ಹಿಂದೂಗಳು, ಅದರಲ್ಲೂ ದಕ್ಷಿಣ ಭಾರತದವರ ಮನೆಯಗಳಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಒಂದು ಇಂಪಾದ ಹಾಡು ಕೇಳಿ ಬರುತ್ತೆ. ಯಾವ ಹಾಡೆಂದು ಊಹಿಸಬಲ್ಲಿರಾ? ಇನ್ನೊಂದು ಹಿಂಟ್ ಅದು M.S. Subbalakshmi ಅವರ ಧ್ವನಿಯಲ್ಲಿದೆ. ಈಗ ನಿಮಗೆ ಯಾವ ಹಾಡು ಅಂತ ಗೊತ್ತಾಗಿರಲೇ ಬೇಕು. ಹೌದು ಅದು ಶ್ರೀ ವೆಂಕಟೇಶ್ವರ ಸುಪ್ರಭಾತ. ಸು -ಪ್ರಭಾತ ಅಂದರೆ ಸುಂದರವಾದ, ಮಂಗಳವಾದ - ಪ್ರಾತಃ ಕಾಲ. ಈ ಸುಪ್ರಭಾತ ಹಾಡಿ ಶ್ರೀ ವೆಂಕಟೇಶ್ವರನನ್ನು ನಿದ್ದೆ ಇಂದ ಎಚ್ಚರ ಮಾಡಿಸುತ್ತಾರೆ. ಈ ಸ್ತೋತ್ರವನ್ನು 1430 ನೇ ಇಸವಿಯಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣನ್ ಸ್ವಾಮೀ ಅವರು ರಚಿಸಿದ್ದಾರೆ. ಸುಪ್ರಭಾತ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
1. Meaning of Venkatesha Suprabhatam
2.Audio Link by M.S. Subbalakshmi below
October 23, 2009
October 16, 2009
Naraka Chaturdashi, Deepavali Lakshmi Pooja, Balipadyami Festival / ದೀಪಾವಳಿ ಹಬ್ಬ
(Diwali greeting source: shubhashaya.com)
Lakshmi Stotras: ಸ್ನೇಹಿತರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು :)
ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀಪಾವಳಿ ಅಂದರೆ ೩-೪ ದಿನದ ಹಬ್ಬ.
ನರಕ ಚತುರ್ದಶಿ ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ. ಈ ದಿನ ವಿಶೇಷವಾದ ಪೂಜೆ ಅಂತೇನು ಇಲ್ಲ. ಪ್ರತಿದಿನದಂತೆ ದೇವರ ಪೂಜೆ ಅಷ್ಟೆ.
Amavasya Lakshmi Pooje:
ಮಾರನೆಯ ದಿನ ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿನ ಮಾಡುತಾರೆ. ಈ ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ಇದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ. ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ.ನಮ್ಮ ಮನೆಯಲ್ಲಿ ಮಾಡಿದ ಪೂಜೆಯ ಚಿತ್ರ ಕೆಳಗಿದೆ.
- ತ್ರಯೋದಶಿ ದಿನ - ನೀರು ತುಂಬುವ ಹಬ್ಬ
- ಚತುರ್ದಶಿ ದಿನ - ನರಕ ಚತುರ್ದಶಿ
- ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ
- ಪಾಡ್ಯ ದಿನ - ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ
ನರಕ ಚತುರ್ದಶಿ ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ. ಈ ದಿನ ವಿಶೇಷವಾದ ಪೂಜೆ ಅಂತೇನು ಇಲ್ಲ. ಪ್ರತಿದಿನದಂತೆ ದೇವರ ಪೂಜೆ ಅಷ್ಟೆ.
Amavasya Lakshmi Pooje:
ಮಾರನೆಯ ದಿನ ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿನ ಮಾಡುತಾರೆ. ಈ ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ಇದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ. ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ.ನಮ್ಮ ಮನೆಯಲ್ಲಿ ಮಾಡಿದ ಪೂಜೆಯ ಚಿತ್ರ ಕೆಳಗಿದೆ.
1. Mahalakshmi Ashtaka
2.Lakshmi Ashtottara
3.Ashtalakshmi Stotra
4.Kanakadhara Stotra
5. Lakshmi aarti song
6. Songs on Lakshmi with lyrics
ಅಮಾವಾಸ್ಯೆ ಮಾರನೆಯ ದಿನ ಕಾರ್ತಿಕ ಮಾಸದ ಪಾಡ್ಯ/ಪ್ರತಿಪತ್ . ಈ ದಿನ ಬಲಿ ಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.
ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ :) ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಆಶಿಸುತ್ತೇನೆ :)
Labels:
:Lakshmi,
Diwali/Deepavali,
Festival,
mat
October 13, 2009
Ashtalakshmi Stotra in Kannada / ಅಷ್ಟಲಕ್ಷ್ಮೀ ಸ್ತೋತ್ರ
ದೀಪಾವಳಿ ಹಬ್ಬ ಹತ್ತಿರ ಬರುತ್ತಾ ಇದೆ. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಇದೆ. ಈ ಸಂಧರ್ಭಕ್ಕೆ ಸರಿಯಾಗಿ ಅಷ್ಟಲಕ್ಷ್ಮಿ ಸ್ತೋತ್ರವನ್ನು ಬರೆಯುತ್ತಿದ್ದೇನೆ. ಲಕ್ಷ್ಮಿ ಎಂದರೆ ಬರಿ ಹಣ ಕಾಸು ಮಾತ್ರವಲ್ಲ, ಧಾನ್ಯ, ಧೈರ್ಯ, ವಿದ್ಯಾ, ಸಂತಾನ, ಇವೆಲ್ಲವೂ ನಿಧಿಗೆ ಸಮಾನ. ಅಂತಯೇ ಇವೆಲ್ಲವನ್ನೂ ಕರುಣಿಸು ಎಂದು ಲಕ್ಷ್ಮಿಯ ಎಂಟು ರೂಪಗಳನ್ನು ಈ ಸ್ತೋತ್ರದಲ್ಲಿ ಪ್ರಾರ್ಥಿಸುತ್ತೇವೆ. ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.
1. Audio Link by Meera Krishna ,(Album Link)
2. Audio Link by Shweta Pandit
3. Audio Link by Sowmya (song 8)
1. Audio Link by Meera Krishna ,(Album Link)
2. Audio Link by Shweta Pandit
3. Audio Link by Sowmya (song 8)
October 4, 2009
Thank you all / ಪೂಜಾ ವಿಧಾನ ಸಂದರ್ಶಿಸಿದವರಿಗೆಲ್ಲ ನನ್ನ ಧನ್ಯವಾದಗಳು
ಕಳೆದ 2-3 ವಾರಗಳು ನನಗೆ ಬಿಡುವಿರಲಿಲ್ಲ. ಇತರೆ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೆ. ಹೀಗಾಗಿ ಬ್ಲಾಗ್ ಕಡೆ ಗಮನ ಕೊಡಲಾಗಲಿಲ್ಲ.
ಕಳೆದ ೧ ತಿಂಗಳು ಅಂದರೆ ಗೌರಿ ಗಣೇಶ ಹಬ್ಬದಿಂದ ಹಿಡಿದು ನವರಾತ್ರಿ ಹಬ್ಬದ ಸಮಯದಲ್ಲಿ ಪೂಜಾ ವಿಧಾನವನ್ನು ಸಾವಿರಾರು ಜನ ಸಂದರ್ಶಿಸಿದ್ದಾರೆ. ಬ್ಲಾಗಿನ ಅಂಕಿ ಅಂಶಗಳನ್ನು ನೋಡಿದಾಗ ನನಗೆ ವಿಸ್ಮಯ ಹಾಗು ಸಂತೋಷ ಎರಡೂ ಆಯಿತು. ಈ ಒಂದು ತಿಂಗಳಲ್ಲಿ ಸುಮಾರು ೧೦೦೦೦ ಹಿಟ್ಸ್ ಬಂದಿದೆ. ಅದರಲ್ಲಿ ಸುಮಾರು ೪೦೦೦ ಜನ ಹೊಸದಾಗಿ ಇಲ್ಲಿಗೆ ಭೇಟಿ ಮಾಡಿದ್ದರೆ!!! (10000 hits, 4000 unique hits) ಇದನ್ನು ನೋಡಿ ನನಗೆ ತುಂಬ ಖುಷಿ ಆಗುತ್ತಾ ಇದೆ. ಅದರಲ್ಲಿ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯಕ್ಕೆ ಪ್ರತ್ಯೇಕವಾಗಿ ಉತ್ತರಿಸಲು ಆಗಲಿಲ್ಲಾ ಕ್ಷಮಿಸಿ.
ಪೂಜಾ ವಿಧಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!! ತಮ್ಮ ಅಭಿಪ್ರಾಯಗಳನ್ನು ನೀಡಿರುವ ಎಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು !!!
ನಿಮ್ಮ ಅಭಿಪ್ರಾಯಗಳಿಂದ ನನಗೆ ಬರೆಯಲು ಇನ್ನಷ್ಟು ಸ್ಫೂರ್ತಿ, ಪ್ರೇರಣೆ ಬಂದಿದೆ. ನಿಮ್ಮೆಲ್ಲರ ಸಹಕಾರದಿಂದಲೇ ಪೂಜಾ ವಿಧಾನ ಇಷ್ಟು ಯಶಸ್ವಿಯಾಗಿದೆ. ಇದೆ ರೀತಿ ಮುಂದೆಯೂ ನಿಮ್ಮ ಸಹಕಾರ ಸುಗುತ್ತದೆ ಅಂತ ಆಶಿಸುತ್ತೀನಿ :)
ಇಲ್ಲಿಗೆ ಮತ್ತೆ ಬನ್ನಿ , ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಎಲ್ಲರಿಗೂ ನನ್ನ ವಂದನೆಗಳು :)
PS: If you have any requests or suggestions, please leave a comment in the blog or email me or contact me here. I will try my best to respond to it asap:)
Subscribe to:
Posts (Atom)