Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

July 28, 2008

Bheemana Amavasya / Jyothir Bheemeshwara Vrata / ಭೀಮನ ಅಮಾವಾಸ್ಯೆ / ಭೀಮನ ಅಮಾವಾಸ್ಯ ಹಬ್ಬ / ಶ್ರೀ ಜ್ಯೋತಿರ್ಭೀಮೇಶ್ವರ ವ್ರತ

ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ / ಗಂಡನ ಪೂಜೆ ಅಂತ ಕರೆಯುತ್ತಾರೆ. ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಆಚರಿಸಬೇಕು. ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು .ಗಣಪತಿ ಅಷ್ಟೋತ್ತರ ಇಲ್ಲಿದೆ. ಶಿವ ಅಷ್ಟೋತ್ತರ ಇಲ್ಲಿದೆ. ನೈವೇದ್ಯಕ್ಕೆ 9 ಕರಿಗಡುಬು ಮಾಡಿಕೊಳ್ಳಬೇಕು.
ನಮ್ಮ ಮನೆಯಲ್ಲಿ ಜ್ಯೋತಿರ್ಭೀಮೇಶ್ವರನ ಪೂಜೆ

ಈ ಹಬ್ಬದ ಇನ್ನೊಂದು ವಿಶೇಷತೆ ಭಂಡಾರ . (ಭಂಡಾರ ಅಂದರೆ ನಿಧಿ, ಸಂಪತ್ತು, ಐಶ್ವರ್ಯ ಎಂದರ್ಥ) ಈ ಭಂಡಾರವನ್ನು ಕರಿಗಡುಬು (ಮೈದಾ)ಹಿಟ್ಟಿನಿಂದ ಕೆಳಗೆ ಚಿತ್ರದಲ್ಲಿ ಇರುವಂತೆ ಮಾಡಿಕೊಳ್ಳಬಹುದು. ಮಾಡುವಾಗ ಇದರೊಳಗೆ ದುಡ್ಡು/ನಾಣ್ಯವನ್ನು ಇಡಬೇಕು. ಇದನ್ನು ಹೊಸ್ತಿಲ ಮೇಲೆ ಇಟ್ಟು ಪೂಜೆ ಮಾಡಬೇಕು. ಅಣ್ಣ /ತಮ್ಮ ಇದನ್ನು ಒಡೆಯುತ್ತಾರೆ . ಅವರಿಗೆ ಆರತಿ ಮಾಡಿ, ಒಳಗೆ ಇರುವ ದುಡ್ಡಿನ ಜೊತೆಗೆ ಉಡುಗೊರೆ ಕೊಡಬೇಕು.

ಭಂಡಾರ


ಭೀಮನ ಅಮಾವಾಸ್ಯೆ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Bheemana Amavasya Vrata + Kathe Audio Link


ಕ್ರಮವಾಗಿ ಪೂಜೆ ಮಾಡಿ ನಂತರ ವ್ರತ ಕಥಾ ಶ್ರವಣ ಮಾಡಬೇಕು. ವ್ರತ ಕಥಾ ಸಾರಾಂಶ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


Shiva Stotras

Devotional Songs on Shiva

ಜ್ಯೋತಿರ್ಭೀಮೇಶ್ವರನು ಎಲ್ಲರಿಗೂ ಸೌಭಾಗ್ಯ, ಸುಖ ಸಂತೋಷಗಳನ್ನು ಅನುಗ್ರಹಿಸಲಿ :)

July 23, 2008

Shiva Ashtottara in Kannada / ಶ್ರೀ ಶಿವ ಅಷ್ಟೋತ್ತರ

ಶ್ರೀ ಶಿವ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




Audio Link for Shiva Ashtotharam

1.Audio Link by Thyagarajan R [song 2]

2.Audio Link by TS Ranganathan [song 6]

3.Audio Link by another artist

Related Link:

July 17, 2008

16 Steps of Pooja / ಪೂಜಾ ವಿಧಾನ

ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :)

July 15, 2008

Pooja Items / Accessories / ಪೂಜಾ ಸಾಮಾಗ್ರಿ

ಪೂಜೆ ಶುರು ಮಾಡುವ ಮುನ್ನ , ಅಲಂಕಾರ, ಅಣಿ ಮಾಡಿಕೊಳ್ಳಕ್ಕೆ ಸುಮಾರು ಹೊತ್ತು ಆಗುತ್ತೆ. ಪೂಜೆ ಅಂದರೆ ಎಷ್ಟೊಂದು ಸಾಮಗ್ರಿ ಉಪಯೋಗಿಸುತ್ತೀವಿ , ಪೂಜೆ ಮಾಡೋ ಸಡಗರದಲ್ಲಿ ಕೆಲವೊಮ್ಮೆ ಒಂದೆರಡು ಸಾಮಾನು ಮರೆಯುವ ಸಾಧ್ಯತೆಗಳು ಇದೆ :) ಹೀಗೆ ಆಗದೆ ಇರಲಿ ಅಂತ ಪೂಜಾ ಸಾಮಾನುಗಳ ಒಂದು ಪಟ್ಟಿಯನ್ನು ಮಾಡಿದ್ದೀನಿ.

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:

  • ರಂಗೋಲಿ, ಮಣೆ / ಮಂಟಪ
  • ದೇವರ ವಿಗ್ರಹ, ದೇವರ ಪಟ
  • ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ
  • ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
  • ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ.
  • ಅರಿಶಿನ, ಕುಂಕುಮ, ಮಂತ್ರಾಕ್ಷತೆ
  • ಶ್ರೀಗಂಧ, ಊದಿನ ಕಡ್ಡಿ
  • ಹೂವು, ಪತ್ರೆ, ಗೆಜ್ಜೆ ವಸ್ತ್ರ
  • ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
  • ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ
  • ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ
  • ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ
  • ಆರತಿ ತಟ್ಟೆ, ಸೊಡಲು, ಹೂಬತ್ತಿ,

ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ :

  • ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ
  • ಮರದ ಜೊತೆ / ಬಾಗಿನ
  • ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ
  • ಸೋಬಲಕ್ಕಿ, ಉಪಾಯನ ದಾನ
  • ನವಗ್ರಹ ಮಂಡಲ ......ಇತ್ಯಾದಿ

ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.

Related Links:

Navagraha Dhanya

Marada jothe Baagina

July 13, 2008

Vinayaka Ashtottara in Kannada / ವಿನಾಯಕ ಅಷ್ಟೋತ್ತರ

ಯಾವಾಗಲು ವಿನಾಯಕನಿಗೆ ಮೊದಲು ಪೂಜೆ. ಎಲ್ಲ ವಿಘ್ನಗಳನ್ನು ತೊಡೆದು ಹಾಕಿ ನಮ್ಮ ಕಾರ್ಯವನ್ನು ಸಿಧ್ಧಿ ಮಾಡು ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುತ್ತೇವೆ. ಕೆಳಗೆ ಗಣೇಶ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ

Ganesha Ashtottara ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು :


Audio Link by Prakash Rao

Blog Widget by LinkWithin