ ಅಭ್ಯಾಸ.
ನನ್ನ ಬ್ಲಾಗಿನಲ್ಲಿ ಇರುವ ಈಶ್ವರನ ಹಲವು ಸ್ತೋತ್ರಗಳ ಪಟ್ಟಿ ಇಲ್ಲಿದೆ:
- ಶಿವ ಸುಪ್ರಭಾತ /Shiva suprabhata
- ಶಿವ ಅಷ್ಟೋತ್ತರ/Shiva Ashtottara
- ಶಿವಾಷ್ಟಕ /Shivaashtaka
- ಲಿಂಗಾಷ್ಟಕ /Lingaashtaka
- ಬಿಲ್ವಾಷ್ಟಕ /Bilvaashtaka
- ಶಿವ ಪಂಚಾಕ್ಷರ ಸ್ತೋತ್ರ /Shiva Panchakshara Stotra
- Shiva Pratah Smarana Stotra
- Shiva Raksha Stotra
- Shiva Rudrashtaka
- Shiva Tandava Stotra
- Uma Maheshwara Stotra
- Link to all Shiva Stotras
- Shiva Stotras in English
- ಶಿವಾನಂದ ಲಹರಿ
- ರುದ್ರ ಚಮಕಂ
- ಶಿವ ಸಹಸ್ರನಾಮ
- ಕಾಲಭೈರವಾಷ್ಟಕ
- ವಿಶ್ವನಾಥಾಷ್ಟಕ
- Shiva Pradosha Stotra
- ಓಂ ನಮಃ ಶಿವಾಯ - continous chanting of Om namah Shivaya
ಮಹೇಶ್ವರನ ಆಶೀರ್ವಾದ ಎಲ್ಲರನ್ನು ಸದಾ ಕಾಪಾಡಲಿ :)
can u pls provide lyrics for the songs which starts and goes like these... :-
ReplyDelete[1] "Mangalam gurushree chandramouleshwarage, shakti ganapathi sharadambege... etc."
[2] "Om mangalam, omkara mangalam-- mangalam song.... etc."
[3] Aarathi songs for varamahalakshmi, Mangala gowri, Swarna Gowri, Ganesha etc.
Thanks a lot for the nice blog.. :D
Regards,
NSP
I have posted many arathi songs in my bhakthigeetha blog. please check this link Bhakthigeetha blog
ReplyDeleteThanks for giving good matter about lord Shiva.
ReplyDelete