Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

December 27, 2009

Sri Vishnu Ashtottara in Kannada / ಶ್ರೀ ವಿಷ್ಣು ಅಷ್ಟೋತ್ತರ

ಶ್ರೀ ವಿಷ್ಣು ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

December 25, 2009

Vishnu Shodashanama Stotram in Kannada / ಶ್ರೀ ವಿಷ್ಣು ಷೋಡಶ ನಾಮ ಸ್ತೋತ್ರ

ಔಷಧೇ ಚಿಂತಯೇ ವಿಷ್ಣುಂ(೧),ಭೋಜನೆ ಚ ಜನಾರ್ಧನಂ,(೨)
ಶಯನೇ ಪದ್ಮನಾಭಂ ಚ,(೩)ವಿವಾಹೆ ಚ ಪ್ರಜಾಪತಿಂ, (೪)
ಯುದ್ಧೇ ಚಕ್ರಧರಂ ದೇವಂ,(೫)ಪ್ರವಾಸೆ ಚ ತ್ರಿವಿಕ್ರಮಂ, (೬)
ನಾರಾಯಣಂ ತನು ತ್ಯಾಗೆ,(೭) ಶ್ರೀಧರಂ ಪ್ರಿಯ ಸಂಗಮೆ,(೮)
ದುಃಸ್ವಪ್ನೆ ಸ್ಮರ ಗೋವಿಂದಂ,(೯) ಸಂಕಟೆ ಮಧು ಸೂಧನಂ,(೧೦)
ಕಾನನೇ ನರಸಿಂಹಂ ಚ,(೧೧) ಪಾವಕೆ ಜಲಶಾಯಿನಂ,(೧೨)
ಜಲಮಧ್ಯೆ ವರಾಹಂ ಚ,(೧೩)ಪರ್ವತೆ ರಘು ನಂದನಂ,(೧೪)
ಗಮನೆ ವಾಮನಂ ಚೈವ,(೧೫)ಸರ್ವ ಕಾರ್ಯೇಷು ಮಾಧವಂ,(೧೬)

ಷೋಡಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಟೇತ್
ಸರ್ವಪಾಪ ವಿರ್ನಿಮುಕ್ತೋ ವಿಷ್ಣುಲೋಕೆ ಮಹೀಯತೆ
ಇತಿ ಶ್ರೀ ವಿಷ್ಣು ಷೋಡಶ ನಾಮಸ್ತೋತ್ರಂ ಸಂಪೂರ್ಣಂ


1.Audio link by Ravindra Sathe(Raaga)

2. Vishnu Shodashanaama Stotra (hummaa)

December 10, 2009

Pooja Sankalpa Mantra / ಪೂಜಾ ಸಂಕಲ್ಪ ಮಂತ್ರ

ಪೂಜಾ ಸಂಕಲ್ಪ ಮಂತ್ರದ ಬಗ್ಗೆ ಓದುಗರೊಬ್ಬರು ಕೇಳಿದ್ದಾರೆ. ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ದಿನ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.

For India:

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

For USA: (same as above except for 2 lines in between)
Reference - Vontikoppal NRI Panchanga

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಕ್ರೌಂಚ ದ್ವೀಪೇ ,ಉತ್ತರ ಅಮೇರಿಕಾ ಖಂಡೆ,ಪಂಚ ಮಹಾ ಸರೋವರ ಸಮೀಪೆ, ......... (ex:California)ರಾಜ್ಯೇ, ......(ex:Los Angeles) ನಾಮ ಕಲ್ಯಾಣ ನಗರೇ,
ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ .


ಉದಾಹರಣೆ : ವರ್ಷ ವಿನಾಯಕ ಚತುರ್ಥಿ - August 23 2009 ಭಾನುವಾರ ಬಂದಿತ್ತು.

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ............ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ ವಿರೋಧಿ ನಾಮ ಸಂವತ್ಸರೇ, ದಕ್ಷಿಣಾಯನೇ ,ವರ್ಷ ಋತೌ , ಭಾದ್ರಪದ ಮಾಸೇ ,ಶುಕ್ಲ ಪಕ್ಷೇ, ಚತುರ್ಥಿ ತಿಥಿಯಾಂ , ಭಾನು ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ................ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ವರಸಿದ್ಧಿ ವಿನಾಯಕ ಸ್ವಾಮೀ (ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

(days of the week) ವಾಸರ
Sunday: ಭಾನು ವಾಸರ;
Monday: ಇಂದು/ಸೊಮ ವಾಸರ;
Tuesday: ಭೌಮ ವಾಸರ;
Wednesday: ಸೌಮ್ಯ ವಾಸರ;
Thursday: ಗುರು ವಾಸರ;
Friday: ಬೃಗು ವಾಸರ;
Saturday: ಸ್ಥಿರ ವಾಸರ




ಮಾಸಗಳು - 12 ಋತುಗಳು - 6
1.
ಚೈತ್ರ
2.
ವೈಶಾಖ
ವಸಂತ ಋತು
3.
ಜ್ಯೇಷ್ಠ
4.
ಆಷಾಢ
ಗ್ರೀಷ್ಮ ಋತು
5.
ಶ್ರಾವಣ
6.
ಭಾದ್ರಪದ
ವರ್ಷ ಋತು
7.
ಆಶ್ವಯುಜ
8.
ಕಾರ್ತಿಕ
ಶರದ್ ಋತು
9.
ಮಾರ್ಗಶಿರ
10.
ಪುಷ್ಯ
ಹಿಮಂತ ಋತು
11.
ಮಾಘ
12.
ಫಾಲ್ಗುಣ
ಶಿಶಿರ ಋತು


1 ಆಯನ = 6 ತಿಂಗಳು ; 1 ವರ್ಷದಲ್ಲಿ - 2 ಆಯನ;
ಉತ್ತರಾಯನ - Jan 14/15 to July 14/15 (ಮಕರ ಸಂಕ್ರಾಂತಿ ಇಂದ ಶುರು ಆಗುತ್ತೆ)
ದಕ್ಷಿಣಾಯನ - July 15/16 to January 15/16

ಸಂವತ್ಸರ, ಮಾಸ, ಪಕ್ಷ , ತಿಥಿ - ಇವುಗಳ ಬಗ್ಗೆ ವಿವರ ಪಂಚಾಂಗದಲ್ಲಿರುತ್ತದೆ. ಪಂಚಾಂಗ ಇಲ್ಲದಿದ್ದರೆ ನನ್ನ ಬ್ಲಾಗಿನಲ್ಲಿ ಇರುವ ಸಂಕ್ಷಿಪ್ತ ಪಂಚಾಂಗದ ಸಹಾಯ ತೆಗೆದುಕೊಳ್ಳಿ :)

Related Links:
Panchanga Details
Virodhi Samvatsara Panchanga

November 20, 2009

Subramanya (Subbaraya) Shashti / ಸುಬ್ರಹ್ಮಣ್ಯ ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ / ಸುಬ್ಬರಾಯ ಷಷ್ಠಿ ಹಬ್ಬವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ ಆಚರಿಸುತ್ತಾರೆ. ಈ ದಿನ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಬೆಳ್ಳಿ ನಾಗಪ್ಪನ ವಿಗ್ರಹ, ಸುಬ್ರಮಣ್ಯ ಸ್ವಾಮಿಯ ಪಟ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿಗೆ ಪೂಜೆ ಮಾಡಬೇಕು. ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು.ಪೂಜಾ ವಿಧಾನ ಇಲ್ಲಿದೆ. ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಯಾವುದಾದರು ಸಿಹಿ ತಿಂಡಿ ಮಾಡಿಕೊಳ್ಳಿ. ಪೂಜೆಯ ನಂತರ ಉಪನಯನ ಆಗಿರುವ ವಟುವನ್ನು ಮನೆಗೆ ಕರೆದು ಭಕ್ಷ್ಯ ಭೋಜನ ಹಾಕಿ. ಈ ಬ್ರಹ್ಮಚಾರಿ ಬಾಲಕ ಶ್ರೀ ಸುಬ್ರಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಅವನಿಗೆ ಉಪಚಾರ ಮಾಡಿ. ಊಟದ ನಂತರ ಅವನಿಗೆ ಯಥೇಚ್ಚವಾಗಿ ಉಡುಗೊರೆ, ದಕ್ಷಿಣೆ, ದಾನ ಕೊಟ್ಟು ಸಂತೃಪ್ತಿ ಪಡಿಸಬೇಕು. ನಂತರ ಮನೆಯವರೆಲ್ಲ ಊಟ ಮಾಡಬೇಕು.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನನ್ನು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

Useful Links:
Subramanya Ashottara
Subramanya Stotram
Subrahmanya Ashtaka
Subramanya Bhujangam


Subrahmanya Sahasranamavali by lakshmipathi(song 11)


  Subramanya Songs by VidyaBhushana:
Bandu Nodiro Shree Subramanya
Subbaraya Shubhakaya 
Subrahmanya Suragraganya 
Subramanya Subramanya

November 11, 2009

Anjaneya Ashtottara in Kannada / ಆಂಜನೇಯ ಅಷ್ಟೋತ್ತರ

ಶ್ರೀ ಆಂಜನೇಯ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



1.Hanuman ashtottara Audio link - by Thiyagarajan

2.Hanumana ashtottara Audio link - by Achuta Rama Sashtry

Related Link: Hanuman Chalisa

October 23, 2009

Sri Venkateshwara Suprabhatam in Kannada / ಶ್ರೀ ವೆಂಕಟೇಶ ಸುಪ್ರಭಾತ

ಹಿಂದೂಗಳು, ಅದರಲ್ಲೂ ದಕ್ಷಿಣ ಭಾರತದವರ ಮನೆಯಗಳಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಒಂದು ಇಂಪಾದ ಹಾಡು ಕೇಳಿ ಬರುತ್ತೆ. ಯಾವ ಹಾಡೆಂದು ಊಹಿಸಬಲ್ಲಿರಾ? ಇನ್ನೊಂದು ಹಿಂಟ್ ಅದು M.S. Subbalakshmi ಅವರ ಧ್ವನಿಯಲ್ಲಿದೆ. ಈಗ ನಿಮಗೆ ಯಾವ ಹಾಡು ಅಂತ ಗೊತ್ತಾಗಿರಲೇ ಬೇಕು. ಹೌದು ಅದು ಶ್ರೀ ವೆಂಕಟೇಶ್ವರ ಸುಪ್ರಭಾತ. ಸು -ಪ್ರಭಾತ ಅಂದರೆ ಸುಂದರವಾದ, ಮಂಗಳವಾದ - ಪ್ರಾತಃ ಕಾಲ. ಈ ಸುಪ್ರಭಾತ ಹಾಡಿ ಶ್ರೀ ವೆಂಕಟೇಶ್ವರನನ್ನು ನಿದ್ದೆ ಇಂದ ಎಚ್ಚರ ಮಾಡಿಸುತ್ತಾರೆ. ಈ ಸ್ತೋತ್ರವನ್ನು 1430 ನೇ ಇಸವಿಯಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣನ್ ಸ್ವಾಮೀ ಅವರು ರಚಿಸಿದ್ದಾರೆ. ಸುಪ್ರಭಾತ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



1. Meaning of Venkatesha Suprabhatam

2.Audio Link by M.S. Subbalakshmi below


October 16, 2009

Naraka Chaturdashi, Deepavali Lakshmi Pooja, Balipadyami Festival / ದೀಪಾವಳಿ ಹಬ್ಬ

(Diwali greeting source: shubhashaya.com)
ಸ್ನೇಹಿತರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು :)
ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀಪಾವಳಿ ಅಂದರೆ ೩-೪ ದಿನದ ಹಬ್ಬ.
  • ತ್ರಯೋದಶಿ ದಿನ - ನೀರು ತುಂಬುವ ಹಬ್ಬ
  • ಚತುರ್ದಶಿ ದಿನ - ನರಕ ಚತುರ್ದಶಿ
  • ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ
  • ಪಾಡ್ಯ ದಿನ - ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ
ನೀರು ತುಂಬುವ ಹಬ್ಬ - ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು.ಹೀಗಾಗಿ ಈ ದಿನ ನೀರುಹಿಡಿಯುವುದರಲ್ಲೇ ಕಳೆದು ಹೋಗುತ್ತಿತ್ತು ಅನ್ನಿಸುತ್ತದೆ.ಅದಕ್ಕೆ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ ಬಂತೇನೋ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ :)

ನರಕ ಚತುರ್ದಶಿ ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ. ಈ ದಿನ ವಿಶೇಷವಾದ ಪೂಜೆ ಅಂತೇನು ಇಲ್ಲ. ಪ್ರತಿದಿನದಂತೆ ದೇವರ ಪೂಜೆ ಅಷ್ಟೆ.

Amavasya Lakshmi Pooje:

ಮಾರನೆಯ ದಿನ ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿ ಮಾಡುತಾರೆ. ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ. ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ.ನಮ್ಮ ಮನೆಯಲ್ಲಿ ಮಾಡಿದ ಪೂಜೆಯ ಚಿತ್ರ ಕೆಳಗಿದೆ.
Lakshmi Stotras:
1. Mahalakshmi Ashtaka

2.Lakshmi Ashtottara

3.Ashtalakshmi Stotra

4.Kanakadhara Stotra

5. Lakshmi aarti song

6. Songs on Lakshmi with lyrics

ಅಮಾವಾಸ್ಯೆ ಮಾರನೆಯ ದಿನ ಕಾರ್ತಿಕ ಮಾಸದ ಪಾಡ್ಯ/ಪ್ರತಿಪತ್ . ಈ ದಿನ ಬಲಿ ಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.


ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ :) ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಆಶಿಸುತ್ತೇನೆ :)

October 13, 2009

Ashtalakshmi Stotra in Kannada / ಅಷ್ಟಲಕ್ಷ್ಮೀ ಸ್ತೋತ್ರ

ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Meera Krishna ,(Album Link)

2. Audio Link by Shweta Pandit

3. Audio Link by Sowmya (song 8)

October 4, 2009

Thank you all / ಪೂಜಾ ವಿಧಾನ ಸಂದರ್ಶಿಸಿದವರಿಗೆಲ್ಲ ನನ್ನ ಧನ್ಯವಾದಗಳು


ಕಳೆದ 2-3 ವಾರಗಳು ನನಗೆ ಬಿಡುವಿರಲಿಲ್ಲ. ಇತರೆ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೆ. ಹೀಗಾಗಿ ಬ್ಲಾಗ್ ಕಡೆ ಗಮನ ಕೊಡಲಾಗಲಿಲ್ಲ.

ಕಳೆದ ೧ ತಿಂಗಳು ಅಂದರೆ ಗೌರಿ ಗಣೇಶ ಹಬ್ಬದಿಂದ ಹಿಡಿದು ನವರಾತ್ರಿ ಹಬ್ಬದ ಸಮಯದಲ್ಲಿ ಪೂಜಾ ವಿಧಾನವನ್ನು ಸಾವಿರಾರು ಜನ ಸಂದರ್ಶಿಸಿದ್ದಾರೆ. ಬ್ಲಾಗಿನ ಅಂಕಿ ಅಂಶಗಳನ್ನು ನೋಡಿದಾಗ ನನಗೆ ವಿಸ್ಮಯ ಹಾಗು ಸಂತೋಷ ಎರಡೂ ಆಯಿತು. ಒಂದು ತಿಂಗಳಲ್ಲಿ ಸುಮಾರು ೧೦೦೦೦ ಹಿಟ್ಸ್ ಬಂದಿದೆ. ಅದರಲ್ಲಿ ಸುಮಾರು ೪೦೦೦ ಜನ ಹೊಸದಾಗಿ ಇಲ್ಲಿಗೆ ಭೇಟಿ ಮಾಡಿದ್ದರೆ!!! (10000 hits, 4000 unique hits) ಇದನ್ನು ನೋಡಿ ನನಗೆ ತುಂಬ ಖುಷಿ ಆಗುತ್ತಾ ಇದೆ. ಅದರಲ್ಲಿ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯಕ್ಕೆ ಪ್ರತ್ಯೇಕವಾಗಿ ಉತ್ತರಿಸಲು ಆಗಲಿಲ್ಲಾ ಕ್ಷಮಿಸಿ.
ಪೂಜಾ ವಿಧಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!! ತಮ್ಮ ಅಭಿಪ್ರಾಯಗಳನ್ನು ನೀಡಿರುವ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು !!!

ನಿಮ್ಮ
ಅಭಿಪ್ರಾಯಗಳಿಂದ ನನಗೆ ಬರೆಯಲು ಇನ್ನಷ್ಟು ಸ್ಫೂರ್ತಿ, ಪ್ರೇರಣೆ ಬಂದಿದೆ. ನಿಮ್ಮೆಲ್ಲರ ಸಹಕಾರದಿಂದಲೇ ಪೂಜಾ ವಿಧಾನ ಇಷ್ಟು ಯಶಸ್ವಿಯಾಗಿದೆ. ಇದೆ ರೀತಿ ಮುಂದೆಯೂ ನಿಮ್ಮ ಸಹಕಾರ ಸುಗುತ್ತದೆ ಅಂತ ಆಶಿಸುತ್ತೀನಿ :)


ಇಲ್ಲಿಗೆ ಮತ್ತೆ ಬನ್ನಿ , ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಎಲ್ಲರಿಗೂ ನನ್ನ ವಂದನೆಗಳು :)

PS: If you have any requests or suggestions, please leave a comment in the blog or email me or contact me here. I will try my best to respond to it asap:)

September 25, 2009

Durgashtami Festival , Devi Suktam in Kannada / ದುರ್ಗಾಷ್ಟಮಿ ಹಬ್ಬ, ದೇವಿ ಸೂಕ್ತ

ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು
ದುರ್ಗಾಷ್ಟಮಿ ಹಬ್ಬವನ್ನು ನವರಾತ್ರಿಯ ೮ ನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ದಿನ. ದುರ್ಗಾ ದೇವಿಯ ಪಟವನ್ನು / ಮೂರುತಿಯನ್ನು ಇಟ್ಟು ಪೂಜೆ ಮಾಡಿ. ದೇವಿಯನ್ನು ಪೂಜಗೃಹದಲ್ಲಿ ಅಥವಾ ಇತರೆ ಗೊಂಬೆಗಳ ಜೊತೆ ಇಡಬಹುದು. ದೇವಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ದುರ್ಗಾ ಅಷ್ಟೂತ್ತರ ಇಲ್ಲಿದೆ. ದೇವಿಯ ಸ್ತೋತ್ರಗಳು, ಹಾಡು, ಭಜನೆ ಇಂದ ದೇವಿಯ ಧ್ಯಾನ ಮಾಡಿ. ಪೂಜೆಯ ನಂತರ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡುತ್ತಾರೆ.
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಇದು ತಂತ್ರೋಕ್ತ ದೇವಿ ಸೂಕ್ತ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.AudioLink - by Alka Yagnik Below

 


2.AudioLink - by Ravindra Sathe [song3]

 3.AudioLink - by Ashit Desai [song 12]

  ದುರ್ಗಾ ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)

September 16, 2009

Sri Rajarajeshwari Ashtakam in Kannada / ಶ್ರೀ ರಾಜ ರಾಜೇಶ್ವರಿ ಅಷ್ಟಕ

(photo of Rajarajeshwari : Dattapeetham, Mysore)

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಅಷ್ಟಕ ಎಂದರೆ ೮. ಹೆಸರೇ ಹೇಳುವಂತೆ ರಾಜರಾಜೇಶ್ವರಿ ಅಷ್ಟಕದಲ್ಲಿ ೮ ಪಂಕ್ತಿಗಳಿವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1. Audio Link by Priya Sisters
2. Audio Link by Nithya Santhoshini,Gayathri
3. Audio Link by Mahanadi Shobhana

September 10, 2009

Sri Lalita Trishati Stotra in Kannada / ಶ್ರೀ ಲಲಿತ ತ್ರಿಶತಿ ಸ್ತೋತ್ರ

ನವರಾತ್ರಿ ಹತ್ತಿರ ಬರುತ್ತಿದೆ, ಹಾಗಾಗಿ ಈ ತಿಂಗಳು ದೇವಿಯ ಸ್ತೋತ್ರಗಳನ್ನು ಪ್ರಕಟಿಸುತ್ತೀನಿ. ಪುರಾಣಗಳಲ್ಲಿ 18 ನೇ ಪುರಾಣ ಬ್ರಹ್ಮಾಂಡ ಪುರಾಣ. ಈ ಪುರಾಣದಲ್ಲಿ ಲಲಿತ ದೇವಿಯನ್ನು ಅತಿಶಯವಾಗಿ ಹೊಗಳಿ, ಸ್ತುತಿಸಲಾಗಿದೆ. ಇದರಲ್ಲಿ ಲಲಿತೊಪಾಖ್ಯಾನ (ಉಪಾಖ್ಯಾನ - ಉಪ ಕಥೆ ; ಲಲಿತಾ ದೇವಿಯ ಕಥೆ), ಲಲಿತಾ ಸಹಸ್ರನಾಮ, ಲಲಿತಾ ತ್ರಿಶತಿ ಸ್ತೋತ್ರಗಳಿವೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. ತ್ರಿಶತಿ ಅಂದರೆ 300. ಈ ಲಲಿತಾ ತ್ರಿಶತಿ ಸ್ತೋತ್ರದಲ್ಲಿ ದೇವಿಯ 300 ನಾಮಗಳಿವೆ. ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ. ೪ ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages
1-4


Lalitha Trishathi audio:

1. Audio Link by T.S.Ranganathan below


2. Audio Link by S.Janaki (recited as NamavaLi )

3. Audio Link - Part - 1, Part - 2 ( recited as Namavali)

ಲಲಿತಾ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)


Related Link:
Lalita Sahasranama

August 30, 2009

Hindu Panchanga 2009 / Virodhi Samvatsara Panchanga / ವಿರೋಧಿ ನಾಮ ಸಂವತ್ಸರ ಪಂಚಾಂಗ



Nandana Samvatsara Panchanga (2012 -2013) is here

ಹೊಸ ವರ್ಷ ಶುರು ಆದಾಗಿನಿಂದ ಈ ವರ್ಷದ ಹಬ್ಬಗಳ ಒಂದು ಲಿಸ್ಟ್ ಇಲ್ಲಿ ಹಾಕಬೇಕು ಅಂತ ಪ್ಲಾನ್ ಮಾಡ್ತಾ ಇದ್ದೆ. ಆಗಲೇ 6 ತಿಂಗಳು ಆಯಿತು , ಈಗ ಪಟ್ಟಿ ಹಾಕುತ್ತ ಇದ್ದೀನಿ. Better late than never ಅಂತ ಹೇಳ್ತಾರಲ್ಲ ಹಾಗೆ :) ಈ ಪಟ್ಟಿಯಲ್ಲಿ ಮುಂದಿನ 6 ತಿಂಗಳು ಆಚರಿಸುವ ಮುಖ್ಯವಾದ ಹಬ್ಬ ಹರಿದಿನಗಳ ದಿನಾಂಕ ಇದೆ. (USA & India dates)
Hindu Panchangam / List of Festivals - Sept 2009 to Mar 2010
Festival/PoojaUSAIndiaMonthly PoojaUSAIndia
Vaikunta EkadashiDec27Dec28


Dhanurmasa pooja endsJan13Dec 17Sankashta ChautiJan 3Jan 3
Makara SankarantiJan14Jan14Satyanarayana PoojaJan 29Jan 29
Vasanta PanchamiJan 20Jan 20


Ratha SaptamiJan 22Jan 22Sankashta ChautiFeb 1Feb 2
Maha ShivaratriFeb 11Feb 12Satyanarayana PoojaFeb 27Feb 28
Holi festivalFeb 27Feb 28Sankashta ChautiMar 3Mar 3
Blog Widget by LinkWithin