ನವಗ್ರಹ ಧಾನ್ಯಗಳನ್ನು ನವಗ್ರಹ ಹೋಮ/ಶಾಂತಿ , ಸತ್ಯನಾರಾಯಣ ಪೂಜೆಗಳಲ್ಲಿ ಉಪಯೋಗಿಸುತ್ತಾರೆ. ಕೆಳಗೆ ನವ ಧಾನ್ಯಗಳ ಹೆಸರು, ಯಾವ ಗ್ರಹಕ್ಕೆ ಯಾವ ಧಾನ್ಯ, ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಎಂಬ ವಿವರಗಳಿವೆ. ದೊಡ್ಡದಾಗಿಮಾಡಲುಚಿತ್ರದಮೇಲೆಕ್ಲಿಕ್ಮಾಡಿ.
ಇಂದು ಕನಕದಾಸರ ಜಯಂತಿ. ಕನಕದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.
ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆಆದಿಕೇಶವ ಎಂಬಅಂಕಿತವನ್ನು ತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.
ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.
ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.
ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ಸಾಮನ್ಯವಾಗಿ ಉಪಯೋಗಿಸುವ ಪೂಜಾಸಾಮಗ್ರಿಗಳಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ.ತುಳಸಿ ಅಷ್ಟೋತ್ತರ ಕೆಳಗಿದೆ ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ
ತುಳಸಿ ನಮಾಷ್ಟಕಂ - deezer link is no longer available
Songs on Tulasi:1. Kalyanam Tulasi Kalyanam2. Brundavanave Mandiravaagihaನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ. ಇದರೊಂದಿಗೆ ತುಳಸೀ ಗಿಡಕ್ಕೆ ಔಷಧೀಯ ಗುಣಗಳೂಇದೆ. ಕೆಮ್ಮು ನೆಗಡಿಗೆ , ಚರ್ಮ ವ್ಯಾಧಿಗಳಿಗೆ ಮನೆ ಮದ್ದು ಈ ತುಳಸೀ. ನೆಲ್ಲಿಕಾಯಿ ಕೂಡ ಔಷಧೀಯ ಗುಣ ಹೊಂದಿದೆ. ಇದು ವಾತ ಪಿತ್ತಗಳನ್ನು ಶಮನ ಮಾಡುತ್ತದೆ ಎಂದು ಹೇಳಿತ್ತಾರೆ. ಹಬ್ಬ ಆದ ನಂತರ ನಮ್ಮ ಮನೆಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮೊರಬ್ಬ ಮಾಡುತ್ತಾರೆ. ಉಪ್ಪಿನಕಾಯಿ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಾ ಇದೆ :)
Please don't steal any content from my blog. Thankyou.
******************************
visitor counter
NOTICE: Pooja Vidhana Sahitya
A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.