Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

November 26, 2008

Navagraha Dhanya & Mandala / ನವಗ್ರಹ ಧಾನ್ಯಗಳು +ಮಂಡಲ

ನವಗ್ರಹ ಧಾನ್ಯಗಳನ್ನು ನವಗ್ರಹ ಹೋಮ/ಶಾಂತಿ , ಸತ್ಯನಾರಾಯಣ ಪೂಜೆಗಳಲ್ಲಿ ಉಪಯೋಗಿಸುತ್ತಾರೆ. ಕೆಳಗೆ ನವ ಧಾನ್ಯಗಳ ಹೆಸರು, ಯಾವ ಗ್ರಹಕ್ಕೆ ಯಾವ ಧಾನ್ಯ, ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಎಂಬ ವಿವರಗಳಿವೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.ನವಗ್ರಹ ಧಾನ್ಯಗಳು / navagraha dhaanya /grains / seeds
 1. ಕಡಲೆ ಕಾಳು - Bengal gram (black Chickpeas)(North)
 2. ಉದ್ದಿನ ಕಾಳು - whole urad dal / black gram(SouthWest)
 3. ಹೆಸರು ಕಾಳು - Green gram/ whole moong bean(NorthEast)
 4. ಹುರಳಿ ಕಾಳು - Horse gram(NorthWest)
 5. ತೊಗರಿ ಬೆಳೆ - Toor Dal(South)
 6. ಭತ್ತ - Rice grain with husk (SouthEast)
 7. ಗೋಧಿ - wheat grain (Center)
 8. ಎಳ್ಳು - Black Sesame seeds (West)
 9. ಅವರೇಕಾಳು - Indian Flat beans/AvarekaaLu/Papdi lilva (East)
 10. ಬಟ್ಟಲು ಅಡಿಕೆ - Betel Nut /Arecanut (North East)
 11. ಬೆಲ್ಲದ ಅಚ್ಚು - 1 Jaggery Block/Mould /Jaggery square (North East)
 12. ನವಗ್ರಹ ಮಂಡಲ
  ದಿಕ್ಕು / Direction
  1. ಪೂರ್ವ - East
  2. ಪಶ್ಚಿಮ - West
  3. ಉತ್ತರ - North
  4. ದಕ್ಷಿಣ - South
  5. ವಾಯವ್ಯ - North West
  6. ಈಶಾನ್ಯ - North East
  7. ನೈಋತ್ಯ - South West
  8. ಆಗ್ನೇಯ - South East
  Related Links: Satyanarayana Pooja Vidhana

November 15, 2008

Kanakadasa Jayanthi / ಕನಕದಾಸ ಜಯಂತಿ

ಇಂದು ಕನಕದಾಸರ ಜಯಂತಿ. ಕನಕದಾಸರ ಹೆಸರು ಕನ್ನಡಿಗರಿಗೇನು ಹೊಸದಲ್ಲ. ಇವರ ಕೀರ್ತನೆಗಳನ್ನು ನಾವೆಲ್ಲ ಕೇಳಿಯೇ ಇರುತ್ತೀವಿ. ಕನಕದಾಸರು ಹಾಗು ಅವರ ಅಮೂಲ್ಯ ಕೊಡುಗೆಯ ಸ್ಮರಣೆಯಲ್ಲಿ ಈ ಲೇಖನವನ್ನು ಬರೆದಿದ್ದೀನಿ.

ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನು ತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.

ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.

ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.

ಇವರ ದೇವರನಾಮಗಳು ಕರ್ನಾಟಕ ಸಂಗೀತ ಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಹಾಡನ್ನು ಇಂದಿಗೂ ನಾವೆಲ್ಲ ಕೇಳುತ್ತೀವಿ, ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶ ಇಂದಿಗೂ ಪ್ರಸ್ತುತ.

ಕನಕದಾಸ ಜಯಂತಿ ಪ್ರಯುಕ್ತ ನನ್ನ ಭಕ್ತಿಗೀತೆ ಬ್ಲಾಗಿನಲ್ಲಿ ಕನಕದಾಸರ ಕೆಲವು ದೇವರನಾಮಗಳನ್ನು, ಸಾಹಿತ್ಯ ಹಾಗು ಸಂಗೀತ ಎರಡನ್ನೂ ಹಾಕಿದ್ದೀನಿ.

ಕನಕದಾಸರ ದೇವರನಾಮಗಳನ್ನು ಸಂಗೀತಗಾರರು ಸುಮುಧುರವಾಗಿ ಹಾಡಿದ್ದಾರೆ. ಕೆಲವು ಹಾಡುಗಳ ಧ್ವನಿ ಮುದ್ರಣ ಕೆಳಗಿದೆ. ಹಾಡನ್ನು ಕೇಳಲು ಹಾಡಿನ ಹೆಸರಿನ ಮೇಲೆ ಕ್ಲಿಕ್ ಮಾಡಿ.


ಇಂತಹ ಮಹನೀಯರ ಜನ್ಮ ದಿನವನ್ನು ಇಂದು ಆಚರಿಸುವುದಕ್ಕೆ ಹೆಮ್ಮೆ ಆಗುತ್ತೆ ಅಲ್ಲವೇ:)

Related Link:

Kanakadasara Devaranama with Lyrics at Bhakthigeetha

November 9, 2008

Utthana Dwadashi, Tulasi Ashtottara / ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ತುಳಸಿ ಅಷ್ಟೋತ್ತರ ಕೆಳಗಿದೆ


ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ


ತುಳಸಿ ವಂದನೆ - Audio link(Album)

Tulasi Stotras by Ashit desai

Tulasi Stotramaala Vol 1

Tulasi Stotramaala Vol 2


ತುಳಸಿ ಸ್ತುತಿ-deezer link is no longer available
ತುಳಸಿ ನಮಾಷ್ಟಕಂ - deezer link is no longer available
Songs on Tulasi: 1. Kalyanam Tulasi Kalyanam 2. Brundavanave Mandiravaagiha ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ. ಇದರೊಂದಿಗೆ ತುಳಸೀ ಗಿಡಕ್ಕೆ ಔಷಧೀಯ ಗುಣಗಳೂಇದೆ. ಕೆಮ್ಮು ನೆಗಡಿಗೆ , ಚರ್ಮ ವ್ಯಾಧಿಗಳಿಗೆ ಮನೆ ಮದ್ದು ಈ ತುಳಸೀ. ನೆಲ್ಲಿಕಾಯಿ ಕೂಡ ಔಷಧೀಯ ಗುಣ ಹೊಂದಿದೆ. ಇದು ವಾತ ಪಿತ್ತಗಳನ್ನು ಶಮನ ಮಾಡುತ್ತದೆ ಎಂದು ಹೇಳಿತ್ತಾರೆ. ಹಬ್ಬ ಆದ ನಂತರ ನಮ್ಮ ಮನೆಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮೊರಬ್ಬ ಮಾಡುತ್ತಾರೆ. ಉಪ್ಪಿನಕಾಯಿ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಾ ಇದೆ :)
Blog Widget by LinkWithin