Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

May 6, 2009

Narasimha Jayanti, Lakshmi Narasimha Ashtottara Shatanama in Kannada

ನರಸಿಂಹ ಜಯಂತಿ , ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ


ವಿಷ್ಣುವಿನ ಹತ್ತವತಾರದಲ್ಲಿ ನರಸಿಂಹ ಅವತಾರವು ಒಂದು. ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಭ ಒಡೆದು ಪ್ರತ್ಯಕ್ಷನಾಗಿ, ಹಿರಣ್ಯ ಕಷಿಪುವನ್ನು ವಧೆ ಮಾಡಿ ಪ್ರಹ್ಲಾದನನ್ನು ಶ್ರೀ ನೃಸಿಂಹ ಕಾಪಾಡಿದನು.

ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಶ್ರೀ ವೈಷ್ಣವರು, ಸೌರಮಾನ ಪಂಚಾಂಗ ಅನುಸರಿಸುವರು ಬೇರೆ ತಿಥಿ ನಕ್ಷತ್ರದಲ್ಲಿ ಆಚರಿಸುತ್ತಾರೆ. ದಿನ ಲಕ್ಷ್ಮಿ ನರಸಿಂಹ ಸ್ವಾಮಿಗೆ
ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ ಪಟ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio of Narasimha Ashtottara - by VidyaBhushana

2.Audio link by T.Srinivas

ಶ್ರೀ ನರಸಿಂಹ ಸ್ತೋತ್ರಗಳು, ಹಾಡುಗಳು:

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ :)

8 comments:

  1. ನರಸಿಂಹ ಜಯಂತಿ ಅನ್ನೋ ಹಬ್ಬ ಇದೆ ಅನ್ನೋದೇ ಗೊತ್ತಿರಲಿಲ್ಲ.. ವಿವರಗಳನ್ನು ತಿಳಿಸದಕ್ಕೆ ವಂದನೆಗಳು !!

    ReplyDelete
  2. ರೂಪಶ್ರೀ
    ಪೂಜೆ ಹಬ್ಬಗಳ ಬಗ್ಗೆ ತಿಳಿಸುವುದೇ ಈ ಬ್ಲಾಗಿನ ಉದ್ದೇಶ, ನಿಮಗೆ ಈ ಹಬ್ಬದ ವಿವರ ಇಲ್ಲಿಂದ ಗೊತ್ತಾಯಿತು ಅಂತ ಕೇಳಿ ನನಗೆ ಖುಷಿ:)

    ReplyDelete
  3. OM GAM GANAPATHAYE NAMAHA + OM SAI RAM + SHREE GURU DHAKSHINAMURTHAYE NAMAHA = = :) GOOD EVENING or SHUBHA SANJE = :)
    dina nitya pooja mantra 1) raathri malaguva munna yava mantra 2) belligge edda thakshana yava mantra = pls send dis
    shobithgirishraj@gmail.com
    9900000954

    ReplyDelete
    Replies
    1. Hold your hands and look into your palms and sing the following

      Karagre Vasathe Lakshmi
      Kara Madhye Saraswathi
      Kara Moole Sthithe Gowri
      Prabhathe kara darshanam

      Before resting your feet on the ground recite the following

      Samudra Vasane Devi parvathasthana mandithe
      Vishnu pathnim namasthubhyam pada sparsham Kshamasmave

      Delete
    2. Can any one share habbada vidhan for narasimha jayanthi?

      Savitha

      Delete
  4. ನರಸಿಂಹ ದೇವರ ಹೆಸರು ಇರುವ ವೆ.ವೊ, ಕ. ಕಿ ಅಕ್ಷರಗಳಲ್ಲಿ ಪ್ರಾರಂಭವಾಗುವ ಗಂಡು ಮಗುವಿಗೆ ಹೆಸರನ್ನು ಸೂಚಿಸಿ

    ReplyDelete
  5. ಈ ಅಕ್ಷರದಿಂದ ನರಸಿಂಹ ನಾಮಗಳು ಯಾವುದು ಹೊಳೆಯುತ್ತಿಲ್ಲ.ಕೆಲವು ವಿಷ್ಣುವಿನ ನಾಮಗಳು ಇಲ್ಲಿವೆ - ಕಮಲನಾಥ, ಕಮಲಾಕಾಂತ, ಕಮಲಾಕ್ಷ, ಕಮಲೇಶ,ಕಪಿಲ, ಕಲ್ಕಿ,ವೇದಾಂತ, ವೇದಾತ್ಮ.

    ReplyDelete
  6. Before Sleeping
    Agasthyo Madhavashchaiva Muchukundo Mahamunihi
    Kapilo Muniraastheekaha Panchaithe Sukha Shahinaha

    To get rid of bad dreams
    Ramam Skandam Hanumantham Vainatheyam Vrukodaram
    Panchaithan Smare nityam Duswapnam Tasya Nashyathe

    For ladies
    Ahalya Drowpade Seetha Thara Mandori
    Pancha Kanya Smare Nityam Maha Pathaka Nashanam

    ReplyDelete

Thank you for your valuable comments. I will try to reply back as soon as possible.

Blog Widget by LinkWithin