Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

February 21, 2009

Maha Shivaratri Festival / ಮಹಾಶಿವರಾತ್ರಿ ಹಬ್ಬ

ಓಂ ನಮಃ ಶಿವಾಯ
"ಶಿವರಾತ್ರಿ ಹಬ್ಬದ ಶುಭಾಶಯಗಳು "

ಮಹಾ
ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ/ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರಬೇಕು. ಈ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ
ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆ. ಬಿಲ್ವ ಪತ್ರೆ ಈಚ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಅಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ಮಾಡುತ್ತಾರೆ.

ಶಿವ
ರಾತ್ರಿ ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆಮಾಡುತ್ತಾರೆ. ಜಾವ ( ಯಾಮ) - ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ. ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು.

ನಮ್ಮ ಮನೆಯಲ್ಲಿ ಶಿವರಾತ್ರಿ ದೊಡ್ಡ ಹಬ್ಬ.
ಈ ದಿನ ಸಾಮಾನ್ಯವಾಗಿ ಈಶ್ವರ ದೇವಾಲಯಗಳಲ್ಲಿ ರಾತ್ರಿ ಇಡೀ ಪೂಜೆ, ಭಜನೆ ನಡುಯುತ್ತದೆ. ನಮ್ಮ ಮನೆಯಲ್ಲಿ ಶಿವರಾತ್ರಿಯ ದಿನ ಮಧ್ಯರಾತ್ರಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವ ಅಭ್ಯಾಸ.

ನನ್ನ ಬ್ಲಾಗಿನಲ್ಲಿ ಇರುವ ಈಶ್ವರನ ಹಲವು ಸ್ತೋತ್ರಗಳ ಪಟ್ಟಿ ಇಲ್ಲಿದೆ:

  1. ಶಿವ ಸುಪ್ರಭಾತ /Shiva suprabhata
  2. ಶಿವ ಅಷ್ಟೋತ್ತರ/Shiva Ashtottara
  3. ಶಿವಾಷ್ಟಕ /Shivaashtaka
  4. ಲಿಂಗಾಷ್ಟಕ /Lingaashtaka
  5. ಬಿಲ್ವಾಷ್ಟಕ /Bilvaashtaka
  6. ಶಿವ ಪಂಚಾಕ್ಷರ ಸ್ತೋತ್ರ /Shiva Panchakshara Stotra
  7. Shiva Pratah Smarana Stotra
  8. Shiva Raksha Stotra
  9. Shiva Rudrashtaka
  10. Shiva Tandava Stotra
  11. Uma Maheshwara Stotra
  12. Link to all Shiva Stotras
  13. Shiva Stotras in English
ಇನ್ನಷ್ಟು ಶಿವ ಸ್ತೋತ್ರಗಳು:
ಶಿವನ ಹಾಡುಗಳು:

ಮಹೇಶ್ವರನ ಆಶೀರ್ವಾದ ಎಲ್ಲರನ್ನು ಸದಾ ಕಾಪಾಡಲಿ :)

February 19, 2009

Bilvaashtakam in Kannada / ಬಿಲ್ವಾಷ್ಟಕ ಸ್ತೋತ್ರ

ಶಿವ ಪೂಜೆ ಅಂದರೆ ಬಿಲ್ವ ಪತ್ರೆ ಇರಲೇಬೇಕು. ಬಿಲ್ವ ಪತ್ರೆ ಈಶ್ವರನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಹೇಗಿದೆ ಅಂತಗೊತ್ತಿಲ್ಲದವರಿಗೆ, ಕೆಳಗಡೆ ಚಿತ್ರ ಇದೆ.


ಬಿಲ್ವ ಪತ್ರೆ / ಗಿಡ/ ಮರ (Image Source - Wikipedia)

ಶಿವ ಸ್ತೋತ್ರಗಳಲ್ಲಿ ಬಿಲ್ವಾಷ್ಟಕವು ಒಂದು. ಸ್ತೋತ್ರವನ್ನು ಪಠಿಸುತ್ತಾ ಬಿಲ್ವ ಪಾತ್ರೆಯನ್ನು ಈಶ್ವರನಿಗೆ ಪೂಜೆ ಮಾಡಿ. ಬಿಲ್ವಾಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಬಿಲ್ವಾಷ್ಟಕದ ಧ್ವನಿ ಮುದ್ರಣ ಕೆಳಗೆ ಕೇಳಿ :

1.AudioLink- by S.P.Balasubramanyam


2.AudioLink - by Sulamangala Sisters [song 5]

3.AudioLink- by T.S.Ranganathan[song 2]

Related Link:

February 14, 2009

Shiva Suprabhatam in Kannada / ಶ್ರೀ ಶಿವ ಸುಪ್ರಭಾತ

ಶ್ರೀ ಶಿವ ಸುಪ್ರಭಾತ ಅಷ್ಟು ಜನಪ್ರಿಯವಾದ ಸ್ತೋತ್ರವೇನಲ್ಲ. ಬಹಳಷ್ಟು ಜನ ಇದನ್ನು ಕೇಳೇ ಇಲ್ಲದಿರಬಹುದು. ನಾನೂ ಇತ್ತೀಚಿಗೆ ಇದನ್ನು ಕೇಳಿದ್ದು. ವಿಜಯ ಶಂಕರ ಅವರ ಸುಮಧುರ ಧ್ವನಿಯಲ್ಲಿ ಈ ಸ್ತೋತ್ರವನ್ನು ಕೇಳಿದೊಡನೆ ನನಗೆ ಬಹಳ ಇಷ್ಟ ಆಯಿತು. ನಿಮ್ಮೊಡನೆಇದನ್ನು ಹಂಚಿಕೊಳ್ಳುವ ಆಸೆ ಆಯಿತು:) ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು.

1.AudioLink by Vijaya Shanker[song 4]

Related Link:

February 9, 2009

Lalita Sahasranama in Kannada / ಶ್ರೀ ಲಲಿತ ಸಹಸ್ರನಾಮ ಸ್ತೋತ್ರ

ದೇವಿಯ ಸ್ತೋತ್ರಗಳಲ್ಲಿ ಲಲಿ ಸಹಸ್ರನಾಮವು ಅತಿ ಪವಿತ್ರ, ಶ್ರೇಷ್ಠ ಮತ್ತು ಪರಿಪೂರ್ಣ ಸ್ತೋತ್ರ. ಸಹಸ್ರ ಎಂದರೆ ಸಾವಿರ ಎಂದರ್ಥ. ಲಲಿತ ಸಹಸ್ರನಾಮದಲ್ಲಿ ದೇವಿಯನ್ನು 1000 ನಾಮಗಳಿಂದ ಹೊಗಳಿದ್ದಾರೆ. ತಲೆ ಇಂದ ಕಾಲಿನವರೆಗೆ ವರ್ಣಿಸಿದ್ದಾರೆ. ಇದರ ವಿಶೇಷತೆ ನೆಂದರೆ ದೇವಿಯ 1000 ಪ್ರತ್ಯೇಕ ನಾಮಗಳಿವೆ, ಯಾವ ನಾಮವೂ ಮತ್ತೆ ಪುನರಾವರ್ತಿಸುವುದಿಲ್ಲ. ಸ್ತೋತ್ರವು ಬ್ರಹ್ಮಾಂಡ ಪುರಾಣದಲ್ಲಿದೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. "ಇತಿ ಶ್ರೀ ಬ್ರಹ್ಮಾಂಡ ಪುರಾಣೇ ಉತ್ತರಖಂಡೆ ಶ್ರೀ ಹಯಗ್ರೀವಾಗಸ್ತ್ಯ ಸಂವಾದೆ ಶ್ರೀ ಲಲಿತ ಸಹಸ್ರನಾ ಸ್ತೋತ್ರ ಸಂಪೂರ್ಣಂ" ಅಂತ ಮುಕ್ತಾಯ ಆಗುತ್ತದೆ. ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages
1-4


pages 5-8


Lalitha sahasranamam audio:
ಈ ಸ್ತೋತ್ರವನ್ನು ಹಲವಾರು ಗಾಯಕರು ಬೇರೆ ಬೇರೆ ರೀತಿಯಲ್ಲಿ ಹಾಡಿದ್ದಾರೆ. ನನಗೆ Bombay sisters ಹಾಡಿರುವುದು ತುಂಬ ಇಷ್ಟ. ಇವರು ಪ್ರತಿ ೧೦ ಸಾಲುಗಳನ್ನು ಬೇರೆ ರಾಗದಲ್ಲಿ ಹಾಡಿದ್ದಾರೆ. ಹಾಗಾಗಿ ನನಗೆ ಕಲಿಯಲು ಸುಲಭವಾಯಿತು :)

1.AudioLink - Bombay Sisters | Album Link

2.AudioLink - S.Janaki

3.AudioLink - Banglore Sisters

4.AudioLink - M.S.Sheela

5.AudioLink - Thyagarajan


ಆದಿಶಕ್ತಿಯನ್ನು ಆರಾಧಿಸುವುದಕ್ಕೆ ಇದು ಅತ್ಯುತ್ತಮವಾದ ಸ್ತೋತ್ರ. ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ. ಲಲಿತ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)
Blog Widget by LinkWithin