Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 2, 2009

Sri Rama Navami Festival / ಶ್ರೀ ರಾಮ ನವಮಿ ಹಬ್ಬ

"ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ"


ರಾಮ ನವಮೀ
ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ ೯ ದಿನದ ರಾಮೋತ್ಸವ ಮಾಡುತ್ತಾರೆ.
ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಇಲ್ಲ. ಇದು ಸರಳವಾದ ಹಬ್ಬ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕದ / ರಾಮ ಪಂಚಾಯತದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ಇದರಲ್ಲಿ ಶ್ರೀ ರಾಮನ ಜೊತೆಗೆ ಎಲ್ಲ ತಮ್ಮಂದಿರೂ ಇರುತ್ತಾರೆ. ಶ್ರೀ ರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ರಾಮ ಅಷ್ಟೋತ್ತರ ಇಲ್ಲಿದೆ. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚುತ್ತಾರೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ.

ರಾಮ ನವಮಿಯ ಇನ್ನೊಂದು ವಿಶೇಷತೆ ರಾಮ ನಾಮ ಬರೆಯುವುದು. ರಾಮ ನಾಮದ ಮಹಿಮೆ ಅಪಾರ. ಇದನ್ನು ತಾರಕ ನಾಮ ಎಂದೂ ಹೇಳುತ್ತಾರೆ. (ತಾರಕ = ಸಂರಕ್ಷಕ, ಕಾಪಾಡುವವನು, ಪಾರುಮಾಡುವುದು) ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. "ರಾಮ" "ಶ್ರೀ ರಾಮ" "ಶ್ರೀ ರಾಮ ಜಯ ರಾಮ" "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಇತ್ಯಾದಿ - ನಿಮಗೆ ಇಷ್ಟವಾದ ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ನಿಮ್ಮ ಕೈಲಾದಷ್ಟು ನಾಮ ಬರೆಯಬಹುದು, ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯಿರಿ. ಇದನ್ನು ಮಕ್ಕಳೂ ಬರೆಯಬಹುದು. ನಮ್ಮ ತಾಯಿ ನನಗೆ ಓದಿ ಬರೆಯಲು ಬಂದ ತಕ್ಷಣ ಈ ರಾಮ ನಾಮ ಬರೆಯುವ ಅಭ್ಯಾಸ ಮಾಡಿಸಿದರು. ಆ ಅಭ್ಯಾಸ ಇಂದಿಗೂ ಮುಂದುವರೆಸುತ್ತಿದ್ದೀನಿ.

ಯಾರಿಗೆ ಬೇಕು ಪಾನಕ , ಕೋಸಂಬರಿ , ಮಜ್ಜಿಗೆ :)
click here for the recipe
ರಾಮ ನವಮಿ ಅಂದರೆ ಪಾನಕ, ಮಜ್ಜಿಗೆ, ಕೋಸಂಬರಿ ಸಮಾರಾಧನೆ ನೆನಪಾಗುತ್ತದೆ. ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪಾನಕ, ಕೋಸಂಬರಿಗಳನ್ನು ಹಂಚುತ್ತಾರೆ. ಬೇಸಿಗೆಯ ಸುಡುವ ಬಿಸಿಲಿಗೆ ತಂಪು ಮಾಡಲು ತಂಪಾದ ಪಾನಕ ಮಜ್ಜಿಗೆ ಹೇಳಿ ಮಾಡಿಸಿದ ಜೋಡಿ. ಈ ಕಾರಣಕ್ಕೇ ಈ ಪಾನೀಯಗಳನ್ನು ಮಾಡುತ್ತಾರೆ ಅನ್ನಿಸುತ್ತದೆ. ಸಾಮಾನ್ಯವಾಗಿ ಬೇಲದಹಣ್ಣು (wood apple) ಮತ್ತು ಬೆಲ್ಲ ಸೇರಿಸಿ ಷರಬತ್ತು ಮಾಡುತ್ತಾರೆ. ಬೇಲದ ಹಣ್ಣು ಸಿಗದಿದ್ದರೆ ನಿಂಬೆ ಹಣ್ಣಿನಿಂದ ಮಾಡಿ. ಒಟ್ಟಿನಲ್ಲಿ ಯಾವುದೋ ಒಂದು ಹಣ್ಣಿನಿಂದ ಪಾನಕ ಮಾಡಿ ಅಷ್ಟೆ :)

ಶ್ರೀ ರಾಮ ಸ್ತೋತ್ರಗಳ ಪಟ್ಟಿ ಇಲ್ಲಿದೆ:
 1. ರಾಮ ಅಷ್ಟೋತ್ತರ/Rama Ashtottara(kannada)
 2. श्री राम अष्टोत्तर / Rama Ashtottara (English)
 3. ರಾಮ ರಕ್ಷಾ ಸ್ತೋತ್ರ/Rama Raksha Stotra
 4. ರಾಮ ಅಷ್ಟಕ / Rama Ashtaka
 5. ರಾಮ ಸಹಸ್ರನಾಮ/Rama Sahasranama
 6. ನಾಮ ರಾಮಾಯಣ/Nama Ramayana
ಶ್ರೀ ರಾಮನ ಹಾಡುಗಳು:
ರಾಮ ನವಮಿ ಬಗ್ಗೆ ಹೇಳುವಾಗ ಇನ್ನೊಂದು ಸುಮಧುರ ಸಂಗತಿ ನೆನಪಾಗುತ್ತದೆ. ಅದು ರಾಮ ನವಮಿ ಸಂಗೀತ ಕಛೇರಿಗಳು. ಹಲವಾರು ಕಡೆ ವಾರ , ತಿಂಗಳುಗಟ್ಟಲೆ ಕಛೇರಿ ನಡೆಯುತ್ತದೆ. ಹೆಸರಾಂತ ಸಂಗೀತಗಾರರು ಸಂಗೀತರಸಿಕರ ಮನಸ್ಸನ್ನು ತಣಿಸುತ್ತಾರೆ. ಬೆಂಗಳೂರಿನ ಚಾಮರಾಜಪೇಟೆ ಅಲ್ಲಿರುವ ರಾಮ ಸೇವಾ ಮಂಡಳಿ ಯವರು ಏರ್ಪಡಿಸುವ ರಾಮ ನವಮಿ ಸಂಗೀತ ಕಛೇರಿ ಹೆಸರುವಾಸಿಯಾದದ್ದು. ಸುಮಾರು ೬೦ ವರ್ಷಗಳಿಂದ ನಡೆದು ಬರುತ್ತಾಇದೆ. ಇಷ್ಟು ದೂರ ಇರುವ ನಾನು ಈ ಕಛೇರಿಗಳನ್ನು ಮಿಸ್ ಮಾಡ್ತೀನಿ. ಬೆಂಗಳೂರಲ್ಲಿ ಇರುವವರು ಸಂಗೀತವನ್ನು ಆನಂದಿಸಿ. ಅವರದ್ದೇ website ಕೂಡ ಇದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
Rama Seva Mandali,Bangalore - Rama Navami Concerts Apr 8 to May 8 2016

ಶ್ರೀ ರಾಮನು ಎಲ್ಲರಿಗೂ ಮಂಗಳವನ್ನು ಮಾಡಲಿ :)

3 comments:

 1. Thank you very much for this site and all the info.
  very useful for horanaada avaasi kannadigaru.

  namaskaram
  hari Om.

  Dr.Rajamurthy

  ReplyDelete
 2. Hallow
  This is anil from Hubli. I saw your blog it is very helpful. I would like to request you that if you have the following song

  || Jaya Jaya Shankaraacharya
  jaya jaya nityaniranjana soorya...||

  pls post it on your blog or mail me to my mail ID encanil@yahoo.co.in pls its urgent

  ReplyDelete

Thank you for your valuable comments. I will try to reply back as soon as possible.

Blog Widget by LinkWithin