ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ತುಳಸಿ ಅಷ್ಟೋತ್ತರ ಕೆಳಗಿದೆ
ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ
ತುಳಸಿ ವಂದನೆ - Audio link(Album)
Tulasi Stotras by Ashit desai
Tulasi Stotramaala Vol 1
Tulasi Stotramaala Vol 2
ತುಳಸಿ ಸ್ತುತಿ-deezer link is no longer available
ತುಳಸಿ ನಮಾಷ್ಟಕಂ - deezer link is no longer available
Songs on Tulasi:
1. Kalyanam Tulasi Kalyanam
2. Brundavanave Mandiravaagiha
ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ. ಇದರೊಂದಿಗೆ ತುಳಸೀ ಗಿಡಕ್ಕೆ ಔಷಧೀಯ ಗುಣಗಳೂಇದೆ. ಕೆಮ್ಮು ನೆಗಡಿಗೆ , ಚರ್ಮ ವ್ಯಾಧಿಗಳಿಗೆ ಮನೆ ಮದ್ದು ಈ ತುಳಸೀ.
ನೆಲ್ಲಿಕಾಯಿ ಕೂಡ ಔಷಧೀಯ ಗುಣ ಹೊಂದಿದೆ. ಇದು ವಾತ ಪಿತ್ತಗಳನ್ನು ಶಮನ ಮಾಡುತ್ತದೆ ಎಂದು ಹೇಳಿತ್ತಾರೆ. ಹಬ್ಬ ಆದ ನಂತರ ನಮ್ಮ ಮನೆಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮೊರಬ್ಬ ಮಾಡುತ್ತಾರೆ. ಉಪ್ಪಿನಕಾಯಿ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಾ ಇದೆ :)
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ತುಳಸಿ ಅಷ್ಟೋತ್ತರ ಕೆಳಗಿದೆ
ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ
ತುಳಸಿ ವಂದನೆ - Audio link(Album)
Tulasi Stotras by Ashit desai
Tulasi Stotramaala Vol 1
Tulasi Stotramaala Vol 2
ತುಳಸಿ ಸ್ತುತಿ-deezer link is no longer available
Amazing info on all the required to detail. Xlent work. Khudos
ReplyDeleteGUPTA