ನಾವು ಮಾಡುವ ಪೂಜೆ, ವ್ರತಗಳಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುತ್ತಾರೆ.ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:- 1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ
- ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ
- ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು
- ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ
- ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ
ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ ಕಡ್ಡಿ, ಇತ್ಯಾದಿ ಇಡುತ್ತಾರೆ. ಸ್ವರ್ಣ ಗೌರಿ ವ್ರತ, ಮಂಗಳ ಗೌರಿ ವ್ರತ, ಮಾರ್ಗಶಿರಮಹಾಲಕ್ಷ್ಮಿ ವ್ರತ, ಸಿರಿಯಾಳ ಷಷ್ಠಿ ಮುಂತಾದ ಪೂಜೆಗಳಲ್ಲಿ ಬಾಗಿನ ಕೊಡುತ್ತಾರೆ. ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.

ನಮ್ಮ ಮನೆ ಮೊರದ ಜೊತೆ ಬಾಗಿನ
ಸಾಮಾನ್ಯವಾಗಿ ಎಲ್ಲ ಸಾಮಾನುಗಳನ್ನೂ ದೊಡ್ಡ ಮೊರದ ಒಳಗೆ ಇಟ್ಟು ಕೊಡುತ್ತಾರೆ. ಪರದೇಶದಲ್ಲಿರುವ ನಮ್ಮಂತವರಿಗೆ "NRI mara" ಅಂತ ಚಿಕ್ಕ ಮೊರಗಳು ಬೆಂಗಳೂರಿನಲ್ಲಿ ಸಿಗುತ್ತದೆ. ನಾನೂ ಇಂತಹದನ್ನೆ ಉಪಯೂಗಿಸಿದ್ದೀನಿ. ಈ ಚಿಕ್ಕಮೊರದಲ್ಲಿ ಎಲ್ಲ ಸಾಮಾನು ಹಿಡಿಸುವುದಿಲ್ಲ . ಹೀಗಾಗಿ ಒಂದು ದೊಡ್ಡ ಡಬ್ಬಿ ಯಲ್ಲಿ ಎಲ್ಲ ಸಾಮಾನು ಇಟ್ಟು ಬಾಗಿನ ಕೊಟ್ಟಿದ್ದಾಯಿತು:)