Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

March 31, 2009

Rama Ashtottara in Kannada / ಶ್ರೀ ರಾಮ ಅಷ್ಟೋತ್ತರ

ರಾಮ ನವಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ರಾಮ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಅಷ್ಟೊತ್ತರದ ಧ್ವನಿ ಮುದ್ರಣ ಕೆಳಗಿದೆ.

1. Audio link by Shiva kumar


2. Audio Link by Hari Achuta Shastry


3. Audio link by N.S.Prakash Rao

Related Link:

March 25, 2009

Ugadi 2009, Hindu Almanac / Panchanga / ಯುಗಾದಿ ಹಬ್ಬ , ಹಿಂದೂ ಪಂಚಾಂಗದ ವಿವರ


ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಯುಗಾದಿ ಹಬ್ಬ 27 March 2009 ದಿನ ಬಂದಿದೆ.ಹೋದ ವರ್ಷ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಈ ವರ್ಷ ಹಿಂದೂ ಪಂಚಾಂಗ ಬಗ್ಗೆ ಸ್ವಲ್ಪ ವಿವರ ಬರೆಯೋಣ ಅಂತ ಅನ್ನಿಸಿತು.
ಯುಗಾದಿ
ಹಬ್ಬ ಅಂದರೆ ಹೊಸ ವರ್ಷದ ಪಂಚಾಂಗ ನೆನಪಾಗುತ್ತದೆ. ಹಬ್ಬ ಹರಿದಿನ, ಪೂಜೆ, ವ್ರತ, ಗ್ರಹಣ, ಮುಹೂರ್ತಗಳು ಇವುಗಳ ವಿವರ ಪಂಚಂಗದಲ್ಲಿದೆ. ಕನ್ನಡಿಗರು ಅನುಸರಿಸುವುದು ಚಂದ್ರಮಾನ ಪಂಚಾಂಗ. ಇದರಲ್ಲಿ ಚಂದ್ರನ ಚಲನೆಯನ್ನು ಆಧರಿಸಿ ದಿನ, ಪಕ್ಷ, ಮಾಸ, ವರ್ಷವನ್ನು ಲೆಕ್ಕಹಾಕುತ್ತಾರೆ. 1 ವರ್ಷಕ್ಕೆ ಸಂವತ್ಸರವೆನ್ನುತ್ತಾರೆ. ಒಟ್ಟು 60 ಸಂವತ್ಸರ ಇದೆ.
ಅವುಗಳ ಹೆಸರು ಕೆಳಗಿನ ಚಿತ್ರದಲ್ಲಿದೆ.


1 ಸಂವತ್ಸರದಲ್ಲಿ 12 ಮಾಸ ಇದೆ. 6 ಋತುಗಳು ಇದೆ. ಒಂದು ತುವಿನ ಅವಧಿ 2 ಮಾಸಗಳು. ಒಂದು ಮಾಸದಲ್ಲಿ 2 ಪಕ್ಷ ಇದೆ. ಒಂದು ಪಕ್ಷದಲ್ಲಿ 15 ತಿಥಿಗಳಿವೆ. ಒಂದು ಮಾಸದಲ್ಲಿ ಒಟ್ಟು 30 ತಿಥಿಗಳು. ಮೊದಲು 15 ತಿಥಿಗಳಿಗೆ (ಪಾಡ್ಯದಿಂದ ಪೂರ್ಣಿಮಾ ವರೆಗೆ) ಶುಕ್ಲ ಪಕ್ಷ ಅಂತ ಹೆಸರು , ಮುಂದಿನ ೧೫ ತಿಥಿಗಳಿಗೆ (ಪಾಡ್ಯದಿಂದ ಅಮಾವಾಸ್ಯೆ ವರಗೆ) ಕೃಷ್ಣ ಪಕ್ಷ ಅಂತ ಹೆಸರು.





ಮಾಸಗಳು - 12ಋತುಗಳು - 6
1.
ಚೈತ್ರ
2.
ವೈಶಾಖ
ವಸಂತ ಋತು
3.
ಜ್ಯೇಷ್ಠ
4.
ಆಷಾಢ
ಗ್ರೀಷ್ಮ ಋತು
5.
ಶ್ರಾವಣ
6.
ಭಾದ್ರಪದ
ವರ್ಷ ಋತು
7.
ಆಶ್ವಯುಜ
8.
ಕಾರ್ತಿಕ
ಶರದ್ ಋತು
9.
ಮಾರ್ಗಶಿರ
10.
ಪುಷ್ಯ
ಹಿಮಂತ ಋತು
11.
ಮಾಘ
12.
ಫಾಲ್ಗುಣ
ಶಿಶಿರ ಋತು


ಪಂಚಾಂಗ ಅಂದರೆ 5 ಅಂಗಗಳು - ತಿಥಿ, ವಾರ, ನಕ್ಷತ್ರ, ಯೋಗ, ಕರಣ. ತಿಥಿಗಳು - 30, ವಾರಗಳು - 7, ನಕ್ಷತ್ರಗಳು - 27, ಯೋಗಗಳು - 27, ಕಾರಣಗಳು -11. ಇವುಗಳು ಹೆಸರುಗಳು ಕೆಳಗಿದೆ.ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




ನಮ್ಮ
ಮನೆಯಲ್ಲಿ ಒಂಟಿಕೊಪ್ಪಲ್ ಪಂಚಾಂಗವನ್ನು ಅನುಸರಿಸುತ್ತೀವಿ. ಈಗ ಅಮೆರಿಕದಲ್ಲಿ ಇರುವವರಿಗೆ ಸಹಾಯವಾಗುವಂತೆ "America Samyukta Samsthanada Panchanga"(NRI Vontikoppal Panchanga) ಅನ್ನು ಪ್ರಕಟಿಸುತ್ತಾರೆ. ಇದರಲ್ಲಿ ಅಮೇರಿಕಾದ latitudes & longitudes ಪ್ರಕಾರ ಲೆಕ್ಕಾಚಾರ ಮಾಡಿ ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದಿದ್ದಾರೆ. ನನ್ನಂತಹ ಅನಿವಾಸಿ ಕನ್ನಡಿಗರಿಗೆ ಇದು ಬಹಳ ಅನುಕೂಲಕರವಾಗಿದೆ. thatskannada ದಲ್ಲಿ NRI panchanga ದ ಬಗ್ಗೆ ಮಾಹಿತಿ ಇದೆ. ಅಮೇರಿಕಾದಲ್ಲಿ ಪಂಚಾಂಗ ಬೇಕೆನ್ನುವವರು Krishna Sastry, Iowa, USA - ಇವರನ್ನು ಸಂಪರ್ಕಿಸಿ ಅಂತ ಬರೆದಿದ್ದಾರೆ. ಇದು 2003 ರಲ್ಲಿ ಹಾಕಿರುವ ಮಾಹಿತಿ, ಸಧ್ಯದ ಸಮಾಚಾರ ಗೊತ್ತಿಲ್ಲ. check this thatskannada link for contact details. ನಾನು ಇವರನ್ನು ಸಂಪರ್ಕಿಸಿಲ್ಲ, ನಾನು ಪಂಚಾಂಗವನ್ನು ಬೆಂಗಳೂರಿನಿಂದಲೇ ತರಿಸಿಕೊಳ್ಳುತ್ತಿದ್ದೀನಿ. ನಿಮಗೆ ಪಂಚಾಂಗ ಸಿಗದೇ ಇದ್ದರೆ, ನನ್ನ ಬ್ಲಾಗಿಗೆ ಬನ್ನಿ ಯಾವ ಹಬ್ಬ ಯಾವತ್ತು ಇದೆ ಅಂತ ನಾನು ಇಲ್ಲಿ ಹಾಕುತ್ತೀನಿ :)


ಈ ಹೊಸ ವರ್ಷ ನಿಮ್ಮೆಲ್ಲರಿಗೆ ಸಂತಸ ತರಲಿ ಅಂತ ಆಶಿಸುತ್ತೀನಿ:)




Related Link:

March 17, 2009

Sri Rama Raksha Stotra in Kannada / ಶ್ರೀ ರಾಮ ರಕ್ಷಾ ಸ್ತೋತ್ರ

ಶ್ರೀ ರಾಮ ರಕ್ಷಾ ಸ್ತೋತ್ರ - ಹೆಸರೇ ಹೇಳುವಂತೆ ಇದು ಶ್ರೀ ರಾಮನನ್ನು ನಮ್ಮ ರಕ್ಷಣೆಗಾಗಿ ಬೇಡುವ ಸ್ತೋತ್ರ. ಬುಧ ಕೌಶಿಕ ಎಂಬ ಋಷಿ ಇದನ್ನು ರಚಿಸಿದ್ದಾರೆ. ಇದರ ಸಾಲುಗಳಲ್ಲಿ ದೇಹದ ಭಾಗಗಳನ್ನು ಹೆಸರಿಸುತ್ತಾ ಹೋಗುತ್ತದೆ. ಶಿರಃ = ತಲೆ, ಕರೌ =ಕೈಗಳು, ಕಟಿ = ಸೊಂಟ , ನಾಭಿಂ = ಹೊಕ್ಕಳು ,ಜಾನುನಿ = ಮಂಡಿ ,ಪಾದೌ = ಪಾದಗಳು, ಇತ್ಯಾದಿ ಹೀಗೆ ದೇಹದ ಅಂಗಾಂಗಗಳನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡುತ್ತೀವಿ. ಶ್ರೀ ರಾಮ ರಕ್ಷಾ ಸ್ತೋತ್ರವು ರಕ್ಷಾ ಕವಚದಂತೆ ನಮ್ಮ ದೇಹ ಮತ್ತು ಮನಸ್ಸು ಎರಡನ್ನು ಭಾದೆ, ದುಷ್ಟ ಶಕ್ತಿ, ಕೆಡಕುಗಳಿಂದ ಕಾಪಾಡುತ್ತದೆ. ಸ್ತೋತ್ರ ಪಠಣದಿಂದ ಸುಖ, ಸಮೃದ್ಧಿ, ಆರೋಗ್ಯ, ಮುಕ್ತಿ ಎಲ್ಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :

1.AudioLink - by Ananth Kulkarni

2.AudioLink - by Suresh Wadkar below




3.AudioLink - by Anuradha Paudwal below


ಶ್ರೀ ರಾಮನು ಎಲ್ಲರನ್ನು ಕಾಪಾಡಲಿ :)

Related Link:

March 9, 2009

Navagraha Stotram in Kannada / ನವಗ್ರಹ ಸ್ತೋತ್ರ

ನವಗ್ರಹ ಸ್ತೋತ್ರ - 1


ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ


ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ನವಗ್ರಹ ಸ್ತೋತ್ರ - 2

ನವಗ್ರಹಗಳ ಇನ್ನೊಂದು ಸ್ತೋತ್ರ ಇದು. ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ನವಗ್ರಹ ಸ್ತೋತ್ರದ ಧ್ವನಿಮುದ್ರಣ ಇಲ್ಲಿದೆ:


1.AudioLink - P.B.Sreenivas ಹಾಡಿದ್ದಾರೆ (Song 9)


2.AudioLink - Trichur Ramachandran ಹಾಡಿದ್ದಾರೆ


3.AudioLink - Vedavalli ಹಾಡಿದ್ದಾರೆ

March 2, 2009

Mahishasura Mardini Stotra in Kannada / ಶ್ರೀ ಮಹಿಷಾಸುರ ಮರ್ದಿನಿ ಸ್ತೋತ್ರ

ದೇವಿ ಸ್ತೋತ್ರಗಳಲ್ಲಿ ಮಹಿಷಾಸುರ ಮರ್ದಿನೀ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರ ಮರ್ದಿನೀ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಹಿಷಾಸುರ ಮರ್ದಿನಿ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿದೆ:

1.AudioLink -
Bombay Sisters ಅವರ ಧ್ವನಿಯಲ್ಲಿ ಕೇಳಿ.

2.AudioLink - Chithra ಅವರ ಧ್ವನಿಯಲ್ಲಿ ಕೇಳಿ.

3.AudioLink by Balaji Tambe

Blog Widget by LinkWithin