Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label zlnkchekd. Show all posts
Showing posts with label zlnkchekd. Show all posts

August 11, 2013

Subrahmanya Shodashanama Stotram in Kannada / ಶ್ರೀ ಸುಬ್ರಹ್ಮಣ್ಯ ಷೋಡಶನಾಮ ಸ್ತೋತ್ರಂ


ಸುಬ್ರಹ್ಮಣ್ಯಂ ಪ್ರಣಾಮ್ಯಹಂ ಸರ್ವಘ್ಯಂ ಸರ್ವಗಂಸದಾ |
ಅಭೀಪ್ಸಿತಾರ್ಥ ಸಿದ್ಧ್ಯರ್ಥಂ ಪ್ರವಕ್ಷ್ಯೇನಾಮಷೋಡಶಂ || ೧||

ಪ್ರಥಮೋಜ್ಞಾನ ಶಕ್ತ್ಯಾತ್ಮಾ ದ್ವಿತೀಯೋ ಸ್ಕಂದ ಏವಚ |
ಅಗ್ನಿಭೂಶ್ಚ ತೃತೀಯಸ್ಯಾತ್ ಬಾಹುಳೇಯಶ್ ಚತುರ್ಥಕಃ || ೨||

ಗಾಂಗೇಯಃ ಪಂಚಮೋವಿದ್ಯಾತ್ ಷಷ್ಠಃ ಶರವಣೋತ್ಭವಃ |
ಸಪ್ತಮಃ ಕರ್ತಿಕೇಯಃಸ್ಯಾತ್ ಕುಮರಸ್ಯಾದಥಾಷ್ಟಕಃ || ೩||

ನವಮಃ ಷಣ್ಮುಖಶ್ಚೈವ ದಶಮಃ ಕುಕ್ಕುಟದ್ವಜಃ |
ಏಕಾದಶಃ ಶಕ್ತಿಧರೋ ಗುಹೋ ದ್ವಾದಶ ಏವಚ || ೪||

ತ್ರಯೋದಶೋ ಬ್ರಹ್ಮಚಾರೀ ಷಾಣ್ಮಾತುರ ಚತುರ್ದಶಃ |
ಕ್ರೌಂಚಭಿತ್ ಪಂಚದಶಕಃ ಷೋಡಶಃ ಶಿಖಿವಾಹನಃ || ೫||

ಏತತ್ ಷೋಡಶನಾಮಾನಿ ಜಪೇತ್ ಸಮ್ಯಕ್ಸದಾದರಂ |
ವಿವಾಹೇದುರ್ಗಮೇ ಮಾರ್ಗೇ ದುರ್ಜಯೇ ಚ ತಥೈವಚ || ೬||

ಕವಿತ್ವೇಚ ಮಹಾಶಸ್ತ್ರೇ ವಿಘ್ಯಾನಾರ್ಥೀ ಫಲಂಲಭೇತ್ |
ಕನ್ಯಾರ್ಥೀ ಲಭತೇಕನ್ಯಾ ಜಯಾರ್ಥೀ ಲಭತೇ ಜಯಂ || ೭||

ಪುತ್ರಾರ್ಥೀ ಪುತ್ರಲಾಭಶ್ಚ ಧನಾರ್ಥೀ ಲಭತೇ ಧನಂ |
ಆಯುರಾರೋಗ್ಯ ವಶ್ಯಶ್ಚ ಧನಧಾನ್ಯ ಸುಖಾವಹಂ ||

|| ಇತಿ ಶ್ರೀ ಸುಬ್ರಹ್ಮಣ್ಯ ಷೋಡಶನಾಮಸ್ತೋತ್ರಂ ||


1.Audio link by T.S.Aswini Sastry


July 16, 2011

Sri Subramanya Bhujangam in Kannada/ ಶ್ರೀ ಸುಬ್ರಹ್ಮಣ್ಯ ಭುಜಂಗಮ್

ಶ್ರೀ ಶಂಕರಾಚಾರ್ಯರು ರಚಿಸಿರುವ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ತುತಿ ಮಾಡುತ್ತದೆ.ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Bombay Sisters

2.Audio Link by Anuradha krishnamoorty[song 1]

3.Audio Link by Malola Kannan

September 26, 2010

Shri SaraswatI DvAdashanAma stotram in Kannada /ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್



ನವರಾತ್ರಿ ಹಬ್ಬ ಬರುತ್ತಾ ಇದೆ . ಅದಕ್ಕಾಗಿ ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರ ಕೆಳಗಿದೆ.


ಸರಸ್ವತೀ ತ್ವಿಯಂ ದೃಷ್ಟ್ವಾ ವೀಣಾಪುಸ್ತಕ ಧಾರಿಣೀ |
ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ || ||
ಪ್ರಥಮಂ ಭಾರತೀನಾಮ ದ್ವಿತೀಯಂಚ ಸರಸ್ವತೀ |
ತ್ರ್‍‍ಇತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ || ||
ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣಿ || ||
ನವಮಂ ಬುದ್ಧಿಧಾತ್ರೀಚ ದಶಮಂ ವರದಾಯಿನಿ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರಿ || ||
ಬ್ರಾಹ್ಮೇ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ |
ಜಿಹ್ವಾಗ್ರೇ ವಸತೇ ನಿತ್ಯಂ ಬ್ರಹ್ಮರೂಪಾ ಸರಸ್ವತೀ || ||

||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಂ ಸಂಪೂರ್ಣಮ್||


1.Audio Link by Bangalore Sisters[song 7]


2.Audio Link


May 23, 2010

Kanakadhara Stotra in Kannada / ಕನಕಧಾರಾ ಸ್ತೋತ್ರ


ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರ ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ. ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.


ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bombay Sister

2.Audio Link by M.S.Subbalakshmi

3.Another Audio Link


March 25, 2010

Durga Kavacham / ಶ್ರೀ ದುರ್ಗಾ ದೇವಿ ಕವಚಮ್

ಈಶ್ವರ ಉವಾಚ
ಶ್ರೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ ೧

ಅಜ್ಞಾತ್ವಾ ಕವಚಂ ದೇವಿ ದುರ್ಗಾಮಂತ್ರಂ ಚ ಯೋ ಜಪೇತ್
ಸ ನಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ ೨

ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ
ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ ೩

ಸುಗಂಧಾ ನಾಸಿಕೇ ಪಾತು ವದನಂ ಸರ್ವಧಾರಿಣೀ
ಜಿಹ್ವಾಂ ಚ ಚಂಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ ೪

ಅಶೋಕವಾಸಿನೀ ಚೇತೋ ದ್ವೌ ಬಾಹೂ ವಜ್ರಧಾರಿಣೀ
ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ ೫

ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ
ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ ೬

ಏವಂ ಸ್ಥಿತಾಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ
ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಸ್ತುತೇ ೭

ಇತಿ ದುರ್ಗಾ ಕವಚಂ ಸಂಪೂರ್ಣಮ್


1.Audio Link by Bombay Sisters

2.Audio Link by Syama

3.Audio Link by Sulamangala sisters

4.Audio link by T.S. Sastry

March 13, 2010

Sri Suktam in Kannada / ಶ್ರೀ ಸೂಕ್ತಂ

ಶ್ರೀ ಸೂಕ್ತ ಲಕ್ಷ್ಮೀ ದೇವಿಯ ಮೇಲಿನ ಸ್ತೋತ್ರ. ಈ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿಯು ಐಶ್ವರ್ಯ, ಅಭಿವೃದ್ಧಿ, ನೆಮ್ಮದಿ, ಸಂತೋಷ, ಸಕಲ ಸಂಪತ್ತನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.

ಶ್ರೀ ಸೂಕ್ತ ಕನ್ನಡದಲ್ಲಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1. Audio Link by Challakere Brothers

2. Audio Link by Anantha Kulkarni (Album Link)

3. Audio Link by Thiagarajan (song7)

4. Audio Link by Shweta Pandit below

November 20, 2009

Subramanya (Subbaraya) Shashti / ಸುಬ್ರಹ್ಮಣ್ಯ ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ / ಸುಬ್ಬರಾಯ ಷಷ್ಠಿ ಹಬ್ಬವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ ಆಚರಿಸುತ್ತಾರೆ. ಈ ದಿನ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಬೆಳ್ಳಿ ನಾಗಪ್ಪನ ವಿಗ್ರಹ, ಸುಬ್ರಮಣ್ಯ ಸ್ವಾಮಿಯ ಪಟ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿಗೆ ಪೂಜೆ ಮಾಡಬೇಕು. ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು.ಪೂಜಾ ವಿಧಾನ ಇಲ್ಲಿದೆ. ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಯಾವುದಾದರು ಸಿಹಿ ತಿಂಡಿ ಮಾಡಿಕೊಳ್ಳಿ. ಪೂಜೆಯ ನಂತರ ಉಪನಯನ ಆಗಿರುವ ವಟುವನ್ನು ಮನೆಗೆ ಕರೆದು ಭಕ್ಷ್ಯ ಭೋಜನ ಹಾಕಿ. ಈ ಬ್ರಹ್ಮಚಾರಿ ಬಾಲಕ ಶ್ರೀ ಸುಬ್ರಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಅವನಿಗೆ ಉಪಚಾರ ಮಾಡಿ. ಊಟದ ನಂತರ ಅವನಿಗೆ ಯಥೇಚ್ಚವಾಗಿ ಉಡುಗೊರೆ, ದಕ್ಷಿಣೆ, ದಾನ ಕೊಟ್ಟು ಸಂತೃಪ್ತಿ ಪಡಿಸಬೇಕು. ನಂತರ ಮನೆಯವರೆಲ್ಲ ಊಟ ಮಾಡಬೇಕು.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನನ್ನು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

Useful Links:
Subramanya Ashottara
Subramanya Stotram
Subrahmanya Ashtaka
Subramanya Bhujangam


Subrahmanya Sahasranamavali by lakshmipathi(song 11)


  Subramanya Songs by VidyaBhushana:
Bandu Nodiro Shree Subramanya
Subbaraya Shubhakaya 
Subrahmanya Suragraganya 
Subramanya Subramanya

October 13, 2009

Ashtalakshmi Stotra in Kannada / ಅಷ್ಟಲಕ್ಷ್ಮೀ ಸ್ತೋತ್ರ

ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Meera Krishna ,(Album Link)

2. Audio Link by Shweta Pandit

3. Audio Link by Sowmya (song 8)

September 25, 2009

Durgashtami Festival , Devi Suktam in Kannada / ದುರ್ಗಾಷ್ಟಮಿ ಹಬ್ಬ, ದೇವಿ ಸೂಕ್ತ

ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು
ದುರ್ಗಾಷ್ಟಮಿ ಹಬ್ಬವನ್ನು ನವರಾತ್ರಿಯ ೮ ನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ದಿನ. ದುರ್ಗಾ ದೇವಿಯ ಪಟವನ್ನು / ಮೂರುತಿಯನ್ನು ಇಟ್ಟು ಪೂಜೆ ಮಾಡಿ. ದೇವಿಯನ್ನು ಪೂಜಗೃಹದಲ್ಲಿ ಅಥವಾ ಇತರೆ ಗೊಂಬೆಗಳ ಜೊತೆ ಇಡಬಹುದು. ದೇವಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ದುರ್ಗಾ ಅಷ್ಟೂತ್ತರ ಇಲ್ಲಿದೆ. ದೇವಿಯ ಸ್ತೋತ್ರಗಳು, ಹಾಡು, ಭಜನೆ ಇಂದ ದೇವಿಯ ಧ್ಯಾನ ಮಾಡಿ. ಪೂಜೆಯ ನಂತರ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡುತ್ತಾರೆ.
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದು ತಂತ್ರೋಕ್ತ ದೇವಿ ಸೂಕ್ತ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.AudioLink - by Alka Yagnik Below

 


2.AudioLink - by Ravindra Sathe [song3]

 3.AudioLink - by Ashit Desai [song 12]

  ದುರ್ಗಾ ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)

September 16, 2009

Sri Rajarajeshwari Ashtakam in Kannada / ಶ್ರೀ ರಾಜ ರಾಜೇಶ್ವರಿ ಅಷ್ಟಕ

(photo of Rajarajeshwari : Dattapeetham, Mysore)

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಅಷ್ಟಕ ಎಂದರೆ ೮. ಹೆಸರೇ ಹೇಳುವಂತೆ ರಾಜರಾಜೇಶ್ವರಿ ಅಷ್ಟಕದಲ್ಲಿ ೮ ಪಂಕ್ತಿಗಳಿವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Priya Sisters
2. Audio Link by Nithya Santhoshini,Gayathri
3. Audio Link by Mahanadi Shobhana

August 27, 2009

Durga Saptashloki Stotra in Kannada / ದುರ್ಗಾ ಸಪ್ತಶ್ಲೋಕಿ ಸ್ತೋತ್ರ

ನವರಾತ್ರಿ ಹಬ್ಬ ಸಧ್ಯದಲ್ಲೇ ಬರುತ್ತಿದೆ. ಅದಕ್ಕಾಗಿ ದುರ್ಗಾದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ದುರ್ಗಾ ಸಪ್ತ ಶ್ಲೋಕಿ ಸ್ತೋತ್ರದಲ್ಲಿ ೭ ಸಾಲುಗಳಿವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio by Prakash Kaushik

2.Audio by Anuradha Paudwal below:

3.Audio link by Anuradha Paudwal
Link to Durga Saptashloki Stotra in Hindi and English

July 22, 2009

Sri Subrahmanya Ashtakam in Kannada / ಶ್ರೀ ಸುಬ್ರಹ್ಮಣ್ಯಾಷ್ಟಕಂ

ನಾಗರ ಪಂಚಮಿ ಹಬ್ಬಕ್ಕೆ ಇನ್ನೊಂದು ಸುಬ್ರಮಣ್ಯ ಸ್ತೋತ್ರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟಕಂ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .



1.Audio by Hari Achuta Rama Shastry (song 9)


2.Subramanyaashtakam Stotra by Sulamangalam Sisters Below:



July 20, 2009

Nagara Panchami / Panchami Habba / ನಾಗರ ಪಂಚಮಿ ಹಬ್ಬ

ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.
ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ(ಕೇದಿಗೆ) ಗಿಡದ ಎಲೆ/ಹೂವನ್ನು ಉಪಯೋಗಿಸಿ ತನಿ ಎರೆಯುತ್ತಾರೆ. ತಾಳೆ(ಕೇದಿಗೆ) ಗಿಡದ ಚಿತ್ರ ಕೆಳಗಿದೆ.(biological name: Pandanus fascicularis)
click on image to enlarge

ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.
ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿ ನಾಗ ಪಂಚಮಿ ಆಚರಿಸುತ್ತಾರೆ.
Useful Links:
Subramanya Ashottara
Subramanya Stotram

Subramanya Bhujangam


Subrahmanya Ashtaka
Subramanya Shodasha nama stotra
Subrahmanya Sahasranamavali

Subramanya Songs by VidyaBhushana:
  1. Bandu Nodiro Shree Subramanya
  2. Subbaraya Shubhakaya
  3. Subrahmanya Suragraganya
  4. Subramanya Subramanya


July 17, 2009

Subrahmanya Ashtottara in Kannada / ಶ್ರೀ ಸುಬ್ರಮಣ್ಯ ಅಷ್ಟೋತ್ತರ

ನಾಗರ ಪಂಚಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಸುಬ್ರಮಣ್ಯ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .

ಅಷ್ಟೊತ್ತರದ ಧ್ವನಿ ಮುದ್ರಣ ಕೆಳಗಿದೆ.
1.Subramanya Ashtottara Audio link - by Thiyagarajan (song 9)
2.Subramanya Ashtottara Audio link - by Lakshmipathi (song 12)

April 8, 2009

Lalita Devi Pancharatnam in Kannada / Devi Pratah Samarana Stotra / ಲಲಿತ ದೇವಿ ಪಂಚರತ್ನ ಸ್ತೋತ್ರ / ದೇವಿ ಪ್ರಾತಃ ಸ್ಮರಣ ಸ್ತೋತ್ರ

ದೇವಿ ಪಂಚರತ್ನ ಅಥವಾ ಲಲಿತಾ ಪಂಚರತ್ನ ಅಥವಾ ದೇವಿ ಪ್ರಾತಃ ಸ್ಮರಣ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಪಂಚ ಎಂದರೆ ಐದು, ಈ ಸ್ತೋತ್ರದಲ್ಲಿ ಐದು ಪಂಕ್ತಿಗಳಿವೆ. ಈ ಸ್ತೋತ್ರದಲ್ಲಿ ದೇವಿಯನ್ನು ಹೊಗಳಿ ಸ್ತುತಿ ಮಾಡಿದ್ದರೆ. ಇದು ಸಹಸ್ರನಾಮದಷ್ಟು ದೊಡ್ದದಾಗಿಲ್ಲ, ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಪಂಚರತ್ನ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :
1.AudioLink - by Bombay Sisters

2.AudioLink - by M.S.Sheela [song 3]


3.AudioLink - by Usha Mangeshkar

4.AudioLink - by Vijayalakshmi Subramaniam below
ಆದಿ ಶಕ್ತಿಯು ಎಲ್ಲರನ್ನು ಸದಾ ಕಾಪಾಡಲಿ :)

March 2, 2009

Mahishasura Mardini Stotra in Kannada / ಶ್ರೀ ಮಹಿಷಾಸುರ ಮರ್ದಿನಿ ಸ್ತೋತ್ರ

ದೇವಿ ಸ್ತೋತ್ರಗಳಲ್ಲಿ ಮಹಿಷಾಸುರ ಮರ್ದಿನೀ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರ ಮರ್ದಿನೀ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಹಿಷಾಸುರ ಮರ್ದಿನಿ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿದೆ:

1.AudioLink -
Bombay Sisters ಅವರ ಧ್ವನಿಯಲ್ಲಿ ಕೇಳಿ.

2.AudioLink - Chithra ಅವರ ಧ್ವನಿಯಲ್ಲಿ ಕೇಳಿ.

3.AudioLink by Balaji Tambe

February 9, 2009

Lalita Sahasranama in Kannada / ಶ್ರೀ ಲಲಿತ ಸಹಸ್ರನಾಮ ಸ್ತೋತ್ರ

ದೇವಿಯ ಸ್ತೋತ್ರಗಳಲ್ಲಿ ಲಲಿ ಸಹಸ್ರನಾಮವು ಅತಿ ಪವಿತ್ರ, ಶ್ರೇಷ್ಠ ಮತ್ತು ಪರಿಪೂರ್ಣ ಸ್ತೋತ್ರ. ಸಹಸ್ರ ಎಂದರೆ ಸಾವಿರ ಎಂದರ್ಥ. ಲಲಿತ ಸಹಸ್ರನಾಮದಲ್ಲಿ ದೇವಿಯನ್ನು 1000 ನಾಮಗಳಿಂದ ಹೊಗಳಿದ್ದಾರೆ. ತಲೆ ಇಂದ ಕಾಲಿನವರೆಗೆ ವರ್ಣಿಸಿದ್ದಾರೆ. ಇದರ ವಿಶೇಷತೆ ನೆಂದರೆ ದೇವಿಯ 1000 ಪ್ರತ್ಯೇಕ ನಾಮಗಳಿವೆ, ಯಾವ ನಾಮವೂ ಮತ್ತೆ ಪುನರಾವರ್ತಿಸುವುದಿಲ್ಲ. ಸ್ತೋತ್ರವು ಬ್ರಹ್ಮಾಂಡ ಪುರಾಣದಲ್ಲಿದೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. "ಇತಿ ಶ್ರೀ ಬ್ರಹ್ಮಾಂಡ ಪುರಾಣೇ ಉತ್ತರಖಂಡೆ ಶ್ರೀ ಹಯಗ್ರೀವಾಗಸ್ತ್ಯ ಸಂವಾದೆ ಶ್ರೀ ಲಲಿತ ಸಹಸ್ರನಾ ಸ್ತೋತ್ರ ಸಂಪೂರ್ಣಂ" ಅಂತ ಮುಕ್ತಾಯ ಆಗುತ್ತದೆ. ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages
1-4


pages 5-8


Lalitha sahasranamam audio:
ಈ ಸ್ತೋತ್ರವನ್ನು ಹಲವಾರು ಗಾಯಕರು ಬೇರೆ ಬೇರೆ ರೀತಿಯಲ್ಲಿ ಹಾಡಿದ್ದಾರೆ. ನನಗೆ Bombay sisters ಹಾಡಿರುವುದು ತುಂಬ ಇಷ್ಟ. ಇವರು ಪ್ರತಿ ೧೦ ಸಾಲುಗಳನ್ನು ಬೇರೆ ರಾಗದಲ್ಲಿ ಹಾಡಿದ್ದಾರೆ. ಹಾಗಾಗಿ ನನಗೆ ಕಲಿಯಲು ಸುಲಭವಾಯಿತು :)

1.AudioLink - Bombay Sisters | Album Link

2.AudioLink - S.Janaki

3.AudioLink - Banglore Sisters

4.AudioLink - M.S.Sheela

5.AudioLink - Thyagarajan


ಆದಿಶಕ್ತಿಯನ್ನು ಆರಾಧಿಸುವುದಕ್ಕೆ ಇದು ಅತ್ಯುತ್ತಮವಾದ ಸ್ತೋತ್ರ. ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ. ಲಲಿತ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)

December 10, 2008

Dattatreya Jayanthi, Dattatreya Ashtottara in Kannada / ದತ್ತಾತ್ರೇಯ ಜಯಂತಿ , ದತ್ತಾತ್ರೇಯ ಅಷ್ಟೋತ್ತರ



ದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ ದಿನ ಆಚರಿಸುತ್ತಾರೆ. ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು. ಇದರ ಹಿಂದೆ ಇರುವ ಕಥೆ ಹೀಗಿದೆ.
ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು " ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ. ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ " ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ , ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಬ್ರಹ್ಮ , ವಿಷ್ಣು , ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, "ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ" ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.
ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಗುರುವಿನ ಶಕ್ತಿ, ಮಹಿಮೆ ಅಪಾರ. ಸರಸ್ವತಿ ಗಂಗಧರರು ಗುರುಗಳ ಮಹಿಮೆಯನ್ನು "ಗುರು ಚರಿತ್ರೆ " ಪುಸ್ತಕದಲ್ಲಿ ಬರೆದಿದ್ದರೆ. ಇದರಲ್ಲಿ 52 ಅಧ್ಯಯವಿದೆ.ದತ್ತನ ಭಕ್ತರು ಗುರುಚರಿತ್ರೆಯನ್ನು ಪಾರಾಯಣ ಮಾಡುತ್ತಾರೆ.ಸಂಕ್ಷಿಪ್ತ ಗುರುಚರಿತ್ರೆಯನ್ನು ಇಲ್ಲಿ ಓದಬಹುದು


ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ,ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ಕೆಳಗಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



Ashtottara Audio Link by Bombay Sisters

ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)
Blog Widget by LinkWithin