Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

August 31, 2008

Ganesha Chaturthi/ Ganesha Habba/ ಶ್ರೀ ವರಸಿದ್ಧಿ ವಿನಾಯಕ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------
ಶ್ರೀ ವರಸಿದ್ಧಿ ವಿನಾಯಕ ವ್ರತ / ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಅವರ ಮನೆಯ ಪದ್ಧತಿ ಪ್ರಕಾರ ಮಣ್ಣಿನ ಗಣಪತಿ / ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಜನಿವಾರ, ಹತ್ತಿ ಎಳೆ, ಹುಲ್ಲಿನ ಗರಿಕೆ ಬೇಕಾಗುತ್ತೆ. ಮೊದಲು ಮನೆಯ ಗಣಪತಿಗೆ ಪೂಜೆ ಮಾಡಿ ನಂತರ ದೊಡ್ಡ ಗಣಪತಿಗೆ ಪೂಜೆ ಮಾಡಬೇಕು. ಗಣಪತಿಗೆ 21 ಹಿಡಿ 21 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ 21 ಕಡುಬು, ಮೋದಕ ಮಾಡುತ್ತಾರೆ. ತಿಂಡಿ ಪ್ರಿಯನಾದ ಗಣಪತಿಗೆ ಇದರೊಂದಿಗೆ ಬಗೆಬಗೆಯ ತಿಂಡಿಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.
ಗೌರಿ ಗಣೇಶ ಹಬ್ಬ

ಗಣಪತಿ ಹಬ್ಬದ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಿಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಒಂದು ವೇಳೆ ಅಕಸ್ಮಾತ್ ಚಂದ್ರದರ್ಶನ ಮಾಡಿದಲ್ಲಿ, ಅದರ ದೋಷ ಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು(ಶಮಂತಕ ಮಣಿ ಕಥೆ) ಶ್ರವಣ ಮಾಡಿ, ಈ ಶ್ಲೋಕವನ್ನು ಪಠಿಸಬೇಕು.

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ ||


ಸ್ನೇಹಿತರೇ ಈ ವರ್ಷ ಜೋಕೆಯಾಗಿ ಇರಿ ಆಯಿತಾ :)

ವರ ಸಿದ್ಧಿ ವಿನಾಯಕ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Varasiddhi Vinayaka Vrata + Kathe Audio link by Ganapathi Shastri (kannada audio)[needs real player]

Varasiddhi Vinayaka Vrata + Kathe Audio Link by Ganapathi Shastri (updated Aug 2018)
Varasiddhi Vinayaka Vrata + Kathe Audio Link by Raghavan Shastri


ಗಣಪತಿ ಪೂಜೆ

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ದೇವರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುತ್ತಾರೆ. "ಗಣೇಶ ಬಂದ, ಹೊಟ್ಟೆ ಮೇಲೆ ಗಂಧ, ಕಾಯಿ ಕಡುಬು ತಿಂದ , ಚಿಕ್ಕ ಕೆರೇಲಿ ಬಿದ್ದ , ದೊಡ್ಡ ಕೆರೇಲಿ ಎದ್ದ " ಅಂತ ಹೇಳಿಕೊಂಡು ಗಣಪತಿಯನ್ನು ನೀರಲ್ಲಿ ಮುಳುಗಿಸುವುದು:)

ಗಣಪತಿ ಹಾಡು/ ಸ್ತೋತ್ರಗಳು:


ವರಸಿದ್ಧಿ ವಿನಾಯಕ ನಿಮ್ಮ ಎಲ್ಲ ಕಾರ್ಯಗಳನ್ನು ಸಿದ್ಧಿಸಲಿ :)

Related Link:
Songs on lord Ganesha with lyrics
Swarna Gowri Vratha

August 28, 2008

Sri Swarna Gowri Vrata/ Gowri Habba/ ಶ್ರೀ ಸ್ವರ್ಣ ಗೌರಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------


ಶ್ರೀ ಸ್ವರ್ಣ ಗೌರಿ ವ್ರತ / ಗೌರಿ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ತ್ರಿತೀಯ/ತದಿಗೆ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ಅವರ ಮನೆಯ ಪದ್ಧತಿ ಪ್ರಕಾರ ಅರಿಶಿನದ ಗೌರಿ /ಮಣ್ಣಿನ ಗೌರಿ / ಬೆಳ್ಳಿ ಗೌರಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.



ಗೌರಿ ದೇವಿಗೆ ಪೂಜೆ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಗೌರಿ ದಾರ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ಮರದ ಜೊತೆ ಬಾಗಿನ ಬೇಕಾಗುತ್ತೆ. ಮೊದಲು ಗಣಪತಿ ಪೂಜೆ ಮಾಡಿ ನಂತರ ಸ್ವರ್ಣಗೌರಿಗೆ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಒಬ್ಬಟ್ಟು/ಹೋಳಿಗೆ ಮಾಡುತ್ತಾರೆ. ಗೌರಿ ದಾರಕ್ಕೆ ಪೂಜೆ ಮಾಡಿ ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು. ಗೌರಿ ದೇವಿಗೆ ಒಂದು ಮರದ ಜೊತೆ ಬಾಗಿನ ಕೊಡಬೇಕು. ಇದಲ್ಲದೇ ಸುಮಂಗಲಿಯರಿಗೆ ನಿಮ್ಮ ಇಚ್ಛೆ , ಶಕ್ತಿ ಅನುಸಾರ 1/4/5/8/16 ಮರದ ಬಾಗಿನ ಕೊಡಬಹುದು. ಮೊರದ ಜೊತೆ ಬಾಗಿನದ ವಿವರ ಇಲ್ಲಿದೆ. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.

ಮರದ ಬಾಗಿನ

ಸ್ವರ್ಣ ಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Swarna Gowri Vrata + kathe Audio link
(kannada audio)

Swarna Gowri Vrata + kathe Audio link (updated Aug 2018)

Swarna Gouri Vratha Audio by Bharatiya Vidya Bhavan

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ಗೌರಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ

ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ
ದುರ್ಗಾಅಷ್ಟೋತ್ತರ
All Devi Stotras and Songs
Ganesha Chaturthi
ಸ್ವರ್ಣ ಗೌರಿಯ ಕೃಪೆ ಎಲ್ಲರಿಗೂ ಸದಾ ಇರಲಿ :)

August 19, 2008

Krishna Janmashtami / Gokulashtami / ಶ್ರೀ ಕೃಷ್ಣ ಜನ್ಮಾಷ್ಟಮಿ/ ಗೋಕುಲಾಷ್ಟಮಿ

Update 31-Aug-2010:
Click here for rangoli of Lord Krishna's cradle and feet.



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಬಾಲ ಕೃಷ್ಣನಿಗೆ ಪೂಜೆ. ಪೂಜಾ ವಿಧಾನ ಇಲ್ಲಿದೆ.ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ. ಗೋವಿಂದಾಷ್ಟಕ ಇಲ್ಲಿದೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ. ಕೃಷ್ಣನ ಧ್ಯಾನದಲ್ಲಿ ಭಜನೆ, ಹಾಡುಗಳನ್ನು ಹಾಡುತ್ತಾರೆ.
ಶ್ರೀ ಕೃಷ್ಣನ ನಾಮ ಸ್ಮರಣೆ ಎಂದ ತಕ್ಷಣ ಮನಸ್ಸಿಗೆ ಬರುವುದು ದಾಸ ಪರಂಪರೆಯ ಶ್ರೀಮಂತ ಕೊಡುಗೆ. ಪುರಂದರದಾಸ, ಕನಕದಾಸ, ವಿಜಯದಾಸ, ಮೊದಲಾದವರು 'ಹರಿಯ' ಮೇಲೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಹಾಗು ಜನಪ್ರಿಯವಾದ ದೇವರನಾಮವನ್ನು ಕೆಳಗೆ ಪಟ್ಟಿ ಮಾಡಿದ್ದೀನಿ. ಧ್ವನಿ ಮುದ್ರಣ ಕೇಳಲು ಹಾಡಿನ ಮೇಲೆ ಕ್ಲಿಕ್ ಮಾಡಿ


Songs on Krishna with lyrics - 25 songs

Madhurashtaka

Govindashtaka

ಕೃಷ್ಣ ನೀ ಬೇಗನೆ ಬಾರೋ

ಬಾರೋ ಕೃಷ್ಣಯ್ಯ

ಸ್ಮರಣೆ ಒಂದೇ ಸಾಲದೇ

ನಾರಾಯಣ

ನಾರಾಯಣ ಹರಿ ಗೋವಿಂದ

ಯಾರೇ ರಂಗನ

ಜಗದೋದ್ಧಾರನ

ಸಕಲ ಗ್ರಹ ಬಲ

ಗುಮ್ಮನ ಕರೆಯದಿರೆ ಅಮ್ಮ

ಕಂಡು ಕಂಡು ನೀ ಎನ್ನ

ಪಿಳ್ಳಂಗೋವಿಯ ಚೆಲುವ ಕೃಷ್ಣ

ಕಂಡೆನಾ ಗೋವಿಂದನ

ಕಲ್ಲು ಸಕ್ಕರೆ ಕೊಳ್ಳಿರೋ

ತೂಗಿರೆ ರಂಗನ ತೂಗಿರೆ ಕೃಷ್ಣನ


ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಸದಾ ಇರಲಿ :)

August 17, 2008

Krishna Ashtottara in Kannada / ಶ್ರೀ ಕೃಷ್ಣ ಅಷ್ಟೋತ್ತರ

ಈ ವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ.



ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link

August 11, 2008

Sri Mangala Gowri Vrata / ಶ್ರೀ ಮಂಗಳಗೌರಿ ವ್ರತ

ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ನಮ್ಮ ಮನೆಯಲ್ಲಿ ಮಂಗಳಗೌರಿ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.
ಶ್ರೀ ಮಂಗಳಗೌರಿ ವ್ರತ

ಕಲಶ,ಕೊಬ್ಬರಿಯಲ್ಲಿ ಮೂಡಿರುವ ಗೌರಿ ದೇವಿ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ, ನೀವು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ. ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಿ.


ತಂಬಿಟ್ಟಿನ ಆರತಿ
ಪೂಜೆ ಮಂತ್ರಗಳನ್ನು ಪುಸ್ತಕದಿಂದ ಓದಿಕೊಳ್ಳಬಹುದು. ಈಗ ಪೂಜಾ ವಿಧಾನದ ಕ್ಯಾಸೆಟ್ /ಸಿಡಿ ಸಿಗುವುದರಿಂದ ಪೂಜೆ ಮಾಡುವುದು ಇನ್ನು ಸರಳಗೊಂಡಿದೆ. ಪೂಜಾ ವಿಧಾನದ ಕ್ಯಾಸೆಟ್ ಅಂದ ಕೂಡಲೇ ಮನ್ನಸ್ಸಿಗೆ ಬರುವ ಹೆಸರು ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು. ಇವರು ದೊಡ್ಡ ಧ್ವನಿಯಲ್ಲಿ ಸ್ಪಷ್ಟವಾಗಿ ಮಂತ್ರಗಳನ್ನು ಹೇಳಿದ್ದಾರೆ. ಇವರ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿರುವುದು ಆಶ್ಚರ್ಯವೇನಿಲ್ಲ.

ಮಂಗಳಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
1.Mangala Gowri Vratha + Kathe Audio Link (updated Aug 2018)
2.Mangala Gowri Vratha + Kathe Audio Link (esnips)

ಮಂಗಳ ಗೌರಿ ವ್ರತ ಕಥೆ ಇಲ್ಲಿ ಓದ ಬಹುದು (kannada wikisource)

ಇದರಿಂದ ನೀವು ಪೂಜೆ ಮಾಡುವುದು ಸುಲಭವಾಯಿತು ಅಲ್ಲವೇ :)

ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.ಮೊರದ ಜೊತೆ ಬಾಗಿನದ ಬಗ್ಗೆ ವಿವರ ಇಲ್ಲಿದೆ.

ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.

ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ
ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ


Link to all Devi Stotras

Link to all Devi Songs

August 9, 2008

Maha Lakshmi Ashtakam in Kannada / ಶ್ರೀ ಮಹಾಲಕ್ಷ್ಮಿ ಅಷ್ಟಕ

ಲಕ್ಷ್ಮೀ ದೇವಿಗೆ ಹೇಳುವ ಸ್ತೋತ್ರಗಳಲ್ಲಿ ಲಕ್ಷ್ಮೀ ಅಷ್ಟಕವು ಒಂದು. ಇದು ಚಿಕ್ಕದಾಗಿದ್ದು , ಕಲಿಯಲು ಸುಲಭವಾಗಿದೆ. ಪ್ರತಿ ನಿತ್ಯ ಹೇಳಲು ಸೂಕ್ತವಾಗಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಅಷ್ಟಕವನ್ನು ಸುಧಾ ರಘುನಾಥ ಅವರ ಸುಮಧುರ ಧ್ವನಿಯಲ್ಲಿ ಕೇಳಿ ಆನಂದಿಸಿ -
1.Audio Link by Sudha Raghunathan ,  (Album Link)
2.Audio Link by Meera Krishna


August 8, 2008

Lakshmi Ashtottara in Kannada / ಶ್ರೀ ಲಕ್ಷ್ಮೀ ಅಷ್ಟೋತ್ತರ

ಮುಂದಿನ ವಾರ ವರಮಹಾಲಕ್ಷ್ಮಿ ವ್ರತ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಇಲ್ಲಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - 1.Audio Link
2.Lakshmi Ashtottara by M.S.Subbalakshmi -song15

3.Audio link -song 3


Link to Lakshmi Ashtottara in Hindi and English
Blog Widget by LinkWithin