ಕಳೆದ ೨-೩ ತಿಂಗಳು ನಾನು ತುಂಬಾ ಬ್ಯುಸಿಯಾಗಿದ್ದೆ. ಹೀಗಾಗಿ ಇಲ್ಲಿ ಅಷ್ಟೊಂದು ಚಟುವಟಿಕೆ ಇರಲಿಲ್ಲ. ಈ ಹೊಸ ವರುಷದಲ್ಲಿ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರೀತಿ, ಸಹಕಾರಕ್ಕೆ ಧನ್ಯವಾದಗಳು.
ಈ ದಿನ ದತ್ತ ಜಯಂತಿ. ದತ್ತಾತ್ರೇಯರ ಜೀವನ, ಮಹಿಮೆಗಳನ್ನು ಗುರು ಚರಿತ್ರೆ ಪುಸ್ತಕವು 52 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವಿವರಿಸುತ್ತದೆ. ಅಷ್ಟೊಂದು ದೊಡ್ಡ ಪುಸ್ತಕವನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಹಾಗೂ ಅದನ್ನು ಓದಲು ವಾರಗಳು,ತಿಂಗಳುಗಳು ಬೇಕು. ನನ್ನ ಬಳಿ ಗುರುಚರಿತ್ರೆಯ ಸಾರಾಂಶವನ್ನು ಹೇಳುವ ಒಂದು ಚಿಕ್ಕ ಹಾಡು ಇದೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೀನಿ. ಇದು ಚಿಕ್ಕದಾಗಿದ್ದು, ಹೇಳಲು ಕೆಲವೇ ನಿಮಿಷಗಳು ಸಾಕು. ಈ ಸಂಕ್ಷಿಪ್ತ ಗುರುಚರಿತ್ರೆಯನ್ನು ಈ ದಿನ ಹೇಳಿ, ಗುರುಗಳ ಅನುಗ್ರಹಕ್ಕೆ ನಾವೆಲ್ಲ ಪಾತ್ರರಾಗೋಣ.
ಕೆಳಗೆ ಗುರುಚರಿತ್ರೆ ಹಾಡು ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.