Update:Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.
Buy Vratha Books Online
----------------------------------------------------------------------------
ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ಈ ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ಈ ವ್ರತವನ್ನು ಮಾಡುತ್ತಾರೆ.ಈ ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.
ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.
ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಕಲಶ ಸ್ಥಾಪನೆ ಚಿತ್ರ ಕೆಳಗಿದೆ.click on the image to enlarge
ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು :)
ಚಂದ್ರೋದಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:1.Moonrise and Moonset time 2.Moonrise and Moonset calculator
ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.
ಸಂಕಷ್ಟಹರ ಗಣಪತಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ಈ ವ್ರತವನ್ನು ಆಚರಿಸಬಹುದು.
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ :)
ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.
ಗಣಪತಿ ಹಾಡು/ ಸ್ತೋತ್ರಗಳು:
5.Ganesha Sahasranama
6.Ganesha Pratah Smarana Stotra
June 17, 2009
Subscribe to:
Post Comments (Atom)
very nice guidance. i liked it. thank you very much.
ReplyDeleteThumba chennagide, namma bashe yalliye mahithi siguthiruvudu thumbane nanage kushiyagide.
ReplyDeletenimma e koduge ge nanna thumbu hrudayada danya vadgalu.
prashanth
bangalore
Doorada oorugalalli iruva namage inthaha site galu bahala upayuktha.
ReplyDeleteDr.Pallavi
Yella maahiti tumba chennagi kottideera. Idakke dhanyavaadagalu. Aadare nanage ondu doubt. Ee pooja vidhaana hudukuttiddaaga, ondu websitenalli "ee vratada pooje maadabekadare hengasaru kacche haaki seere uttikollabeku" endu barediddaare. Idare bagge enaadaru nimage gotte? Gottiddare dayavittu thilisi.
ReplyDeleteVasudha
Vasudha,
ReplyDeleteNimma mecchuge tiLisiddakke dhanyavaadagaLu. kacche haakikoLLuva bagge nanage hecchu maahiti gottilla, kshamisi. haakikoLLuva batteginta, shraddhe, bhakti inda pooje maaduvudu mukhya allave?? idu nanna swanta abhipraaya ashte :)
Hi,
ReplyDeletePlease can you scan the Sankasthahara Chaturti Vratha Book which will be easier for me to follow.
Thanks
Thank for the Information Its easy for the new learners
ReplyDeleteSola Somuvaradha Vrathdha bagge Swalpa mahithi mathe pooja vidhana hagu kathegalu kotiedre upyoga aguthe
ReplyDeleteee vrathada bagge keLiddeeni aadare nanna hattira sampoorNa maahiti illa. haagaagi illi adannu baredilla. nanna blog bheTi maDiddakke dhanyavadagaLu.
DeleteThanks for making such a good blog especially in kannada. Please sankashtahara chaturthi kathe kannadalli upload maadi. Hard copy idhre upayoga aguthe.
ReplyDeleteThumba chennagide
ReplyDeleteTumba neat agi helidiri
ReplyDeleteThumba chennagi saamaanya janarige thiliyuvanthe vivarisiddiri .Dhanyavadagalu
ReplyDelete