ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಮುಂಜಾನೆ ಎದ್ದು ದೇವರ ಪ್ರಾರ್ಥನೆ ಮಾಡುವುದು ಸಾಮಾನ್ಯವಾದ ಅಭ್ಯಾಸ. ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡಲೆಂದೇ ಶಂಕರಾಚಾರ್ಯರು ಹಲವು ದೇವರ ಪ್ರಾತಃ ಸ್ಮರಣ ಸ್ತೋತ್ರವನ್ನು ರಚಿಸಿದ್ದಾರೆ. ಮುಂದಿನ ಹಲವು ದಿನಗಳಲ್ಲಿ ಎಲ್ಲ ಸ್ತೋತ್ರಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ಕೆಳಗೆ ಗಣೇಶ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ನಮ್ಮೆಲರಿಗೂ ಹಿಂದೂ ಧರ್ಮದ ಬಗ್ಗೆ ಬಹಳ ಗೌರವ, ಅಭಿಮಾನ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಗ್ಗೆ ನಮ್ಮ ಮಕ್ಕಳಿಗೂ ಆಸಕ್ತಿ, ಅಭಿರುಚಿ ಹುಟ್ಟಿ, ಅವರೂ ಈ ಸಂಪ್ರದಾಯಗಳನ್ನು ಮುಂದುವರೆಸಲಿ ಎಂದು ಎಲ್ಲ ತಂದೆ ತಾಯಿಯರಿಗೂ ಆಸೆ ಇರುವುದು ಸಹಜ. ಮಕ್ಕಳು ಸಹಜವಾಗಿ ಕುತೂಹಲದಿಂದ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ, ಯಾವುದೇ ಮಾಹಿತಿಯನ್ನು ಬೇಗ ಗ್ರಹಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಪಾಠ, ವಿದ್ಯೆ ಜೊತೆಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆಯೂ ಅವರಿಗೆ ತಿಳುವಳಿಕೆ ಕೊಡುವುದು ಉಚಿತ ಎಂದು ಅನಿಸುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದಂತೆ ಅನೇಕ ಚಿಕ್ಕ ಸ್ತೋತ್ರ,ಶ್ಲೋಕಗಳು ಇವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಶ್ಲೋಕಗಳ ಪಟ್ಟಿಯನ್ನು ಕೆಳಗೆ ಮಾಡಿದ್ದೀನಿ.ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.