Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

December 31, 2008

Happy New Year / ಹೊಸ ವರ್ಷದ ಶುಭಾಶಯ

"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"

Glitter Photos

ಹೊಸ ವರ್ಷ ನಿಮಗೆ ಸಂತಸ, ಸಂತೃಪ್ತಿ , ಸಮೃದ್ಧಿ ತರಲಿ,

ನಿಮ್ಮ ಕನಸೆಲ್ಲ ನೆನಸಾಗಲಿ ,ಭಗವಂತನ ಕೃಪೆ ಸದಾ ಇರಲಿ.

ಕಳೆದ ಕೆಲವು ದಿನಗಳಲ್ಲಿ ನಾನು ಇತರೆ ಕೆಲಸಗಳನ್ನು ಮಾಡುತ್ತಿದ್ದು, ಬ್ಲಾಗಿನ ಕಡೆ ಬರುವುದಕ್ಕೆ ಸಮಯವಿರಲಿಲ್ಲ. ಹೊಸ ವರ್ಷದಲ್ಲಿ ಇನ್ನಷ್ಟು ಪೂಜಾವಿಧಾನ, ಸ್ತೋತ್ರ ,ಮಂತ್ರಗಳನ್ನು ಬರೆಯುವ ಆಸೆ ಇದೆ. ನಿಮ್ಮೆಲ್ಲರ ಮೆಚ್ಚುಗೆ, ಅಭಿನಂದನೆಗಳಿಂದ ನನಗೆ ಇನ್ನಷ್ಟು ಹುರುಪು, ಉತ್ಸಾಹ ಬಂದಿದೆ. ನಿಮ್ಮ ಬೆಂಬಲ, ಆಸಕ್ತಿ , ಹೀಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೀನಿ :)

December 10, 2008

Dattatreya Jayanthi, Dattatreya Ashtottara in Kannada / ದತ್ತಾತ್ರೇಯ ಜಯಂತಿ , ದತ್ತಾತ್ರೇಯ ಅಷ್ಟೋತ್ತರ



ದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ ದಿನ ಆಚರಿಸುತ್ತಾರೆ. ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು. ಇದರ ಹಿಂದೆ ಇರುವ ಕಥೆ ಹೀಗಿದೆ.
ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು " ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ. ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ " ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ , ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಬ್ರಹ್ಮ , ವಿಷ್ಣು , ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, "ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ" ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.
ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಗುರುವಿನ ಶಕ್ತಿ, ಮಹಿಮೆ ಅಪಾರ. ಸರಸ್ವತಿ ಗಂಗಧರರು ಗುರುಗಳ ಮಹಿಮೆಯನ್ನು "ಗುರು ಚರಿತ್ರೆ " ಪುಸ್ತಕದಲ್ಲಿ ಬರೆದಿದ್ದರೆ. ಇದರಲ್ಲಿ 52 ಅಧ್ಯಯವಿದೆ.ದತ್ತನ ಭಕ್ತರು ಗುರುಚರಿತ್ರೆಯನ್ನು ಪಾರಾಯಣ ಮಾಡುತ್ತಾರೆ.ಸಂಕ್ಷಿಪ್ತ ಗುರುಚರಿತ್ರೆಯನ್ನು ಇಲ್ಲಿ ಓದಬಹುದು


ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ,ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ಕೆಳಗಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



Ashtottara Audio Link by Bombay Sisters

ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)

December 6, 2008

Sri Satyanarayana Pooja Vidhana / Vrata in Kannada / ಶ್ರಿಸತ್ಯನಾರಾಯಣ ಪೂಜಾ ವಿಧಾನ

Update: July 2010
I came across this link recently. Chinmaya Mission has uploaded the detailed mantras for Sathyanarayana Pooja. here is the link.

Sathyanarayana Pooja Vidhana in Kannada(88 pages) - broken link is fixed

ನನ್ನ ಬ್ಲಾಗಿಗೆ ಬಂದ ಬಹಳಷ್ಟು ಜನರ ಕೋರಿಕೆಯ ಮೇರೆಗೆ ಶ್ರೀ ಸತ್ಯನಾರಾಯಣ ವ್ರತದ ಬಗ್ಗೆ ಬರೆಯುತ್ತಿದ್ದೀನಿ.
ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನರಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ. ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ. ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ/ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ. ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.

ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸಿ . ಒಂದು ಸಣ್ಣ ಚೊಂಬಿಗೆ ನಿಮ್ಮದೇ ವಡವೆ (ಸರ)ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯದ ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿಇಡಬೇಕು. ಒಂದು ಹೊಸ ಶಲ್ಯವನ್ನು ಈ ಕಳಶದ ಪಾತ್ರೆಯ ಸುತ್ತ ಹೊದಿಸಿ.ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರಮೇಲೆ ಈ ಕಲಶ ಸ್ಥಾಪನೆ ಮಾಡಬೇಕು. ಇದರೊಂದಿಗೆ ಇನ್ನೊಂದು ತಟ್ಟೆಯಲ್ಲಿ ನವಗ್ರಹ ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು, ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ ಇಡಬೇಕು.



ನವಗ್ರಹ ಧಾನ್ಯಗಳು ಮತ್ತು ನವಗ್ರಹ ಮಂಡಲದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಇದರ ಜೊತೆಗೆ ಸತ್ಯನಾರಾಯಣ ಪಟ ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ.





ನವಧಾನ್ಯ

ಮೊದಲು ಗಣಪತಿ ಪೂಜೆ ಮಾಡಬೇಕು .
ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣ ಪೂಜೆ ಮಾಡಬೇಕು.
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಲ್ಲಿದೆ. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ/ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)ಮಾಡಿಕೊಳ್ಳಬೇಕು.ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸ ತ್ಪಾತ್ರರಿಗೆ ದಾನ ಕೊಡಬೇಕು.

ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.

ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು ಪೂಜಾ ಮಂತ್ರಗಳು ಮತ್ತು ವ್ರತ ಕಥೆ ಎರಡನ್ನೂ ಹೇಳಿದ್ದಾರೆ. ಸತ್ಯನಾರಾಯಣ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
Kathe scanned from my Vrata book: click on image below to enlarge.


ಸತ್ಯನಾರಾಯಣನ ಮೇಲೆ ಹಾಡುಗಳು:
ಶ್ರೀ ಸತ್ಯನಾರಾಯಣನು ಎಲ್ಲರಿಗು ಮಂಗಳವನ್ನು ಮಾಡಲಿ :)

Related link

December 3, 2008

Satyanarayana Ashtottara / ಶ್ರೀ ಸತ್ಯನಾರಾಯಣ ಅಷ್ಟೋತ್ತರ

Click here for Satyanarayana Pooja Vidhana
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .


Related Links:

November 26, 2008

Navagraha Dhanya & Mandala / ನವಗ್ರಹ ಧಾನ್ಯಗಳು +ಮಂಡಲ

ನವಗ್ರಹ ಧಾನ್ಯಗಳನ್ನು ನವಗ್ರಹ ಹೋಮ/ಶಾಂತಿ , ಸತ್ಯನಾರಾಯಣ ಪೂಜೆಗಳಲ್ಲಿ ಉಪಯೋಗಿಸುತ್ತಾರೆ. ಕೆಳಗೆ ನವ ಧಾನ್ಯಗಳ ಹೆಸರು, ಯಾವ ಗ್ರಹಕ್ಕೆ ಯಾವ ಧಾನ್ಯ, ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಎಂಬ ವಿವರಗಳಿವೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



ನವಗ್ರಹ ಧಾನ್ಯಗಳು / navagraha dhaanya /grains / seeds
  1. ಕಡಲೆ ಕಾಳು - Bengal gram (black Chickpeas)(North)
  2. ಉದ್ದಿನ ಕಾಳು - whole urad dal / black gram(SouthWest)
  3. ಹೆಸರು ಕಾಳು - Green gram/ whole moong bean(NorthEast)
  4. ಹುರಳಿ ಕಾಳು - Horse gram(NorthWest)
  5. ತೊಗರಿ ಬೆಳೆ - Toor Dal(South)
  6. ಭತ್ತ - Rice grain with husk (SouthEast)
  7. ಗೋಧಿ - wheat grain (Center)
  8. ಎಳ್ಳು - Black Sesame seeds (West)
  9. ಅವರೇಕಾಳು - Indian Flat beans/AvarekaaLu/Papdi lilva (East)
  10. ಬಟ್ಟಲು ಅಡಿಕೆ - Betel Nut /Arecanut (North East)
  11. ಬೆಲ್ಲದ ಅಚ್ಚು - 1 Jaggery Block/Mould /Jaggery square (North East)
  12. ನವಗ್ರಹ ಮಂಡಲ
    ದಿಕ್ಕು / Direction
    1. ಪೂರ್ವ - East
    2. ಪಶ್ಚಿಮ - West
    3. ಉತ್ತರ - North
    4. ದಕ್ಷಿಣ - South
    5. ವಾಯವ್ಯ - North West
    6. ಈಶಾನ್ಯ - North East
    7. ನೈಋತ್ಯ - South West
    8. ಆಗ್ನೇಯ - South East
    Related Links: Satyanarayana Pooja Vidhana

November 15, 2008

Kanakadasa Jayanthi / ಕನಕದಾಸ ಜಯಂತಿ

ಇಂದು ಕನಕದಾಸರ ಜಯಂತಿ. ಕನಕದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.

ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.

ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.

ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.

ಇವರ ದೇವರನಾಮಗಳು ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಹಾಡನ್ನು ಇಂದಿಗೂ ನಾವೆಲ್ಲ ಕೇಳುತ್ತೀವಿ, ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತ.

ಕನಕದಾಸ ಜಯಂತಿ ಪ್ರಯುಕ್ತ ನನ್ನ ಭಕ್ತಿಗೀತೆ ಬ್ಲಾಗಿನಲ್ಲಿ ಕನಕದಾಸರ ಕೆಲವು ದೇವರನಾಮಗಳನ್ನು, ಸಾಹಿತ್ಯ ಹಾಗು ಸಂಗೀತ ಎರಡನ್ನೂ ಹಾಕಿದ್ದೀನಿ.

ಕನಕದಾಸರ ದೇವರನಾಮಗಳನ್ನು ಸಂಗೀತಗಾರರು ಸುಮುಧುರವಾಗಿ ಹಾಡಿದ್ದಾರೆ. ಕೆಲವು ಹಾಡುಗಳ ಧ್ವನಿ ಮುದ್ರಣ ಕೆಳಗಿದೆ. ಹಾಡನ್ನು ಕೇಳಲು ಹಾಡಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.


ಇಂತಹ ಮಹನೀಯರ ಜನ್ಮ ದಿನವನ್ನು ಇಂದು ಆಚರಿಸುವುದಕ್ಕೆ ಹೆಮ್ಮೆ ಆಗುತ್ತೆ ಅಲ್ಲವೇ:)

Related Link:

Kanakadasara Devaranama with Lyrics at Bhakthigeetha

November 9, 2008

Utthana Dwadashi, Tulasi Ashtottara / ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ತುಳಸಿ ಅಷ್ಟೋತ್ತರ ಕೆಳಗಿದೆ


ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ


ತುಳಸಿ ವಂದನೆ - Audio link(Album)

Tulasi Stotras by Ashit desai

Tulasi Stotramaala Vol 1

Tulasi Stotramaala Vol 2


ತುಳಸಿ ಸ್ತುತಿ-deezer link is no longer available
ತುಳಸಿ ನಮಾಷ್ಟಕಂ - deezer link is no longer available
Songs on Tulasi: 1. Kalyanam Tulasi Kalyanam 2. Brundavanave Mandiravaagiha ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ. ಇದರೊಂದಿಗೆ ತುಳಸೀ ಗಿಡಕ್ಕೆ ಔಷಧೀಯ ಗುಣಗಳೂಇದೆ. ಕೆಮ್ಮು ನೆಗಡಿಗೆ , ಚರ್ಮ ವ್ಯಾಧಿಗಳಿಗೆ ಮನೆ ಮದ್ದು ಈ ತುಳಸೀ. ನೆಲ್ಲಿಕಾಯಿ ಕೂಡ ಔಷಧೀಯ ಗುಣ ಹೊಂದಿದೆ. ಇದು ವಾತ ಪಿತ್ತಗಳನ್ನು ಶಮನ ಮಾಡುತ್ತದೆ ಎಂದು ಹೇಳಿತ್ತಾರೆ. ಹಬ್ಬ ಆದ ನಂತರ ನಮ್ಮ ಮನೆಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮೊರಬ್ಬ ಮಾಡುತ್ತಾರೆ. ಉಪ್ಪಿನಕಾಯಿ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಾ ಇದೆ :)

October 29, 2008

Deepavali / Diwali / ದೀಪಾವಳಿ



ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು


ನಾನು ನನ್ನ ಪರಿವಾರದೊಂದಿಗೆ ಪ್ರವಾಸ ಮಾಡುತ್ತಿದ್ದೀನಿ. ಆದ್ದರಿಂದ ದೀಪಾವಳಿ ಹಬ್ಬದ ಬಗ್ಗೆ ಬರೆಯಲು ಸಮಯ ಸಿಗಲಿಲ್ಲ. ಬೇರೆ ಯಾವಾಗಲಾದರೂ ಹಬ್ಬದ ಬಗ್ಗೆ ಬರೆಯುತ್ತೀನಿ. ನೀವೆಲ್ಲರೂ ಹಬ್ಬವನ್ನು ಚೆನ್ನಾಗಿ ಆಚರಿಸಿದ್ದೀರ ಅಂತ ಆಶಿಸುತ್ತಿನಿ :)

October 18, 2008

Shiva Ashtakam in Kannada / ಶ್ರೀ ಶಿವ ಅಷ್ಟಕ

ಕೆಲವು ಸ್ತೋತ್ರಗಳನ್ನು ಕೇಳಿದರೆ ಇನ್ನೊಮ್ಮೆ ಕೇಳುವ ಆಸೆ, ನಾವೂ ಕಲಿಯಬೇಕೆಂಬ ಆಸೆ ಬರುತ್ತೆ ಅಲ್ಲವೇ. ಈ ಶಿವಾಷ್ಟಕವನ್ನು ಕೇಳಿದಾಗಲೆಲ್ಲ ನನಗೆ ಹೀಗೆ ಅನ್ನಿಸುತ್ತೆ. ಇದು ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


Audio links for Shivaashtakam.

1.Audio link by Unnikrishnan [song 1]

2. Audio link by S.P Balasubramanyam below

 
Related Link:

October 14, 2008

Thank You / ಧನ್ಯವಾದಗಳು

ನಮಸ್ಕಾರ ಸ್ನೇಹಿತರೇ,

ಎಲ್ಲರ ಮನೆಯಲ್ಲೂ ದಸರಾ ಹಬ್ಬ ಚೆನ್ನಾಗಿ ಆಯಿತು ಅಂತ ಆಶಿಸುತ್ತೀನಿ. ನವರಾತ್ರಿ ಹಬ್ಬದ ಬಗ್ಗೆ ವಿವರಗಳನ್ನು ಹುಡುಕಿಕೊಂಡು ನನ್ನ ಬ್ಲಾಗಿಗೆ ಬಹಳಷ್ಟು ಜನ ಭೇಟಿ ಮಾಡಿದ್ದೀರಾ. ನನ್ನ ಬ್ಲಾಗ್ ನಲ್ಲಿರುವ ಬರಹಗಳು, ಮಾಹಿತಿಗಳನ್ನು ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರ. ನನ್ನ ಬರಹಗಳಿಂದ ನಿಮಗೆ ಅಲ್ಪ-ಸ್ವಲ್ಪ ಉಪಯೋಗವಾದರೂ ನನಗೆ ತುಂಬ ಖುಷಿ . ನಿಮ್ಮ ಮಾತುಗಳಿಂದ ನನಗೆ ಇನ್ನಷ್ಟು ಬರೆಯಲು ಉತ್ಸಾಹ ಪ್ರೇರಣೆ ಬಂದಿದೆ. ನನ್ನ blog ಗೆ ಭೇಟಿ ನೀಡಿದವರಿಗೆ , ಮೆಚ್ಚುಗೆ ,ಅಭಿಪ್ರಾಯ ತಿಳಿಸಿದಿವರಿಗೆ ನನ್ನ ಧನ್ಯವಾದಗಳು.


ಈ ಮಧ್ಯೆ "ಪೂಜಾ ವಿಧಾನಕ್ಕೆ" ಇನ್ನಷ್ಟು ಪ್ರಚಾರ ಸಿಕ್ಕಿದೆ. ಕೆಂಡಸಂಪಿಗೆ ಎಂಬ ಕನ್ನಡ online magazine ಅಲ್ಲಿ , ಜಿತೇಂದ್ರ ಅವರು ನನ್ನ ಬ್ಲಾಗ್ ಬಗ್ಗೆ ಬರೆದು, ಪರಿಚಯಿಸಿದ್ದಾರೆ. ಜಿತೇಂದ್ರ ಅವರಿಗೂ ನನ್ನ ಧನ್ಯವಾದಗಳು. ಇನ್ನಷ್ಟು ವಿವರ ಇಲ್ಲಿ ಓದಿ.


ಮತ್ತೊಮ್ಮೆ ಎಲ್ಲರಿಗೂ ನನ್ನ ವಂದನೆಗಳು.

ಇಲ್ಲಿಗೆ ಮತ್ತೆ ಭೇಟಿ ಮಾಡುತ್ತಿರಾ ಅಂತ ಆಶಿಸುತ್ತೀನಿ:)

October 6, 2008

Durga Ashtottara Shatanama Stotra / ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ

"ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು "
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ - ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ ಇಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .
ಶತನಾಮ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು -
1.Audio Link - by Ravindra Sathe

2.Another Audio Link

ದುರ್ಗಾ ಸ್ತೋತ್ರಗಳು :

Link to Durga Ashtottara Shatanama Stotra in Hindi and English



October 1, 2008

Saraswathi Pooja / Saraswathi Ashtottara in Kannada / ಸರಸ್ವತಿ ಅಷ್ಟೋತ್ತರ

ಸರಸ್ವತಿ ಪೂಜೆ/ಹಬ್ಬ ,ನವರಾತ್ರಿಯಲ್ಲಿ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಸರಸ್ವತಿಯು ವಿದ್ಯೆ, ಜ್ಞಾನ, ಸಂಗೀತ, ಸಾಹಿತ್ಯ ಎಲ್ಲದಕ್ಕೂ ಅಧಿದೇವತೆ. ಈ ದಿನ ಸರಸ್ವತಿ ದೇವಿಯ ಪಟ, ವಿಗ್ರಹದ ಜೊತೆಗೆ ವಿಧ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಪೆನ್ನು, ಪೆನ್ಸಿಲ್ಲು , ಇತ್ಯಾದಿಗಳನ್ನೂ, ಸಂಗೀತ ವಾದ್ಯಗಳನ್ನು ಇಟ್ಟು ಪೂಜೆ ಮಾಡಬೇಕು.
ಪೂಜಾ ವಿಧಾನ ಇಲ್ಲಿದೆ . ಸರಸ್ವತಿ ಸ್ತೋತ್ರಗಳು ಇಲ್ಲಿದೆ.

ಸರಸ್ವತಿ ಅಷ್ಟೋತ್ತರ ಕೆಳಗಿದೆ. ದೊಡ್ದದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

.
ಸರಸ್ವತಿ ಅಷ್ಟೊತ್ತರದ ಧ್ವನಿ ಮುದ್ರಣ ಇಲ್ಲಿ ಕೇಳಿ - Audio link of Ashtottara by Raghavan shastri - song 2

Audio link of Ashtottara by Another Artist


ಸರಸ್ವತಿ ಪೂಜೆಯನ್ನು ಬೇರೆ ದಿನಗಳಲ್ಲೂ ಮಾಡುತ್ತಾರೆ. ಉತ್ತರ ಭಾರತದಲ್ಲಿ ಮಾಘ ಮಾಸದ ಶುಕ್ಲ ಪಂಚಮಿ ದಿನ "ವಸಂತಪಂಚಮಿ " ಎಂದು ಸರಸ್ವತಿಯನ್ನು ಪೂಜೆ ಮಾಡುತ್ತಾರೆ. ಇದೇ ದಿನ ಶ್ರಿಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ನಡೆಯುತ್ತೆ. ಇದಲ್ಲದೇ ವಿದ್ಯಾರಂಭ ಮಾಡುವ ಮುನ್ನ ವಿದ್ಯಾ ಅಧಿದೇವತೆಯಾದ ಸರಸ್ವತಿಯನ್ನು ಧ್ಯಾನ ಮಾಡುತ್ತಾರೆ. ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಮುನ್ನ, ಪ್ರತಿ ವರ್ಷ ಶಾಲೆ ಶುರುವಾಗುವ ಮುನ್ನ, ಪರೀಕ್ಷೆಗೆ ಮುಂಚೆ, ಯಾವುದೇ ಹೊಸ ವಿದ್ಯೆಯನ್ನು(ಸಂಗೀತ, ನೃತ್ಯ, ವೇದಾಭ್ಯಾಸ, ಚಿತ್ರಕಲೆ) ಕಲಿಯುವ ಮುಂಚೆ ಸರಸ್ವತಿ ಆಶಿರ್ವಾದ ಪಡೆದುಕೊಂಡೇ ಮುಂದೆಹೋಗಬೇಕು.

ಸರಸ್ವತಿ ಮೇಲೆ ಹಾಡುಗಳು :
ಮಮವತು ಶ್ರೀ ಸರಸ್ವತಿ[song 2] ;
ಶ್ರೀ ಸರಸ್ವತಿ ನಮೋಸ್ತುತೆ
ಸರಸ್ವತಿ ದೇವಿಯು ಎಲ್ಲರಿಗೂ ವಿದ್ಯಾ ಬುದ್ಧಿ ಕೊಟ್ಟು ಕಾಪಾಡಲಿ :)
Related Links:
Sarasawthi Devi songs with lyrics at Bhakthigeetha.

September 30, 2008

Durga Ashtottara in Kannada / ಶ್ರೀ ದುರ್ಗಾ ಅಷ್ಟೋತ್ತರ

ದುರ್ಗಾಷ್ಟಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ದುರ್ಗಾ ಅಷ್ಟೋತ್ತರ ಇಲ್ಲಿದೆ.





ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link 1

Audio Link 2 by Rajagopalan Thiagarajan





September 28, 2008

Navaratri / Dasara / ನವರಾತ್ರಿ / ದಸರಾ ಹಬ್ಬ

"ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು"

ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ ಗೊಂಬೆ/ಬೊಂಬೆ ಹಬ್ಬ ಎಂದೂ ಹೆಸರಿದೆ.


ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ, ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು:
ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಶಮೀ/ ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ 1 ವರ್ಷ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕೌರವರನ್ನು ಯುದ್ಧದಲ್ಲಿ ಸೋಲಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ದಾನವ/ರಾಕ್ಷಸ/ದುಷ್ಟ ಶಕ್ತಿಯನ್ನು ದೇವಿ/ಶಿಷ್ಟ ಶಕ್ತಿ ನಾಶಗೊಳಿಸಿ ವಿಜಯವಾದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಕನ್ನಡಿಗರಿಗೆ ದಸರಾ ಎಂದರೆ ಇನ್ನಷ್ಟು ಹೆಮ್ಮೆ, ಇದು ನಮ್ಮ ನಾಡಹಬ್ಬ.ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಹಾಡು ಇರುವಂತೆ ನಮ್ಮ ಮೈಸೂರಿನ ದಸರಾ ಹಬ್ಬದ ಆಚರಣೆ ಜಗತ್ತಿನಲ್ಲೇ ಪ್ರಸಿದ್ದ. ವೊಡೆಯರ ಮನೆತನ ರಾಜರು ದಸರಾ ಹಬ್ಬವನ್ನು ವಿಜ್ರಂಬಣೆ ಇಂದ ಆಚರಸುತ್ತ ಬಂದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯ ಪೂಜೆಯಿಂದ ಪ್ರಾರಂಭ ಆಗುತ್ತೆ. ವಿಜಯದಶಮಿ ದಿನ ಚಾಮುಂಡಿ ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಆನೆಯ ಮೇಲೆ ಜಂಬೂ ಸವರಿ ಮಾಡುತ್ತಾರೆ. ದೊಡ್ಡ ಮೆರವಣಿಗೆ ಮಾಡಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡಿ ಕೊನೆಗೊಳ್ಳುತ್ತದೆ. ಈ ಹತ್ತು ದಿನ ಅರಮನೆಗೆ ದೀಪದಿಂದ ಅಲಂಕಾರ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಒಟ್ಟಿನಲ್ಲಿ ಮೈಸೂರು ದಸರಾದ ವೈಭವ ನೋಡಿದವರಿಗೇ ನೋಡಿದವರಿಗೇ ಗೊತ್ತು:)

ಮೈಸೂರಿಗೆ ಹೋಗಿ ದಸರಾ ನೋಡುವ ಆಸೆ ಇದ್ದರೆ, Mysoredasara.org ಅಲ್ಲಿ ಹೆಚ್ಚಿನ ಮಾಹಿತಿ ಇದೆ.



ಪಾಡ್ಯದ ದಿನ ದೇವಿಯ ಪಟದ ಜೊತೆ ಪಟ್ಟದ ಗೊಂಬೆ ಹಾಗು ಇತರೆ ಗೊಂಬೆಗಳನ್ನು ಇಟ್ಟು ಪೂಜೆ ಮಾಡಬೇಕು. ಪ್ರತಿ ದಿನ ದೇವಿಯನ್ನು ಧ್ಯಾನ ಮಾಡಬೇಕು.ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜೆ ಮಾಡುವ ವಿಧಾನ ಇಲ್ಲಿದೆ.
ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)

September 22, 2008

Durga Pancharatna Stotra in Kannada / ಶ್ರೀ ದುರ್ಗಾ ಪಂಚರತ್ನ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ಎಲ್ಲರಿಗೂ ಗೊತ್ತಿಲ್ಲದಿರಬಹುದು. ಇದನ್ನು ಜಗದ್ಗುರು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ರಚಿಸಿದ್ದಾರೆ. ಇದು ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.


ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link
ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.

September 15, 2008

Hanuman Chalisa in Kannada / ಹನುಮಾನ ಚಾಲೀಸ

ಹನುಮಾನ ಚಾಲೀಸ ಒಂದು ಜನಪ್ರಿಯವಾದ ಸ್ತೋತ್ರ. ಇದನ್ನು ಶ್ರೀ ತುಳಸಿದಾಸರು ಅವಧ ಭಾಷೆಯಲ್ಲಿ ರಚಿಸಿದ್ದಾರೆ. ಇವರು ಉತ್ತರಭಾರತದ ಹೆಸರಾಂತ ಕವಿ ಹಾಗು ವೇದಾಂತಿ ಆಗಿದ್ದರು. ಇವರ ಪ್ರಮುಖ ರಚನೆ "ರಾಮಚರಿತಮಾನಸ" ಎಂಬ ಮಹಾಕಾವ್ಯ . ಚಾಲೀಸ ಎಂದರೆ 40 ಎಂದರ್ಥ. ಹನುಮಾನ ಚಾಲೀಸದಲ್ಲಿ 40 ಸಾಲುಗಳಿದೆ. ಈ ಚಾಲೀಸವನ್ನು ಕನ್ನಡದಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಚಾಲೀಸವನ್ನು M. S. ಸುಬ್ಬಲಕ್ಶ್ಮಿಯವರು ಸುಮಧುರವಾಗಿ ಹಾಡಿದ್ದಾರೆ. ಪ್ರತಿ ೮ ಸಾಲುಗಳನ್ನು ಹೊಸ ರಾಗದಲ್ಲಿ ಹಾಡಿದ್ದಾರೆ. ಇದು ಕಲಿಯಲು ಬಹಳ ಸುಲಭವಾಗಿದೆ. ಧ್ವನಿ ಮುದ್ರಣ ಇಲ್ಲಿ ಕೇಳಬಹುದು

Audio Link by M.S.Subbalakshmi

Audio Link by Hariharan

Audio Link by Another Artist


Smiling Light ಅವರು ತಮ್ಮ ಬ್ಲಾಗಿನಲ್ಲಿ ಹನುಮಾನ್ ಚಾಲಿಸವನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸಿದ್ದಾರೆ.ಇಲ್ಲಿ ಸ್ತೋತ್ರವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಆ ಕೊಂಡಿ ಕೆಳಗಿದೆ:
Sri hanuman chalisa translated in kannada

September 8, 2008

Ananta Padmanabha Ashtottara & Vrata in Kannada / ಅನಂತ ಪದ್ಮನಾಭ ಅಷ್ಟೋತ್ತರ

ಅನಂತನ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನ ಆಚರಿಸುತ್ತಾರೆ. ವಾರ ಅನಂತ ಚತುರ್ದಶಿ ಹಬ್ಬ ಬರುತ್ತಾ ಇದೆ. ಅದಕ್ಕೆ ಅನಂತ ಪದ್ಮನಾಭ ಅಷ್ಟೋತ್ತರ ಇಲ್ಲಿದೆ. ಒಂದು ಕುತೂಹಲಕರವಾದ ವಿಷಯ ಅಂದರೆ, ಅಷ್ಟೋತ್ತರದಲ್ಲಿ ಪ್ರತಿಯೊಂದು ನಾಮವು '" ಅಕ್ಷರದಿಂದ ಶುರುವಾಗುತ್ತೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಅನಂತ ಪದ್ಮನಾಭ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು- Ananta Padmanabha Vrata Audio link

Blog Widget by LinkWithin