ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಯುಗಾದಿ ಹಬ್ಬ 27 March 2009 ದಿನ ಬಂದಿದೆ.ಹೋದ ವರ್ಷ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಈ ವರ್ಷ ಹಿಂದೂ ಪಂಚಾಂಗ ಬಗ್ಗೆ ಸ್ವಲ್ಪ ವಿವರ ಬರೆಯೋಣ ಅಂತ ಅನ್ನಿಸಿತು.
ಯುಗಾದಿ ಹಬ್ಬ ಅಂದರೆ ಹೊಸ ವರ್ಷದ ಪಂಚಾಂಗ ನೆನಪಾಗುತ್ತದೆ. ಹಬ್ಬ ಹರಿದಿನ, ಪೂಜೆ, ವ್ರತ, ಗ್ರಹಣ, ಮುಹೂರ್ತಗಳು ಇವುಗಳ ವಿವರ ಪಂಚಂಗದಲ್ಲಿದೆ. ಕನ್ನಡಿಗರು ಅನುಸರಿಸುವುದು ಚಂದ್ರಮಾನ ಪಂಚಾಂಗ. ಇದರಲ್ಲಿ ಚಂದ್ರನ ಚಲನೆಯನ್ನು ಆಧರಿಸಿ ದಿನ, ಪಕ್ಷ, ಮಾಸ, ವರ್ಷವನ್ನು ಲೆಕ್ಕಹಾಕುತ್ತಾರೆ. 1 ವರ್ಷಕ್ಕೆ ಸಂವತ್ಸರವೆನ್ನುತ್ತಾರೆ. ಒಟ್ಟು 60 ಸಂವತ್ಸರ ಇದೆ. ಅವುಗಳ ಹೆಸರು ಕೆಳಗಿನ ಚಿತ್ರದಲ್ಲಿದೆ.
1 ಸಂವತ್ಸರದಲ್ಲಿ 12 ಮಾಸ ಇದೆ. 6 ಋತುಗಳು ಇದೆ. ಒಂದು ಋತುವಿನ ಅವಧಿ 2 ಮಾಸಗಳು. ಒಂದು ಮಾಸದಲ್ಲಿ 2 ಪಕ್ಷ ಇದೆ. ಒಂದು ಪಕ್ಷದಲ್ಲಿ 15 ತಿಥಿಗಳಿವೆ. ಒಂದು ಮಾಸದಲ್ಲಿ ಒಟ್ಟು 30 ತಿಥಿಗಳು. ಮೊದಲು 15 ತಿಥಿಗಳಿಗೆ (ಪಾಡ್ಯದಿಂದ ಪೂರ್ಣಿಮಾ ವರೆಗೆ) ಶುಕ್ಲ ಪಕ್ಷ ಅಂತ ಹೆಸರು , ಮುಂದಿನ ೧೫ ತಿಥಿಗಳಿಗೆ (ಪಾಡ್ಯದಿಂದ ಅಮಾವಾಸ್ಯೆ ವರಗೆ) ಕೃಷ್ಣ ಪಕ್ಷ ಅಂತ ಹೆಸರು.
ಮಾಸಗಳು - 12 | ಋತುಗಳು - 6 | |||
---|---|---|---|---|
1. | ಚೈತ್ರ | 2. | ವೈಶಾಖ | ವಸಂತ ಋತು |
3. | ಜ್ಯೇಷ್ಠ | 4. | ಆಷಾಢ | ಗ್ರೀಷ್ಮ ಋತು |
5. | ಶ್ರಾವಣ | 6. | ಭಾದ್ರಪದ | ವರ್ಷ ಋತು |
7. | ಆಶ್ವಯುಜ | 8. | ಕಾರ್ತಿಕ | ಶರದ್ ಋತು |
9. | ಮಾರ್ಗಶಿರ | 10. | ಪುಷ್ಯ | ಹಿಮಂತ ಋತು |
11. | ಮಾಘ | 12. | ಫಾಲ್ಗುಣ | ಶಿಶಿರ ಋತು |
ಪಂಚಾಂಗ ಅಂದರೆ 5 ಅಂಗಗಳು - ತಿಥಿ, ವಾರ, ನಕ್ಷತ್ರ, ಯೋಗ, ಕರಣ. ತಿಥಿಗಳು - 30, ವಾರಗಳು - 7, ನಕ್ಷತ್ರಗಳು - 27, ಯೋಗಗಳು - 27, ಕಾರಣಗಳು -11. ಇವುಗಳು ಹೆಸರುಗಳು ಕೆಳಗಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ನಮ್ಮ ಮನೆಯಲ್ಲಿ ಒಂಟಿಕೊಪ್ಪಲ್ ಪಂಚಾಂಗವನ್ನು ಅನುಸರಿಸುತ್ತೀವಿ. ಈಗ ಅಮೆರಿಕದಲ್ಲಿ ಇರುವವರಿಗೆ ಸಹಾಯವಾಗುವಂತೆ "America Samyukta Samsthanada Panchanga"(NRI Vontikoppal Panchanga) ಅನ್ನು ಪ್ರಕಟಿಸುತ್ತಾರೆ. ಇದರಲ್ಲಿ ಅಮೇರಿಕಾದ latitudes & longitudes ಪ್ರಕಾರ ಲೆಕ್ಕಾಚಾರ ಮಾಡಿ ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದಿದ್ದಾರೆ. ನನ್ನಂತಹ ಅನಿವಾಸಿ ಕನ್ನಡಿಗರಿಗೆ ಇದು ಬಹಳ ಅನುಕೂಲಕರವಾಗಿದೆ. thatskannada ದಲ್ಲಿ NRI panchanga ದ ಬಗ್ಗೆ ಮಾಹಿತಿ ಇದೆ. ಅಮೇರಿಕಾದಲ್ಲಿ ಪಂಚಾಂಗ ಬೇಕೆನ್ನುವವರು Krishna Sastry, Iowa, USA - ಇವರನ್ನು ಸಂಪರ್ಕಿಸಿ ಅಂತ ಬರೆದಿದ್ದಾರೆ. ಇದು 2003 ರಲ್ಲಿ ಹಾಕಿರುವ ಮಾಹಿತಿ, ಸಧ್ಯದ ಸಮಾಚಾರ ಗೊತ್ತಿಲ್ಲ. check this thatskannada link for contact details. ನಾನು ಇವರನ್ನು ಸಂಪರ್ಕಿಸಿಲ್ಲ, ನಾನು ಪಂಚಾಂಗವನ್ನು ಬೆಂಗಳೂರಿನಿಂದಲೇ ತರಿಸಿಕೊಳ್ಳುತ್ತಿದ್ದೀನಿ. ನಿಮಗೆ ಪಂಚಾಂಗ ಸಿಗದೇ ಇದ್ದರೆ, ನನ್ನ ಬ್ಲಾಗಿಗೆ ಬನ್ನಿ ಯಾವ ಹಬ್ಬ ಯಾವತ್ತು ಇದೆ ಅಂತ ನಾನು ಇಲ್ಲಿ ಹಾಕುತ್ತೀನಿ :)
ಈ ಹೊಸ ವರ್ಷ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ:)
Related Link:
Please post the VIRODHIKRITH NAMA Samavatsara.
ReplyDeleteVery informative web site. Let us join and make it more and more informative.
Thanks
JAY RAM
ಆ ಭಗವಂತ ನಿಮಗೆ ಬರೆಯುವ ಶಕ್ತಿ ಕೊಡಲಿ, ನಾವುಗಳೆಲ್ಲಾ ಓದುತ್ತೇವೆ ನಿಮ್ಮ ಜ್ಞಾನ ಹಂಚಿಕೊಳ್ತೆವೇ . ನಮಗೆ ಓದುವ ಹಾಗೂ
ReplyDeleteಪಾಲಿಸುವ ಶಕ್ತಿ ಕೊಡಲಿ ಅಂತ ಪ್ರಾರ್ಥನೆ.
Thank you for your well wishes.
DeleteThank you so much for the each and every pooja details :) from Austin,TX
ReplyDeletePls post all the puje Vidhi vidya a in English as I can't read Kannada.. And would really need help from people like you to perform all the rituals religious.. I don't have any gudance but would like to teach my two girls about all puje vidhis
ReplyDelete