Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

October 14, 2008

Thank You / ಧನ್ಯವಾದಗಳು

ನಮಸ್ಕಾರ ಸ್ನೇಹಿತರೇ,

ಎಲ್ಲರ ಮನೆಯಲ್ಲೂ ದಸರಾ ಹಬ್ಬ ಚೆನ್ನಾಗಿ ಆಯಿತು ಅಂತ ಆಶಿಸುತ್ತೀನಿ. ನವರಾತ್ರಿ ಹಬ್ಬದ ಬಗ್ಗೆ ವಿವರಗಳನ್ನು ಹುಡುಕಿಕೊಂಡು ನನ್ನ ಬ್ಲಾಗಿಗೆ ಬಹಳಷ್ಟು ಜನ ಭೇಟಿ ಮಾಡಿದ್ದೀರಾ. ನನ್ನ ಬ್ಲಾಗ್ ನಲ್ಲಿರುವ ಬರಹಗಳು, ಮಾಹಿತಿಗಳನ್ನು ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರ. ನನ್ನ ಬರಹಗಳಿಂದ ನಿಮಗೆ ಅಲ್ಪ-ಸ್ವಲ್ಪ ಉಪಯೋಗವಾದರೂ ನನಗೆ ತುಂಬ ಖುಷಿ . ನಿಮ್ಮ ಮಾತುಗಳಿಂದ ನನಗೆ ಇನ್ನಷ್ಟು ಬರೆಯಲು ಉತ್ಸಾಹ ಪ್ರೇರಣೆ ಬಂದಿದೆ. ನನ್ನ blog ಗೆ ಭೇಟಿ ನೀಡಿದವರಿಗೆ , ಮೆಚ್ಚುಗೆ ,ಅಭಿಪ್ರಾಯ ತಿಳಿಸಿದಿವರಿಗೆ ನನ್ನ ಧನ್ಯವಾದಗಳು.


ಈ ಮಧ್ಯೆ "ಪೂಜಾ ವಿಧಾನಕ್ಕೆ" ಇನ್ನಷ್ಟು ಪ್ರಚಾರ ಸಿಕ್ಕಿದೆ. ಕೆಂಡಸಂಪಿಗೆ ಎಂಬ ಕನ್ನಡ online magazine ಅಲ್ಲಿ , ಜಿತೇಂದ್ರ ಅವರು ನನ್ನ ಬ್ಲಾಗ್ ಬಗ್ಗೆ ಬರೆದು, ಪರಿಚಯಿಸಿದ್ದಾರೆ. ಜಿತೇಂದ್ರ ಅವರಿಗೂ ನನ್ನ ಧನ್ಯವಾದಗಳು. ಇನ್ನಷ್ಟು ವಿವರ ಇಲ್ಲಿ ಓದಿ.


ಮತ್ತೊಮ್ಮೆ ಎಲ್ಲರಿಗೂ ನನ್ನ ವಂದನೆಗಳು.

ಇಲ್ಲಿಗೆ ಮತ್ತೆ ಭೇಟಿ ಮಾಡುತ್ತಿರಾ ಅಂತ ಆಶಿಸುತ್ತೀನಿ:)

2 comments:

 1. ಹರಿಹರಪುರಶ್ರೀಧರ್October 17, 2008 at 9:38 AM

  ಆತ್ಮೀಯರೇ
  ನಿಮ್ಮ ಬ್ಲಾಗ್ ನಿಂದ ಬಹಳ ಸಂತೋಷವಾಗಿದೆ. ಹಾಡು ಕೇಳ್ತಾ ಕೇಳ್ತಾ ಆನಂದವಾಗಿ ನೋಡ್ತಾ ಇದ್ದೀನಿ. ಧನ್ಯವಾದಗಳು. ಆಡಿಯೋ ಕೇಳಿಸೋ ತಂತ್ರವನ್ನು ನಾನು ತಿಳಿದುಕೊಳ್ಳಬೇಕಲ್ಲಾ ನನ್ನ ಬ್ಲಾಗ್ನಲ್ಲೂ ಈ ತಂತ್ರ ಉಪಯೋಗಿಸಿಕೊಳ್ಳುವಾಸೆ.
  ಹರಿಹರಪುರಶ್ರೀಧರ್
  ಹಾಸನ

  ReplyDelete
 2. ಶ್ರೀಧರ್ ಅವರೇ,
  ನಿಮ್ಮ ಮೆಚ್ಚುಗೆ,ಅಭಿಪ್ರಾಯವನ್ನು ಓದಿ ನನಗೆ ತುಂಬ ಸಂತೋಷವಾಯಿತು.ಧನ್ಯವಾದಗಳು.ನಾನು ಆಯ್ಕೆಮಾಡಿರುವ ಹಾಡುಗಳು ನಿಮಗೆ ಇಷ್ಟ ಆಯಿತೆಂದರೆ ನನಗೆ ಖುಷಿ.ಈ ಆಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ನನಗೆ ಇಮೇಲ್ ಕಳಿಸಿ,ನನಗೆ ತಿಳಿದಷ್ಟು ವಿಷಯ ನಿಮಗೆ ಬರೆಯುತ್ತೀನಿ.

  ReplyDelete

Thank you for your valuable comments. I will try to reply back as soon as possible.

Blog Widget by LinkWithin