Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

November 15, 2008

Kanakadasa Jayanthi / ಕನಕದಾಸ ಜಯಂತಿ

ಇಂದು ಕನಕದಾಸರ ಜಯಂತಿ. ಕನಕದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.

ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.

ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.

ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.

ಇವರ ದೇವರನಾಮಗಳು ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಹಾಡನ್ನು ಇಂದಿಗೂ ನಾವೆಲ್ಲ ಕೇಳುತ್ತೀವಿ, ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತ.

ಕನಕದಾಸ ಜಯಂತಿ ಪ್ರಯುಕ್ತ ನನ್ನ ಭಕ್ತಿಗೀತೆ ಬ್ಲಾಗಿನಲ್ಲಿ ಕನಕದಾಸರ ಕೆಲವು ದೇವರನಾಮಗಳನ್ನು, ಸಾಹಿತ್ಯ ಹಾಗು ಸಂಗೀತ ಎರಡನ್ನೂ ಹಾಕಿದ್ದೀನಿ.

ಕನಕದಾಸರ ದೇವರನಾಮಗಳನ್ನು ಸಂಗೀತಗಾರರು ಸುಮುಧುರವಾಗಿ ಹಾಡಿದ್ದಾರೆ. ಕೆಲವು ಹಾಡುಗಳ ಧ್ವನಿ ಮುದ್ರಣ ಕೆಳಗಿದೆ. ಹಾಡನ್ನು ಕೇಳಲು ಹಾಡಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.


ಇಂತಹ ಮಹನೀಯರ ಜನ್ಮ ದಿನವನ್ನು ಇಂದು ಆಚರಿಸುವುದಕ್ಕೆ ಹೆಮ್ಮೆ ಆಗುತ್ತೆ ಅಲ್ಲವೇ:)

Related Link:

Kanakadasara Devaranama with Lyrics at Bhakthigeetha

No comments:

Post a Comment

Thank you for your valuable comments. I will try to reply back as soon as possible.

Blog Widget by LinkWithin