Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

January 31, 2009

Ratha Saptami Festival / ರಥ ಸಪ್ತಮೀ ಹಬ್ಬ



ರಥ ಸಪ್ತಮಿ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮೀ ದಿನ ಆಚರಿಸುತ್ತಾರೆ. ಇದು ಸೂರ್ಯ ದೇವನ ಹಬ್ಬ. ಸೂರ್ಯನು ಸಿಂಹ ರಾಶಿಯ ಅಧಿಪತಿ. ಸೂರ್ಯನು ಧನಸ್ಸು ರಾಶಿ ಇಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ, ತನ್ನ ಏಳು ಕುದುರೆಗಳ ರಥ ಏರಿ ಹೋಗುತ್ತಾನೆ. ಈ ದಿನ ಅರುಣೋದಯದ ಕಾಲದಲ್ಲಿ ಸ್ನಾನ ಮಾಡಿ , ಸೂರ್ಯನಿಗೆ ಪೂಜೆ ಮಾಡುತ್ತಾರೆ.ಸ್ನಾನ ಮಾಡುವಾಗ ಎಕ್ಕದ ಗಿಡದ 7ಎಲೆಗಳನ್ನು ನೆತ್ತಿ/ತಲೆ, ಭುಜ, ತೊಡೆ ಮೇಲೆ ಇಟ್ಟುಕೊಂಡು ಸ್ನಾನ ಮಾಡುತ್ತಾರೆ. ಎಕ್ಕದ ಗಿಡ ಹೇಗಿರುತ್ತೆ ಅಂತಗೊತ್ತಿಲ್ಲದವರಿಗೆ, ಕೆಳಗೆ ಎಕ್ಕದ ಗಿಡದ ಚಿತ್ರ ಇದೆ.

ಎಕ್ಕದ ಗಿಡ
ಕೆಳಗಿರುವ ಮಂತ್ರವನ್ನು ಹೇಳಿಕೊಂಡು ಸ್ನಾನ ಮಾಡಬೇಕು ಬೇಕು.



ಸ್ನಾನದ ನಂತರ ಸೂರ್ಯನಿಗೆ ಅಷ್ಟೋತ್ತರ, ನೈವೇದ್ಯದಿಂದ ಪೂಜೆ ಮಾಡುತ್ತಾರೆ. ಪೂಜಾ ವಿಧಾನ ಇಲ್ಲಿದೆ. ಸೂರ್ಯನಿಗೆ ಪ್ರಿಯವಾದ ಗೋಧಿ/ರವೆ ಪಾಯಸ ನೈವೇದ್ಯ. ದಿನ ಪೂಜೆ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿದಲ್ಲಿ ಎಲ್ಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ.

ರಥ ಸಪ್ತಮಿ ಬಹಳ ಶುಭಕರವಾದ ದಿನ. ಹೀಗಾಗಿ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಸೂರ್ಯನು ರಥವನ್ನೇರಿ ಮೇಲೆ ಹೋದಂತೆ ನಮ್ಮ ಕಾರ್ಯಗಳಲ್ಲಿ, ಬಾಳಲ್ಲಿ ನಾವೂ ಯಶಸ್ಸು ಪಡೆಯುತ್ತೀವಿ ಎಂಬ ನಂಬಿಕೆ.ಸೂರ್ಯ ದೇವರ ಸ್ತೋತ್ರಗಳು ಇಲ್ಲಿದೆ:

1.Surya Ashtakam[song 11]

2.Surya Ashtottara

3.Surya Pratah Smarana Stotra

ಸೂರ್ಯನ ಕಿರಣದಂತೆ ನಿಮ್ಮ ಬಾಳೂ ಉಜ್ವಲವಾಗಲಿ :)

January 27, 2009

Shiva Panchakshara Stotram in kannada / ಶ್ರೀ ಶಿವ ಪಂಚಾಕ್ಷರ ಸ್ತೋತ್ರ

ಓಂ ನಮಃ ಶಿವಾಯ

ನ - ಮಃ - ಶಿ -ವಾ - ಯ - ಈ ಐದು ಅಕ್ಷರಗಳೇ ಶಿವ ಪಂಚಾಕ್ಷರ . ಈ ಪಂಚಾಕ್ಷರ ಶಿವ ಧ್ಯಾನ ಮಾಡುವುದಕ್ಕೆ ಅತಿ ಸುಲಭ ಹಾಗು ಪ್ರಬಲವಾದ ಮಂತ್ರ. ಪಂಚಾಕ್ಷರ ಸ್ತೋತ್ರದಲ್ಲಿ ಪ್ರತಿ ಒಂದು ಅಕ್ಷರಕ್ಕೂ ಒಂದು ಪಂಕ್ತಿ ಇದೆ (5 verse) ಪ್ರತಿ ಒಂದು ಅಕ್ಷರವು ಈಶ್ವರನ ಸ್ವರೂಪ , ಅವನಿಗೆ ಅನಂತ ನಮಸ್ಕಾರಗಳು. ಈ ಸ್ತೋತ್ರದ ಪಠಣದಿಂದ ನಾವು ಸದಾ ಶಿವನ ಕೃಪೆಗೆ ಪಾತ್ರರಾಗುತ್ತೀವಿ. ಇದು ಶ್ರೀ ಶಂಕರಾಚಾರ್ಯ ವಿಚರಿತ ಸ್ತೋತ್ರ. ಶ್ರೀ ಶಿವ ಪಂಚಾಕ್ಷರ ಸ್ತೋತ್ರ ಕನ್ನಡದಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ



1.AudioLink by M.S.Subbalaksmi[song2]

2.AudioLink - by Usha Seturaman [song 10]

3.AudioLink- by Pt. Jasraj[song 5]

Related Link:

January 20, 2009

Lingashtakam in Kannada / ಲಿಂಗಾಷ್ಟಕ ಸ್ತೋತ್ರ

ಲಿಂಗಾಷ್ಟಕ ಶಿವ ಸ್ತೋತ್ರಗಳಲ್ಲಿ ಜನಪ್ರಿಯವಾದ ಒಂದು ಸ್ತೋತ್ರ. ಇದನ್ನು SPB ಅವರು ಸುಶ್ರಾವ್ಯವಾಗಿ ಹಾಡಿ ಇನ್ನಷ್ಟು ಜನಪ್ರಿಯ ಮಾಡಿದ್ದಾರೆ ಅಲ್ಲವೇ. ಲಿಂಗಾಷ್ಟಕ ಸ್ತೋತ್ರ ಇಲ್ಲಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



1.AudioLink - by S.P.Balasubramanyam

2.AudioLink - by Sulamangala Sisters [song 9]

3.AudioLink- by T.S.Ranganathan[song 1]

4.AudioLink- by Sudha Raghunathan[song 3]

Related Link:

January 12, 2009

Makara Sankranti / Shankranti / ಮಕರ ಸಂಕ್ರಾಂತಿ

"ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶು ಕಾಮನೆಗಳು "

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳನ್ನು ಪಂಚಾಂಗದ ಪ್ರಕಾರ ಮಾಡುತ್ತೀವಿ. ಪಂಚಾಂಗವು ಚಂದ್ರಮಾನ ಅಥವಾ ನಿರಯನ ಅಂದರೆ ಚಂದ್ರನ ಚಲನೆಯನ್ನು ಆಧರಿಸಿ ತಿಥಿ, ನಕ್ಷತ್ರ ಎಲ್ಲ ನಿರ್ಧರಿಸುತ್ತಾರೆ. ಸಂಕ್ರಾಂತಿ ಹಬ್ಬವು ಇದಕ್ಕೆ ಹೊರತು. ಸಂಕ್ರಾತಿ ಹಬ್ಬವು ಸಾಯನ ಅಥವಾ ಸೂರ್ಯನ ಚಲನೆಯನ್ನು ಆಧರಿಸಿದೆ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ ಆಚರಿಸುವ ಹಬ್ಬ ಈ ಸಂಕ್ರಾಂತಿ ಹಬ್ಬ. (ಮಕರ - ಮಕರ ರಾಶಿ, ಸಂಕ್ರಮಣ - ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟುವ ಸಮಯ) ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೀವಿ. ಸೂರ್ಯನು ಉತ್ತರಾಭಿ ಮುಖವಾಗಿ ಪರಿಭ್ರಮಣೆ ಶುರು ಮಾಡುತ್ತಾನೆ.ಆದ್ದರಿಂದ ಉತ್ತರಾಯಣ ಕಾಲ ಎಂದೂ ಕರೆಯುತ್ತಾರೆ. ಹೀಗಾಗಿ ದಿನದ ಅವಧಿ ಹೆಚ್ಚಾಗಿ, ರಾತ್ರಿಯ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಸೂರ್ಯನು ಮೇಲೇರಿ ಪ್ರಕಾಶ ಬೀರುಬಂತೆ, ನಮ್ಮ ಬಾಳಲ್ಲೂ ಕತ್ತಲೆ ಹೋಗಿ, ಹೊಸ ಬೆಳಕು ಬರುತ್ತದೆ ಎಂಬ ಸಂಕೇತವಾಗಿ ಈ ಹಬ್ಬವನ್ನುಆಚರಿಸುತ್ತಾರೆ.

ಸಂಕ್ರಾತಿ ಹಬ್ಬ ನಾಡ ಹಬ್ಬವೂ ಹೌದು. ಭಾರತ ದೇಶದೆಲ್ಲೆಡೆ ಈ ಹಬ್ಬವನ್ನು ಮಾಡುತ್ತಾರೆ. ದಕ್ಷಿಣದಲ್ಲಿ ಸಂಕ್ರಾಂತಿ, ಪೊಂಗಲ್ ಎನ್ನುತ್ತಾರೆ, ಉತ್ತರದಲ್ಲಿ ಲೋಹರಿ, ಕಿಚಿರಿ ಎಂದು ಆಚರಿಸುತ್ತಾರೆ. ಇದು ಸುಗ್ಗಿಯ ಹಬ್ಬ. ರೈತರು ತಾವು ಬೆಳೆದ ಬೆಳೆಯನ್ನು ಕೊಯ್ಲು ಮಾಡಿ ಫಸಲು ಸಂಗ್ರಹಿಸಿ ಅದಕ್ಕೆ ಪೂಜೆ ಮಾಡುತ್ತಾರೆ. ದವಸಧಾನ್ಯಗಳ ಸಮೃದ್ಧಿ ಇಂದ ನಮ್ಮ ಜೀವನವೂ ಸಮೃದ್ಧಿಯಾಯಿತು ಎಂದು ಖುಷಿಪಡುವ ಸಮಯ.

ಕನ್ನಡಿಗರೂ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತೀವಿ ಅಲ್ಲವೇ .
ಎಲ್ಲ ಹಬ್ಬಗಳಂತೆ ಈ ದಿನವೂ ಮನೆಯನ್ನು ಸ್ವಚ್ಛ ಮಾಡಿ ಅಲಂಕರಿಸುತ್ತೀವಿ. ಮನೆಯ ಮುಂದೆ ವಿಶೇಷ ರಂಗೋಲಿ ಬರೆಯುತ್ತಾರೆ. ಈ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾ ವಿಧಾನ / ವ್ರತ ಇಲ್ಲ. ಮಂಗಳ ಸ್ನಾನ ಮಾಡಿ ಮನೆಯ ದೇವರಿಗೆ ಪೂಜೆ ಮಾಡುತ್ತಾರೆ.ಈ ಹಬ್ಬದ ವಿಶೇಷತೆ ಎಳ್ಳು ಮತ್ತು ಸಕ್ಕರೆ ಅಚ್ಚು. ಬೆಲ್ಲ , ಕೊಬ್ಬರಿ, ಕಡಲೇಕಾಯಿ ಬೀಜ, ಹುರಿಗಡಲೆ, ಎಳ್ಳು - ಈ ಐದು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿ ತಯಾರಿಸುತ್ತಾರೆ.ಎಳ್ಳ ಸಕ್ಕರೆ ಅಚ್ಚನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಪೂಜೆಯ ನಂತರ ಮನೆಯವರೆಲ್ಲ ತಿನ್ನುವುದು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಂಬ ನುಡಿಯಂತೆ ಎಲ್ಲರೂ ಸಿಹಿಯಾದ, ಒಳ್ಳೆಯ ಮಾತಾಡಿ, ಒಳ್ಳೆ ವಿಷಯಗಳನ್ನು ಯೋಚಿಸಿ, ಒಳ್ಳೆ ಕಾರ್ಯಗಳನ್ನು ಮಾಡಿರಿ.

ಎಳ್ಳು, ಸಕ್ಕರೆ ಅಚ್ಚು , ಕಬ್ಬು, ಹಣ್ಣುಗಳನ್ನು ಬಂಧು - ಬಾಂಧವರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಮದುವೆಯ ನಂತರ ಹೆಣ್ಣು ಮಗಳು ಸುಮಂಗಲಿಯರಿಗೆ ಎಳ್ಳು ಬೀರಿ ಆಶಿರ್ವಾದ ಪಡೆಯುತ್ತಾರೆ . ಮಗು ಹುಟ್ಟಿದ ವರ್ಷ ಎಳ್ಳು ಜೊತೆಗೆ ಬೆಳ್ಳಿ ಕೃಷ್ಣ / ಬೆಳ್ಳಿ ಬಟ್ಟಲು ಬೀರುವ ಪದ್ಧತಿ ಕೆಲವು ಮನೆಗಳಲ್ಲಿವೆ. ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಂಕ್ರಾಂತಿ ದಿನ ಸಂಜೆ ಆರತಿ ಮಾಡುತ್ತಾರೆ. ಊಟಕ್ಕೆ ಸಾಮಾನ್ಯವಾಗಿ ಸಿಹಿ ಮತ್ತು ಖಾರ ಪೊಂಗಲ್ /ಹುಗ್ಗಿ ಮಾಡುತ್ತಾರೆ. ಒಟ್ಟಿನಲ್ಲಿ ಸಂಕ್ರಾತಿಹಬ್ಬ ಅಂದರೆ ಸಡಗರದ ಹಬ್ಬ.

ನಮ್ಮ ಮನೆಯ ಎಳ್ಳು -ಸಕ್ಕರೆ ಅಚ್ಚು

ಪರದೇಶದಲ್ಲಿದ್ದರೆ ಎಳ್ಳು ಸಕ್ಕರೆ ಅಚ್ಚು ಮಾಡುವುದು ಒಂದು ಸಾಹಸವೇ ಸರಿ. ಬೆಂಗಳೂರಿನಲ್ಲಿ ಬಿಸಿಲಿನಲ್ಲಿ ಬೆಲ್ಲ, ಕೊಬ್ಬರಿ ಒಣಗಿಸುತ್ತಾರೆ. ನಾನೀಗಿರುವ ಊರಿನ ಹವಾಮಾನದಲ್ಲಿ ಬರಿ ಚಳಿ ಹಿಮ ತುಂಬಿಹೋಗಿದೆ. ಆದರೂ ಎಳ್ಳು ಮಾಡುವ ಆಸೆ ಇತ್ತು. ಏನು ಮಾಡುವುದು ಎಂದು ಯೋಚಿಸುವಾಗ ತಲೆಗೆ ಹೊಸ ವಿಚಾರ ಹೊಳೆಯಿತು. ಚಳಿಗೆ ಮನೆಯನ್ನು ಬೆಚ್ಚಗೆ ಇಡುವುದಕ್ಕೆ ಇರುವ room/space heater ನನ್ನ ನೆರವಿಗೆ ಬಂತು. ಈ heater ಶಾಖದಿಂದ ಕೊಬ್ಬರಿ, ಬೆಲ್ಲ ಒಣಗಿತು.ಸಕ್ಕರೆ ಅಚ್ಚುಗಳನ್ನು ಸ್ನೇಹಿತೆಯೊಬ್ಬರ ಸಲಹೆಯಂತೆ candy molds ಉಪಯೋಗಿಸಿ ಮಾಡಿದ್ದಾಯಿತು. ನನ್ನಎಳ್ಳು ಸಕ್ಕರೆ ಅಚ್ಚು ಅಂತೂ ತಯಾರಾಯಿತು:)


ಈ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರಿಗೂ ಸಂತಸ ಸಮ್ರುಧ್ಧಿ ತರಲಿ:)
Blog Widget by LinkWithin