Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

February 27, 2010

Aditya Hrudayam in Kannada / ಆದಿತ್ಯ ಹೃದಯಮ್

ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಸ್ತೋತ್ರವನ್ನು ಪಠಿಸುತ್ತಾರೆ. ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.
ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio link by S.P.Balasubramanyam

2. Audio link by Purushottama Sai (song starts at 2.00 minutes)

3. Audio by Sulamagala Sisters below




4.Audio by another artist(prapatti.com)


February 16, 2010

Navagraha Peeda hara Stotram in Kannada / ನವಗ್ರಹ ಪೀಡಾ ಪರಿಹಾರ ಸ್ತೋತ್ರಂ


ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ರವಿಃ ೧

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ವಿಧುಃ ೨

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ ಸದಾ
ವೃಷ್ಟಿಕೃದ್ ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ೩

ಉತ್ಪಾತರೂಪೋ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ ೪

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ೫

ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ೬

ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ
ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ೭

ಮಹಾಶಿರಾ ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ
ಅತನುಶ್ಚೋರ್ಧ್ವಕೇಶಶ್ಚ ಪೀಡಾಂ ಹರತು ಮೇ ಶಿಖೀ ೮

ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ
ಉತ್ಪಾತರೂಪೋ ಜಗತಾಂ ಪೀಡಾಂ ಹರತು ಮೇ ತಮಃ ೯

ಇತಿ ನವಗ್ರಹ ಪೀಡಾಹರ ಸ್ತೋತ್ರಂ ಸಂಪೂರ್ಣಮ್


1.Audio Link by Vedavalli(raaga)

2.Audio Link by Vedavalli(hummaa)

3.Audio link by R.Vedavalli below:

February 11, 2010

Shiva Rudrashtakam in Kannada / ಶಿವ ರುದ್ರಾಷ್ಟಕಂ

"ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು"

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಶಿವ ರುದ್ರಾಷ್ಟಕ ಸ್ತೋತ್ರವನ್ನು ಶ್ರೀ ತುಲಸೀದಾಸರು ರಚಿಸಿದ್ದಾರೆ. ಇದರಲ್ಲಿ ಹೆಸರೇ ಹೇಳುವಂತೆ ೮ ಪಂಕ್ತಿಗಳಿವೆ.
ಶ್ರೀ ಶಿವ ರುದ್ರಾಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1.Audio Link by Thyagarajan R[song 6]

2.Audio Link by Ramesh Oza

3.Audio Link by Ashit Desai

4.Audio Link by another artist

Related Link:

February 8, 2010

Requests / Upcoming Posts / ಮುಂಬರುವ ಸ್ತೋತ್ರಗಳು

ಕಳೆದ 1 ತಿಂಗಳಿಂದ ಬ್ಲಾಗಿನಲ್ಲಿ ಯಾವುದೇ ಹೊಸ post ಬರೆದಿಲ್ಲ. ಕಾರಣ ನಾನು ದೀರ್ಘವಾದ ರಜೆಯಲ್ಲಿದ್ದೆ.(long vacation) ರಜಾ ದಿನಗಳು ತುಂಬಾ ಚೆನ್ನಾಗಿತ್ತು. ರಜೆಯ ವಿಶ್ರಾಂತಿಯ ನಂತರ ಹೊಸ ಚೈತನ್ಯದೊಡನೆ ನಾನು ಮರಳಿ ಬಂದಿದ್ದೇನೆ :) ಈಗ ಹೊಸ ಲೇಖನಗಳನ್ನು ಬೇಗ ಬರೆಯುತ್ತೀನಿ. ಈ ಸಮಯದಲ್ಲಿ ನನಗೆ ಬಹಳ ಜನ ತಮ್ಮ ಸಂದೇಶ, ಕೋರಿಕೆಗಳನ್ನು(messages & requests) ಕಳಿಸಿದ್ದೀರ. ನಿಮ್ಮ ಸಂದೇಶಗಳು ನನಗೆ ತಲುಪಿವೆ. ಮುಂದಿನ ದಿನಗಳಲ್ಲಿ ನೀವು ಕೇಳಿರುವ ಸ್ತೋತ್ರ, ಪೂಜೆಗಳ ಬಗ್ಗೆ ಬರೆಯುತ್ತೀನಿ.

ನನ್ನ ಬ್ಲಾಗ್ ಇಷ್ಟ ಪಟ್ಟು ಮೆಚ್ಚುಗೆ ವ್ಯಕ್ತ ಪಡಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು:)

ನಿಮ್ಮ ಕೋರಿಕೆಗಳು :

1.ಶ್ರೀ ಸೂಕ್ತ, ಪುರುಷ ಸೂಕ್ತ, ಮಂತ್ರ ಪುಷ್ಪ, ಆದಿತ್ಯ ಹೃದಯ, ವೈಭವ ಲಕ್ಷ್ಮೀ ವ್ರತ - ಇವುಗಳ ಬಗ್ಗೆ ಸಧ್ಯದಲ್ಲೇ ಬರೆಯುತ್ತೀನಿ.

2.ಧನುರ್ಮಾಸ ಪೂಜೆ, ಮಾಘ ಮಾಸದ ಪೂಜೆ/ಮಾಘ ಪುರಾಣ - ಧನುರ್ಮಾಸ ಮುಗಿದು, ಮಾಘಮಾಸವು ಇನ್ನೇನು ಮುಗಿಯುತ್ತ ಬಂದಿದೆ. ಸರಿಯಾದ ಸಮಯಕ್ಕೆ ಬರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಪೂಜೆಗಳ ಬಗ್ಗೆ ಆಮೇಲೆ ಬರೆಯುತ್ತೀನಿ.
Blog Widget by LinkWithin